ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತೀಯರು ಮಿಸ್ಡ್ ಕಾಲ್ ಸ್ಪೆಷಲಿಸ್ಟ್‌ಗಳಂತೆ..!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯರು ಮಿಸ್ಡ್ ಕಾಲ್ ಸ್ಪೆಷಲಿಸ್ಟ್‌ಗಳಂತೆ..!
ತಮ್ಮ ಮೊಬೈಲ್ ಫೋನ್‌ಗಳಿಂದ ಕರೆಗಳನ್ನು ಸ್ವೀಕರಿಸುವುದು ಮತ್ತು ಮಾಡುವುದಕ್ಕಿಂತಲೂ ಮಿಸ್ಡ್ ಕಾಲ್ ಕೊಡುವುದು, ಸ್ವೀಕರಿಸುವುದರಲ್ಲಿ ಭಾರತೀಯರು ಜಗತ್‌ಪ್ರಸಿದ್ಧರು ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಅಲ್ಲದೆ ಒಂದಕ್ಕಿಂತ ಹೆಚ್ಚು ಸಿಮ್‌ಗಳನ್ನು ಬಳಸುವವರ ಸಂಖ್ಯೆ ಕಡಿಮೆ, ಮಹಿಳೆಯರು ಸಾರ್ವಜನಿಕ ದೂರವಾಣಿಗಳಿಗೇ ಹೆಚ್ಚು ಪ್ರಾಶಸ್ತ್ಯ ನೀಡುವುದು ಮುಂತಾದ ಹಲವು ವಿಶಿಷ್ಠ ಅಂಶಗಳು ದೂರವಾಣಿ ಬಳಸುವ ವ್ಯವಸ್ಥೆಯ ಕೆಳಹಂತದವರಲ್ಲಿ ನಡೆಸಿದ ಈ ಅಧ್ಯಯನದಿಂದ ಹೊರ ಬಂದಿದೆ.

ಜತೆಗೆ ಗ್ರಾಹಕರು ಕಂಡುಕೊಂಡಿರುವ ಕೆಲವು ವಿಶಿಷ್ಟ ವಿಧಾನಗಳನ್ನೂ ಈ ಸಮೀಕ್ಷೆ ವರದಿ ಮಾಡಿದೆ. ಮೋಸ ಮಾಡುವ ಗಂಡಂದಿರನ್ನು ಪತ್ತೆ ಹಚ್ಚಲು ಹೆಂಡತಿಯರು ಮೊಬೈಲ್‌ ದಾಖಲೆಗಳನ್ನು ಪರಿಶೀಲಿಸುವುದು, ದೂರದಲ್ಲಿ ಕೆಲಸ ಮಾಡುವ ಕಾರ್ಮಿಕನೋರ್ವ ತನ್ನ ಕುಟುಂಬಕ್ಕೆ ಹಣ ವರ್ಗಾಯಿಸಲು ಸ್ಥಳೀಯ ವ್ಯಾಪಾರಿಗೆ ತನ್ನ ಮೊಬೈಲ್‌ನಿಂದ ಮೌಲ್ಯವನ್ನು ವರ್ಗಾಯಿಸುವುದು ಮುಂತಾದ ಹೊಸ ಅನ್ವೇಷನೆಗಳನ್ನೂ ಗ್ರಾಹಕರು ಕಂಡುಕೊಂಡಿದ್ದಾರೆ.

ವಿಶ್ವದಲ್ಲೇ ಅತೀ ಹೆಚ್ಚು ಮಿಸ್ಡ್ ಕಾಲ್‌ಗಳ ಬಳಕೆ ಮಾಡುವವರು ಭಾರತೀಯರು ಎಂದು ಈ ಸಮೀಕ್ಷೆ ತಿಳಿಸಿದ್ದು, ಅದರ ವಿವಿಧ ಉಪಯೋಗಗಳನ್ನೂ ವಿವರಿಸಿದೆ. ಮತ್ತೊಬ್ಬ ವ್ಯಕ್ತಿ ನೆಟ್‌ವರ್ಕ್ ವ್ಯಾಪ್ತಿಯಲ್ಲೇ ಇದ್ದಾನೆಯೇ ಅಥವಾ ಮತ್ತೊಂದು ಕಡಿಮೆ ವೆಚ್ಚದಲ್ಲಿ ಕರೆ ಮಾಡಬಹುದಾದ ಸಿಮ್‌ನ್ನು ಕಾರ್ಯಗತಗೊಳಿಸುವಂತೆ ಸಂಜ್ಞೆ ಕಳುಹಿಸಲು ಮಿಸ್ಡ್ ಕಾಲ್‌ಗಳನ್ನು ಉಪಯೋಗಿಸಲಾಗುತ್ತದೆ. ಈ ರೀತಿ ಎಸ್‌ಎಂಎಸ್‌ನಂತೆ ಮಿಸ್‌ ಕಾಲ್‌ಗಳನ್ನು ಸಮಾನ ಪ್ರಮಾಣದಲ್ಲಿ ಬಳಸುವವರ ವಯಸ್ಸು 35ರೊಳಗಿರುವುದೂ ಸಂಶೋಧನೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

ಭಾರತೀಯ ಮಹಿಳೆಯರು ಈಗಲೂ ಸಾರ್ವಜನಿಕ ದೂರವಾಣಿ ಕೇಂದ್ರಗಳಿಗೆ ಹೆಚ್ಚಿನ ಒತ್ತು ಕೊಡುತ್ತಿರುವುದು ಆಸಕ್ತಿದಾಯಕ ವಿಚಾರ. ಸಂಭಾಷಣೆಯ ಸಂದರ್ಭದಲ್ಲಿ ಸುತ್ತುವರಿದ ತಡೆಗಳಿರುವುದರಿಂದ ಸುರಕ್ಷತೆ ಮತ್ತು ಖಾಸಗಿತನ ಸಿಗುತ್ತದೆ; ಜತೆಗೆ ಕುಳಿತುಕೊಳ್ಳಲೂ ಜಾಗ ಸಿಗುತ್ತದೆ ಎಂಬುದು ಇದಕ್ಕೆ ನೀಡಲಾಗಿರುವ ಕಾರಣ.

ಮನೆಗಳಲ್ಲಿ ಗೃಹಿಣಿಯರು ಅದರಲ್ಲೂ ಖಾಸಗಿತನಕ್ಕಾಗಿ ಹಾತೊರೆಯುವವರು ಹೆಚ್ಚಾಗಿ ತಮ್ಮ ಹೆತ್ತವರು ಮತ್ತು ಒಡ ಹುಟ್ಟಿದವರ ಜತೆ ದೂರವಾಣಿ ಮಾತುಕತೆ ನಡೆಸಲು ಆಸಕ್ತಿ ತೋರಿಸುತ್ತಾರೆ.

ಮನೆಗಳಲ್ಲಿ ದೂರವಾಣಿ ಹೊಂದಿಲ್ಲದವರಿಗೆ ಅಂಗಡಿದಾರರು ಸಂದೇಶಗಳನ್ನು ಪಡೆದುಕೊಳ್ಳುವುದು, ಹಣದ ಕೊರತೆಯಿರುವವರಿಗೆ ಸಾಲದ ರೂಪದಲ್ಲಿ ದೂರವಾಣಿ ಸಂಭಾಷಣೆಗೆ ಅವಕಾಶ ನೀಡುವುದು ಮುಂತಾದುವುದು ಸಾಮಾನ್ಯ ಎಂದೂ ಸಮೀಕ್ಷೆ ತಿಳಿಸಿದೆ.

ಆರು ದೇಶಗಳಲ್ಲಿ 'ಲಿರ್ನೇಷಿಯಾ' ಎಂಬ ಸಂಸ್ಥೆಯು ನಡೆಸಿದ ದೂರವಾಣಿ ಸಂಬಂಧಿತ ಸಮೀಕ್ಷೆಯಲ್ಲಿ ಈ ಎಲ್ಲಾ ವಿಚಾರಗಳು ಬಹಿರಂಗಗೊಂಡಿವೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಫಿಲಿಫೈನ್ಸ್ ಮತ್ತು ಥಾಯ್ಲೆಂಡ್‌ಗಳ 11 ಸಾವಿರ ಮಂದಿಯನ್ನು ಇದಕ್ಕಾಗಿ ಸಂಸ್ಥೆಯು ಸಂಪರ್ಕಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಸತ್ಯಂ' ಹಗರಣ ರೂವಾರಿಗಳಿಗೆ ಮಂಪರು ಪರೀಕ್ಷೆ
ಇನ್ಫೋಸಿಸ್ ತ್ರೈಮಾಸಿಕ ವರದಿ: ಶೇ.17ರ ಪ್ರಗತಿ
ಸತ್ಯಂ ಹಗರಣ: ಮಂಪರು ಪರೀಕ್ಷೆಗೆ ನ್ಯಾಯಾಲಯ ಸಮ್ಮತಿ
ರೈಲ್ವೇ ನೇಮಕಾತಿಗೆ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ?
ಕಚ್ಚಾ ತೈಲ ಬೆಲೆ ಇಳಿದಲ್ಲಿ ಭಾರತದಲ್ಲೂ ಇಳಿಕೆ
ಗೊಂದಲದಲ್ಲಿ ಬಿಎಂಡಬ್ಲ್ಯೂ