| ಠಾಕ್ರೆ ಯಮರಾಜನನ್ನು ಜಯಿಸಲಿ: ಬಚ್ಚನ್ ಹಾರೈಕೆ | | | ಮುಂಬೈ, ಗುರುವಾರ, 9 ಜುಲೈ 2009( 20:21 IST ) | | | |
| | |
| ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರು ಯಮರಾಜನನ್ನು ಸೋಲಿಸಲಿ ಎಂದು ಬಿಗ್ ಬಿ ಅಮಿತಾಭ್ ಬಚ್ಚನ್ ಹಾರೈಸಿದ್ದಾರೆ. ತೀವ್ರ ಹೊಟ್ಟೆನೋವಿನಿಂದಾಗಿ ವೈದ್ಯರಿಂದ ಸಂಪೂರ್ಣ ವಿಶ್ರಾಂತಿಗೆ ಸಲಹೆ ಪಡೆದಿರುವ ಅಮಿತಾಭ್, ಕಳೆದ ವಾರ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬಾಳಾ ಠಾಕ್ರೆಯವರ ಆರೋಗ್ಯ ವಿಚಾರಿಸಿದ್ದರು. ಠಾಕ್ರೆ ಪುತ್ರ ಉದ್ಧವ್ ಅವರಿಂದ ಬಾಳಾ ಠಾಕ್ರೆ ಆರೋಗ್ಯ ವಿಚಾರಿಸುತ್ತಿರುವ ಬಚ್ಚನ್, "ಬಾಳಾ ಸಾಹೇಬ್ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರು ಆರೋಗ್ಯವಂತರಾಗಿರಲಿ ಎಂದು ಹಾರೈಸುತ್ತೇನೆ" ಎಂಬುದಾಗಿ ಅಮಿತಾಭ್ ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ.1982 ರಲ್ಲಿ ತಾವು ಮಾರಣಾಂತಿಕ ಅಪಘಾತವೊಂದರಲ್ಲಿ ಸಾವಿನ ಅಂಗಳಕ್ಕೆ ಹೋಗಿ ಬಂದ ಬಳಿಕ ಬಾಳಾ ಠಾಕ್ರೆ ರಚಿಸಿದ್ದ ವ್ಯಂಗ್ಯಚಿತ್ರಗಳನ್ನು ಅಮಿತಾಭ್ ನೆನಪಿಸಿಕೊಂಡಿದ್ದಾರೆ. ಈ ಕಾರ್ಟೂನಿನಲ್ಲಿ ಬಾಳಾ ಸಾಹೆಬ್ ಅವರು, ಯಮರಾಜ ತಾವಿದ್ದ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಬಂದಿದ್ದಾಗ, ಆತನ ವಿರುದ್ಧ ಯಶಸ್ವಿಯಾಗಿ ಸೆಣಸಾಡಿದ ಚಿತ್ರಣವುಳ್ಳ ಕಾರ್ಟೂನ್ ರಚಿಸಿದ್ದರು.ಠಾಕ್ರೆ ಯಾವತ್ತೂ ಯಮರಾಜನನ್ನು ಸೋಲಿಸಲಿ ಎಂದು ಬಚ್ಚನ್ ಬರೆದಿದ್ದಾರೆ. |
| |
| | |
| | | |
|
| | |
|
|
| | |
|
|
| |
|  | |