ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಐದರ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐದರ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರ
ಐದರ ಹರೆಯದ ಬಾಲೆಯೊಬ್ಬಳ ಮೇಲೆ ಅಪರಿಚಿತ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಅಮಾನವೀಯ, ಆಘಾತಕಾರಿ ಘಟನೆಯು ನಗರದ ಹೊರವಲಯದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಈಗತ್ತೂರು ಗ್ರಾಮದಲ್ಲಿ ಈ ದುರ್ಘಟನೆಯು ಭಾನುವಾರ ನಸುಕಿಗೂ ಮುಂಚಿನ ಅವಧಿಯಲ್ಲಿ ಸಂಭವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಆಂಧ್ರ ಪ್ರದೇಶದವರಾಗಿರುವಬಾಲಕಿಯ ತಂದೆ ಮೋಹನ್ ರಾವ್ ಅವರು ಬಾಲಕಿಯನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದರಾದರೂ, ಬಾಲಕಿಯು ಮೈನರ್ ಹಾಗೂ ಇದೊಂದು ಪೊಲೀಸ್ ಪ್ರಕರಣವಾಗಿರುವ ಕಾರಣ ಆಕೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಬಳಿಕ ಆಕೆಯನ್ನು ಸರ್ಕಾರಿ ಮಕ್ಕಳ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣವನ್ನು ಕೇಳಂಬಾಕಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗತ್ತೂರಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳು ಹೆಚ್ಚು ನಡೆಯುತ್ತಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯ ಆಂಧ್ರದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. "ನಾವು ಮಗುವಿನ ಹತ್ತಿರದ ಸಂಬಂಧಿಗಳನ್ನು ತನಿಖೆ ನಡೆಸುತ್ತಿದ್ದೇವೆ. ಇಲ್ಲಿ ಆಂಧ್ರ ಕಾರ್ಮಿಕರ ಸಂಖ್ಯೆಯು ಸುಮಾರು ಮೂರು ಸಾವಿರಕ್ಕಿಂತ ಹೆಚ್ಚಿದೆ" ಎಂಬುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅರುಣಾಚಲ ಯೋಜನೆಗಾಗಿ ಎಡಿಬಿ ನಿಧಿಗೆ ಚೀನ ಅಡ್ಡಿ: ಕೃಷ್ಣ
ವರುಣ್ ಭದ್ರತೆ: ಚಿದು ಭೇಟಿ ತೃಪ್ತಿಕರವಾಗಿಲ್ಲ- ಸುಷ್ಮಾ
ಸತಿ-ಪತಿಗಳಾದ 3 ಜೋಡಿ ಪತಿ-ಪತಿಗಳು!
ಹಜ್ ಯಾತ್ರಿಕರಿಂದ ಹೆಚ್ಚುವರಿ ಹಣ ಕೇಳಿದ ಸಮಿತಿ
ಮಧುರೆಯಲ್ಲೊಂದು 'ಚೀನಿಂಡಿಯಾ' ವಿವಾಹ
ಸಲಿಂಗಕಾಮ: ಸರ್ಕಾರಕ್ಕೆ ನೋಟೀಸು ನೀಡಿದ ಸು,ಕೋ