ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಧುರೆಯಲ್ಲೊಂದು 'ಚೀನಿಂಡಿಯಾ' ವಿವಾಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಧುರೆಯಲ್ಲೊಂದು 'ಚೀನಿಂಡಿಯಾ' ವಿವಾಹ
ದೇವಾಲಯ ನಗರಿ ಮಧುರೈ ಚೀನಿಂಡಿಯಾ ವಿವಾಹವೊಂದಕ್ಕೆ ಸಾಕ್ಷಿಯಾಯಿತು. ಸ್ಥಳೀಯ ಯೋಗ ಶಿಕ್ಷಕ ಶಿವಾನಂದಮ್ ಅವರು ಚೀನದ ಯೋಗ ತಜ್ಞೆ ಉಚಿನ್ ಮೇಯಿ ಎಂಬವರಿಗೆ ತಾಳಿ ಕಟ್ಟಿ ಸಪ್ತಪದಿ ತುಳಿದರು.

ಲಕ್ಷ್ಮಿ ಎಂಬುದಾಗಿ ಮರುನಾಮಕರಣಗೊಂಡ 26ರ ಹರೆಯದ ಮೇಯಿ 25ರ ಹರೆಯದ ಶಿವಾನಂದಮ್ ಅವರ ಪ್ರೇಮಪಾಶಕ್ಕೆ ಸಿಲುಕಿದ್ದರು. ಶಿವಾನಂದಮ್ ಅವರು ಮೇಯಿ ತವರೂರಾದ ಗೌನ್‌ಗ್ಜೋವು (ಹಾಂಕಾಂಗ್‌ನಿಂದ 120 ಕಿಮಿ ವಾಯುವ್ಯಕ್ಕೆ) ಎಂಬಲ್ಲಿಗೆ ಯೋಗ ಪ್ರಚಾರಕ್ಕಾಗಿ ನಾಲ್ಕು ವರ್ಷಗಳ ಹಿಂದೆ ಪ್ರವಾಸ ತೆರಳಿದ್ದಾಗ ಅಸ್ವಸ್ಥರಾಗಿದ್ದರು. ಆ ವೇಳೆ ಮೇಯಿ, ಶಿವಾನಂದಮ್ ಅವರನ್ನು ಉಪಚರಿಸಿದ್ದು ಅವರೊಳಗೆ ಪ್ರೀತಿ ಅಂಕುರವಾಗುವಾಗುವಂತೆ ಮಾಡಿತ್ತು.

ನಾಲ್ಕು ವರ್ಷಗಳ ಒಡನಾಟದ ಬಳಿಕ ಅವರು 'ಚೀನಿಂಡಿಯಾ' ವಿವಾಹಕ್ಕೆ ನಿರ್ಧರಿಸಿದ್ದರು. ಚೀನಿಂಡಿಯಾ ಎಂಬ ಶಬ್ದವನ್ನು ಹುಟ್ಟು ಹಾಕಿರುವುದು ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್. ವಿಶ್ವದ ಎರಡು ಬಲಾಢ್ಯ ರಾಷ್ಟ್ರಗಳಾದ ಭಾರತ ಮತ್ತು ಚೀನಗಳು ಪರಸ್ಪರ ಸುದೃಢತೆಗಾಗಿ ಜನತೆ-ಜನತೆಯ ಸಂಪರ್ಕ ಕುರಿತು ಕಾರ್ಯವೆಸಗುವ ಕುರಿತಂತೆ ಅವರು 2005ರಲ್ಲಿ 'ಮೇಕಿಂಗ್ ಸೆನ್ಸ್ ಆಫ್ ಚೀನಿಂಡಿಯಾ' ಎಂಬ ಪುಸ್ತಕ ಬರೆದಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಲಿಂಗಕಾಮದ ವಿರುದ್ಧ ಅರ್ಜಿ ಇಂದು ಸುಪ್ರೀಂ ವಿಚಾರಣೆ
ನ್ಯಾಯಾಧೀಶರಿಗೆ ಕಪಾಳ ಮೋಕ್ಷಮಾಡಿದ ವಕೀಲ
ಕಳ್ಳಭಟ್ಟಿ ದುರಂತಕ್ಕೆ 32 ಬಲಿ
ಕರಾವಳಿ ರಾಜ್ಯಗಳಿಗೆ ಶೀಘ್ರ ಐಡಿ ಕಾರ್ಡ್‌ಗಳು
ಫ್ರಾನ್ಸ್‌ನಲ್ಲಿ ಸಾವರ್ಕರ್ ಪ್ರತಿಮೆ ಸ್ಥಾಪನೆಗೆ ಒತ್ತಾಯ
ತಮಿಳುನಾಡಿನ ಈ ಭಿಕ್ಷಾಧಿಪತಿ 14 ಲಕ್ಷಾಧಿಪತಿ!