ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ವರದಿ ಬಹಿರಂಗ; ಆಂಧ್ರವನ್ನು 3 ತುಂಡು ಮಾಡಿ (Telangana | Chidambaram | Andhra Pradesh | Congress)
Bookmark and Share Feedback Print
 
ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಕುರಿತ ಬಹುನಿರೀಕ್ಷಿತ ಶ್ರೀಕೃಷ್ಣ ಸಮಿತಿ ಬಹಿರಂಗವಾಗಿದೆ. ಅಖಂಡ ಆಂಧ್ರಪ್ರದೇಶದ ಪರ ಸಮಿತಿ ತನ್ನ ಒಲವನ್ನು ವ್ಯಕ್ತಪಡಿಸಿದೆ. ಜತೆಗೆ ಆಂಧ್ರವನ್ನು ವಿಭಜನೆ ಮಾಡುವುದಿದ್ದರೆ, ಸೀಮಾಂಧ್ರ ಮತ್ತು ತೆಲಂಗಾಣ ಎಂಬ ಎರಡು ಪ್ರತ್ಯೇಕ ರಾಜ್ಯಗಳನ್ನು ಮಾಡಬೇಕು ಮತ್ತು ಹೈದರಾಬಾದ್‌ಗೆ ಕೇಂದ್ರಾಡಳಿತ ವಿಧಿಸಬೇಕು ಎಂದು ವರದಿ ಹೇಳಿದೆ.

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಮತ್ತು ಅಖಂಡ ಆಂಧ್ರ ಬೇಡಿಕೆಗಳ ಕುರಿತು ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ಶ್ರೀಕೃಷ್ಣ ನೇತೃತ್ವದ ಸಮಿತಿಗೆ ಕೇಂದ್ರ ಸರಕಾರ ಸೂಚಿಸಿತ್ತು. ಈ ಸಂಬಂಧ 800 ಪುಟಗಳ ವರದಿಯನ್ನು ಈಗ ಕೇಂದ್ರ ಸರಕಾರ ಬಿಡುಗಡೆ ಮಾಡಿದೆ.

ತೆಲಂಗಾಣ ರಚನೆಯ ಪರ ಅಥವಾ ವಿರೋಧ ನೀತಿಗಳನ್ನು ಸ್ಪಷ್ಟವಾಗಿ ತಿಳಿಸುವ ಬದಲು ಸಮಿತಿಯು ಆರು ಆಯ್ಕೆಗಳನ್ನು ಸಂಬಂಧಪಟ್ಟವರ ಮುಂದಿಟ್ಟಿದೆ. ಯಾವುದೇ ಶಿಫಾರಸುಗಳನ್ನು ಈ ಸಮಿತಿ ಮಾಡದೇ ಇರುವುದು ವಿಶೇಷ. ಅವುಗಳು ಹೀಗಿವೆ:
WD

ಆಯ್ಕೆ 1: ಆರ್ಥಿಕ ಹಿತದೃಷ್ಟಿ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ಅಖಂಡ ಆಂಧ್ರಪ್ರದೇಶವನ್ನು ಮುಂದುವರಿಯಲು ಬಿಡಿ. ಹಾಗೆ ಮಾಡಿದಲ್ಲಿ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಸ್ಥಾನವನ್ನು ತೆಲಂಗಾಣ ಪ್ರಾಂತ್ಯಕ್ಕೆ ನೀಡಬಹುದು.

ಆಯ್ಕೆ 2: ಆಂಧ್ರಪ್ರದೇಶ ರಾಜ್ಯವನ್ನು ಸೀಮಾಂಧ್ರ (ಆಂಧ್ರ ಕರಾವಳಿ ಮತ್ತು ರಾಯಲಸೀಮೆ) ಮತ್ತು ತೆಲಂಗಾಣ ಎಂದು ವಿಭಜಿಸಿ.

ಆಯ್ಕೆ 3: ಹೈದರಾಬಾದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ, ರಾಜ್ಯದ ಉಳಿದ ಭಾಗವನ್ನು ರಾಯ ತೆಲಂಗಾಣ ಮತ್ತು ಆಂಧ್ರ ಕರಾವಳಿ ಎಂದು ವಿಭಜನೆ ಮಾಡಿ. ಹೀಗೆ ಪ್ರತ್ಯೇಕಗೊಂಡ ಎರಡೂ ರಾಜ್ಯಗಳಿಗೆ ತಮ್ಮದೇ ಆದ ಸ್ವಂತ ರಾಜಧಾನಿಗಳಿರುತ್ತವೆ.

ಆಯ್ಕೆ 4: ಆಂಧ್ರಪ್ರದೇಶದಿಂದ ಸೀಮಾಂಧ್ರ ಮತ್ತು ತೆಲಂಗಾಣ ಎಂದು ಪ್ರತ್ಯೇಕ ರಾಜ್ಯಗಳನ್ನು ಸೃಷ್ಟಿಸಿ. ಹೈದರಾಬಾದನ್ನು ಎರಡೂ ರಾಜ್ಯಗಳಿಗೆ ಸೇರಿಸುವ ಬದಲು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ.

ಆಯ್ಕೆ 5: ಸೀಮಾಂಧ್ರ ಮತ್ತು ತೆಲಂಗಾಣ ರಾಜ್ಯಗಳನ್ನು ಸೃಷ್ಟಿಸಿ, ತೆಲಂಗಾಣಕ್ಕೆ ಹೈದರಾಬಾದನ್ನು ರಾಜಧಾನಿಯನ್ನಾಗಿ ಮಾಡಿ.

ಆಯ್ಕೆ 6: ತೆಲಂಗಾಣ ಪ್ರಾಂತ್ಯದ ಅಭಿವೃದ್ಧಿಯ ಉಸ್ತುವಾರಿ ನೋಡಿಕೊಳ್ಳುವ ತೆಲಂಗಾಣ ಪರಿಷತ್ತನ್ನು ರಚನೆ ಮಾಡಿ, ಅಖಂಡ ಆಂಧ್ರಪ್ರದೇಶಕ್ಕೆ ಒತ್ತು ನೀಡುವುದು.

ವರದಿ ಬಹಿರಂಗಕ್ಕೂ ಮುನ್ನ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಕರೆದಿದ್ದ ಸಭೆಗೆ ಸರ್ವಪಕ್ಷಗಳು ಹಾಜರಾಗಿದ್ದವು. ಕೆ. ಚಂದ್ರಶೇಖರ ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್), ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಬಿಜೆಪಿ ಹೊರತುಪಡಿಸಿ ಆಂಧ್ರದ ಇತರೆಲ್ಲ ರಾಜಕೀಯ ಪಕ್ಷಗಳ ತಲಾ ಇಬ್ಬಿಬ್ಬರು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿದಂಬರಂ, ಶ್ರೀಕೃಷ್ಣ ಸಮಿತಿಯ ವರದಿಯನ್ನು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಜನತೆ ಸ್ವಾಗತಿಸುತ್ತಾರೆ ಎಂಬ ಭರವಸೆ ನನಗಿದೆ. ಸರಕಾರ ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಮತ್ತೊಮ್ಮೆ ರಾಜಕೀಯ ಪಕ್ಷಗಳ ಜತೆ ಸಮಾಲೋಚನೆ ನಡೆಸಲಾಗುತ್ತದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ