ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶ್ರಾವಣ ಚಿತ್ರದಲ್ಲಿ ವಿಜಯ ರಾಘವೇಂದ್ರ (Shravana | Vijaya Raghavendra | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ವಿಜಯ ರಾಘವೇಂದ್ರ ಇದೀಗ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಐಪಿಸಿ ಸೆಕ್ಷನ್ 300, ಗೋಕುಲ ಚಿತ್ರಗಳ ನಂತರ ವಿಜಯ ರಾಘವೇಂದ್ರ ಇದೀಗ ಶ್ರಾವಣ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ಹೊಸ ನಟಿ ಗಾಯತ್ರಿ ಆಯ್ಕೆಯಾಗಿದ್ದಾರೆ.
ವಿಜಯ ರಾಘವೇಂದ್ರ ಅವರ್ನನು ಹೊರತುಪಡಿಸಿದರೆ ಚಿತ್ರದಲ್ಲಿ ಬಹುತೇಕ ನಟ ನಟಿಯರು, ತಂತ್ರಜ್ಞರು ಎಲ್ಲರೂ ಹೊಸಬರೇ. ಭುವನ್, ಸಂದೀಪ್ ಎಂಬ ಹೊಸ ನಟರೂ ಈ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.

ಶ್ರಾವಣ ಚಿತ್ರ ಒಂದು ಸಂಪೂರ್ಣ ಕುಟುಂಬ ಸಮೇತರಾಗಿ ನೋಡುವ ಮನರಂಜನಾ ಚಿತ್ರವಂತೆ. ಇದರಲ್ಲಿ ವಿಜಯ್ ರಾಘವೇಂದ್ರ ಅವರು ನಿರುದ್ಯೋಗಿ ಯುವಕನ ಪಾತ್ರ ಮಾಡುತ್ತಿದ್ದಾರಂತೆ. ಚಿತ್ರವನ್ನು ಈಗಾಗಲೇ ಈ ಸಂಭಾಷಣೆ ಎಂಬ ಚಿತ್ರ ನಿರ್ದೇಶಿಸಿ ಅನುಭವವಿರುವ ಬಿ.ಎಸ್.ರಾಜಶೇಖರ್ ನಿರ್ದೇಶಿಸುತ್ತಿದ್ದಾರೆ. ಛಾಯಾಗ್ರಹಣ ಜವಾಬ್ದಾರಿಯನ್ನು ಕೆ. ವಾಸುದೇವ್ ಹೊತ್ತಿದ್ದು, ಕಾರ್ತಿಕ್ ಭೂಪತಿ ಸಂಗೀತ ನಿರ್ದೇಶಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರಾವಣ, ವಿಜಯ ರಾಘವೇಂದ್ರ, ಕನ್ನಡ ಸಿನಿಮಾ