ಸ್ವಯಂವರ ಚಿತ್ರಕ್ಕೆ ಜನರ ಪ್ರತಿಕ್ರಿಯೆ ಕಂಡು ಥ್ರಿಲ್ಲಾದ ಶರ್ಮಿಳಾ
MOKSHA
ಮೋಹಕ ಸುಂದರಿ ಶರ್ಮಿಳಾ ಮಾಂಡ್ರೆಗೆ ಸಿಕ್ಕಾಪಟ್ಟೆ ಥ್ರಿಲ್ ಆಗಿದೆಯಂತೆ. ಹಿಂದಿಯ ಮುಜ್‌ಸೇ ಶಾದಿ ಕರೋಗೆ ಚಿತ್ರದ ರಿಮೇಕ್ ಆಗಿರುವ ಸ್ವಯಂವರ ಚಿತ್ರಕ್ಕೆ ಪತ್ರಿಕೆಗಳಲ್ಲಿ ಹಾಗೂ ಚಿತ್ರೋದ್ಯಮದಿಂದ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಕಂಡು ಶರ್ಮಿಳಾಗೆ ಯದ್ವಾತದ್ವಾ ಖುಷಿಯಾಗಿದೆಯಂತೆ. ಬಹಳ ಕಾಲದ ನಂತರ ನಾನು ಹೀಗೊಂದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವುದಕ್ಕೆ ನಿಜಕ್ಕೂ ಅದ್ಭುತ ಖುಷಿಯಾಗಿದೆ ಎಂದು ಶರ್ಮಿಳಾ ಮಾತು.
ಕೆಲವು ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆ ಬಂದಿದೆ. ಈ ಚಿತ್ರದ ಶೂಟಿಂಗ್ ತುಂಬ ಕೂಲಾಗಿ ಯಾವುದೇ ಟೆನ್ಶನ್ ಇಲ್ಲದೆ ಮುಗಿದಿತ್ತು. ನಾನು ಶೂಟಿಂಗ್‌ನಲ್ಲೂ ತುಂಬಾ ಎಂಜಾಯ್ ಮಾಡಿದ್ವಿ. ಕಿಟ್ಟಿ, ದಿಗಂತ್, ನಾನು, ರಂಗಾಯಣ ರಘು ಸರ್ ಎಲ್ಲರೂ ಮಸ್ತಾಗಿ ಹಾಳು ಹರಟೆ ಹೊಡೀತಿದ್ವಿ. ಅವೆಲ್ಲ ಸುಂದರ ನೆನಪುಗಳು ಎಂದು ಶರ್ಮಿಳಾ ಹೇಳುತ್ತಾರೆ.
ಚಿತ್ರ ನೋಡಿದ ಜನರಿಂದ ಎಲ್ಲ ಕಲಾವಿದರ ಬಗ್ಗೆಯೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಇಬ್ಬರೂ ನಾಯಕರೊಂದಿಗೆ ನನಗೆ ಚಿತ್ರದಲ್ಲಿ ಉತ್ತಮ ಪಾತ್ರದ ಹರಿವಿದೆ. ನಾವೆಲ್ಲರೂ ಸೇರಿ ಒಂದು ಉತ್ತಮ ಮನೋರಂಜನೆಯ ಚಿತ್ರ ಮಾಡಿದ್ದೇವೆ ಎಂದು ನಾನು ಹೇಳಬಲ್ಲೆ. ನಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಬೇಕು. ಚಿತ್ರಕ್ಕೆ ಮುಂದಿನ ದಿನವೂ ಹೀಗೆಯೇ ಉತ್ತಮ ಪ್ರತಿಕ್ರಿಯೆ ಸಿಗಲಿ ಎಂದೇ ಆಶಿಸುತ್ತೇನೆ ಎನ್ನುತ್ತಾರೆ ಶರ್ಮಿಳಾ.