ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೃಷ್ಣನ್ ಲವ್ ಸ್ಟೋರಿ: ನಿರ್ದೇಶಕ ಶಶಾಂಕ್ ಬಿಚ್ಚು ಮಾತು (Krishnan Love Story | Shashank | Moggina Manasu | Radhika Pandit | Ajay)
ಅಜಯ್ ಹಾಗೂ ರಾಧಿಕಾ ಪಂಡಿತ್ ನಿರ್ದೇಶನದ ಕೃಷ್ಣನ್ ಲವ್ ಸ್ಟೋರಿ ಇದೇ ಶುಕ್ರವಾರ (ಜೂ.18) ತೆರೆಗೆ ಬರುತ್ತಿದೆ. ಮೊಗ್ಗಿನ ಮನಸು ಚಿತ್ರದ ಮೂಲಕ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಬಾಚಿಕೊಂಡ ಶಶಾಂಕ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಗರಿಗೆದರಿಸಿದ್ದಾರೆ.
ಚಿತ್ರದ ನಿರ್ದೇಶಕ ಶಶಾಂಕ್ ಅವರು ಹೇಳುವ ಪ್ರಕಾರ ಈ ಚಿತ್ರದ ಹಾಡಿಗಾಗಿ ತಲೆ ಕೆಡಿಸಿಕೊಂಡಷ್ಟು ತಾವು ಇನ್ಯಾವ ಚಿತ್ರಕ್ಕೂ ಕೆಡಿಸಿಕೊಂಡಿಲ್ಲ. ಸಾಕಷ್ಟು ಉತ್ತಮ ಹಾಡು ನೀಡುವ ಉದ್ದೇಶಕ್ಕೆ ತೀರಾ ಗಂಭೀರವಾಗಿ ಯತ್ನಿಸಿದ್ದೇನೆ ಎನ್ನುತ್ತಾರೆ.
ಚಿತ್ರದ ಪ್ರತಿ ಸನ್ನಿವೇಶಕ್ಕೂ ಸಂಗೀತ ಅತ್ಯಂತ ಅಗತ್ಯ ಎನಿಸಿತ್ತು. 'ಸಾಫ್ಟ್ ಮೆಲೊಡಿ' ಟ್ರೆಂಡನ್ನು ಇಲ್ಲಿ ಮುರಿಯಬೇಕು ಎಂದುಕೊಂಡಿದ್ದೆ. ಇದಕ್ಕಾಗಿಯೇ ನಾನು ಹಾಗೂ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ತಿಂಗಳುಗಳ ಕಾಲ ಹಾಡಿನ ಟ್ಯೂನ್ ಆಯ್ಕೆಗೆ ಸಮಯ ತೆಗೆದುಕೊಂಡೆವು. ಕೆಲವೊಮ್ಮೆ ಟ್ಯೂನ್ ಸಿಗದಿದ್ದಾಗ ಮೊದಲು ಹಾಡಿನ ಸಾಹಿತ್ಯ ಬರೆದು ನಂತರ ಟ್ಯೂನ್ ಹಾಕಿದೆವು. ಕೊನೆಗೂ ನಮ್ಮ ಯತ್ನ ಯಶ ಕಂಡಿತು ಎನ್ನುತ್ತಾರೆ.
ಸಾಹಿತ್ಯದ ವಿಷಯದಲ್ಲಿ ಜಯಂತ್ ಕಾಯ್ಕಿಣಿ ನನ್ನ ಆಸೆಯಂತೆ ಅವರ ಎಂದಿನ ಶೈಲಿಯಿಂದ ಹೊರಬಂದು ಬೇರೆಯದೇ ಆದ ಶೈಲಿಯ ಹಾಡು ರಚಿಸಿಕೊಟ್ಟಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಸಹ ಒಂದು ಉತ್ತಮ ಮಾಸ್ ಹಾಡು ಬರೆದುಕೊಟ್ಟಿದ್ದಾರೆ. ಚಿತ್ರದ ಹಾಡುಗಳು ಎಲ್ಲೆಡೆ ಜನಪ್ರಿಯವಾಗಿದ್ದು, ಚಿತ್ರ ಬಿಡುಗಡೆ ನಂತರ ಇನ್ನಷ್ಟು ಪ್ರಗತಿ ಕಾಣಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.