ಆಪ್ತ ಚಿತ್ರದ ಐವರು ನಾಯಕಿಯರಲ್ಲಿ ಒಬ್ಬರು ಪೂನಂ. ಯಾರಪ್ಪಾ ಈ ಪೂನಂ ಎಂದು ತಲೆಕೆಡಿಸಬೇಡಿ. ಈಕೆ ಅಂದೊಮ್ಮೆ ಕನ್ನಡದ್ಲಲಿ ಕಿಚ್ಚ ಸುದೀಪ್ ಜೊತೆಗೆ ವಾಲಿ ಚಿತ್ರದಲ್ಲಿ ನಟಿಸಿ ಹೋಗಿದ್ದರು. ಹೌದು. ಅದೇ ಪೂನಂ ಸುದರ್ಘ ಸಮಯದ ನಂತರ ಮತ್ತೆ ಬಂದಿದ್ದಾರೆ. ಇಷ್ಟು ದಿನ ಎಲ್ಲಿದ್ರಿ ಅಂದರೆ ಓದುತ್ತಿದ್ದೆ ಎನ್ನುತ್ತಾರೆ.
ಚಿತ್ರರಂಗ ಹಾಗೂ ಓದು ಎರಡೂ ದೊಣಿ ಮೇಲೆ ಸಂಚರಿಸುವುದು ಅಪಾಯಕಾರಿ. ಅದಕ್ಕೆ ಓದು ಮುಗಿಸಿ ಚಿತ್ರರಂಗಕ್ಕೆ ಬರುವುದು ಅಂತ ನಿರ್ಧರಿಸಿದೆ. ಈಗ ಓದು ಮುಗಿದಿದೆ. ಮತ್ತೆ ಮರಳಿದ್ದೇನೆ ಎನ್ನುತ್ತಾರೆ ಪೂನಂ.
ಹಾಗಂತ ಇವರು ಸುಮ್ಮನೆ ಕುಳಿತಿಲ್ಲ. ಮಧ್ಯೆ ಬಿಡುವು ಸಿಕ್ಕಾಗ ತಮಿಳು, ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ತಮಿಳು ಚಿತ್ರವೊಂದು ಇನ್ನೇನು ತೆರೆ ಕಾಣಬೇಕಿದೆ. ಈ ವರ್ಷ ತಮ್ಮ ಪಾಲಿಗೆ ಸುವರ್ಣ ವರ್ಷವಾಗಲಿದೆ ಎನ್ನುವುದು ಅವರ ಅಭಿಪ್ರಾಯ.
ಈ ಚಿತ್ರದಲ್ಲಿ ಐವರು ನಾಯಕಿಯರಿದ್ದಾರೆ. ಆದರೆ ನನಗೆ ನೀಡಿದ ಪಾತ್ರದ ಕಥೆ ಓದಿ ತುಂಬಾ ಇಷ್ಟವಾಯಿತು. ಐವರಲ್ಲೂ ಭಿನ್ನವಾದ ಪಾತ್ರ. ಅದಕ್ಕೆ ಒಪ್ಪಿಕೊಂಡೆ. ಕನ್ನಡದಲ್ಲಿ ಈಗಾಗಲೇ ಒಂದು ಚಿತ್ರ ಆಗಿದೆ. ಇನ್ನೊಂದು ಆಗುತ್ತಿದೆ. ಹೆಚ್ಚು ಚಿತ್ರ ಮಾಡುವ ಆಸೆ ಇದೆ. ಎಷ್ಟು ಈಡೇರುತ್ತದೆಯೋ ಗೊತ್ತಿಲ್ಲ ಅನ್ನುತ್ತಾರೆ.
ಚಿತ್ರದಲ್ಲಿ ರ‌್ಯಾಗಿಂಗ್ ಪಿಡುಗಿನ ವಿರುದ್ಧ ಸಮರ ಸಾರುವ ಕಾರ್ಯ ಆಗಿದೆ. ಇದರಿಂದ ಇಂಥದ್ದೊಂದು ಗಂಭೀರ ವಿಷಯ ಇರಿಸಿಕೊಂದು ಚಿತ್ರ ಮಾಡಿದರೆ ಅದು ಯಶಸ್ಸು ಕಾಣುತ್ತದೆ. ನಮ್ಮ ಪ್ರಯತ್ನವೂ ಅದೇ ಆಗಿದೆ ಎನ್ನುತ್ತಾರೆ. ಪೂನಂಗೆ ಆಲ್ ದಿ ಬೆಸ್ಟ್ ಹೇಳೋಣ.