ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಿರುತೆರೆಯ ಕಳಶ 'ಪ್ರಣಯ ರಾಜ' ಹಿರಿತೆರೆ ಮರೆತರೇ? (Srinath | Snehada Kadalalli | Bangara | Kannada film)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕನ್ನಡ ಚಿತ್ರರಂಗದ ಹಿರಿಯ ನಟ, ಜನಪ್ರಿಯ ಮಾತುಗಾರ ಹಾಗೂ ಕನ್ನಡ ಚಿತ್ರರಂಗದ ಏಕೈಕ ಪ್ರಣಯ ರಾಜ ಶ್ರೀನಾಥ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ.

ಇವರೀಗ ಕಿರುತೆರೆಗೆ ಸ್ಟ್ರಕ್ ಆಗಿದ್ದಾರೆ. ಚಿತ್ರರಂಗದಲ್ಲಿ ಅಷ್ಟಾಗಿ ಕಾಣುತ್ತಿಲ್ಲ. ಕಂಡರೂ, ಅಲ್ಲೊಂದು ಇಲ್ಲೊಂದು ಚಿತ್ರ. ನಿತ್ಯ ಕಾಣಿಸುವುದು ಕಿರುತೆರೆಯಲ್ಲಿ ಮಾತ್ರ. ಇವರೀಗ ಸದ್ಯ ಈ ಟಿವಿಯಲ್ಲಿ ಬರುತ್ತಿರುವ 'ಸ್ನೇಹದ ಕಡಲಲ್ಲಿ' ಹೆಸರಿನ ರಿಯಾಲಿಟಿ ಶೋನಲ್ಲಿ ಇದ್ದಾರೆ. ಇದರ ಜತೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಬಂಗಾರ' ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ.

ಒಟ್ಟಾರೆ ಕಿರುತೆರೆ ಪಾಲಿಗೆ ಇವರ ಅಭಿನಯ ಇಂದು ಅನಿವಾರ್ಯ. ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಹಿರಿತಲೆಗಳಲ್ಲಿ ಇವರೂ ಒಬ್ಬರು. ಸದ್ಯ ಹುಡುಕಿದರೂ ಹೆಚ್ಚಿನವರು ಹಿರಿತೆರೆಯಲ್ಲಿ ಇಲ್ಲ. ಎಲ್ಲರೂ ಕಿರುತೆರೆಗೆ ಬಂದಿದ್ದಾರೆ. ಇವರಲ್ಲಿ ಪ್ರಮುಖರ ಪಟ್ಟಿಯಲ್ಲಿ ಶ್ರೀನಾಥ್ ನಿಲ್ಲುತ್ತಾರೆ.

ಇವರು ಚಿತ್ರರಂಗದಲ್ಲಿ ಉತ್ತಮ ಹೆಸರಿದ್ದಾಗಲೇ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಆದರ್ಶ ದಂಪತಿಗಳು' ಕಾರ್ಯಕ್ರಮದಲ್ಲಿ ಬರುವ ಮೂಲಕ ಕಿರುತೆರೆಯ ಅಭಿಮಾನಿಗಳ ಆರಾಧ್ಯ ದೈವವಾಗಿದ್ದರು.

ಇದೀಗ ಎರಡು ಕಾರ್ಯಕ್ರಮದ ಮೂಲಕ ಇನ್ನಷ್ಟು ಹತ್ತಿರವಾಗಿದ್ದಾರೆ. ಮನೋಜ್ಞ ಅಭಿನಯದ ಮೂಲಕ ಮನೆ ಮಾತಾಗಿರುವ ಇವರು ಏಕಕಾಲಕ್ಕೆ ರಿಯಾಲಿಟಿ ಶೋ ಹಾಗೂ ಧಾರಾವಾಹಿ ಎರಡಲ್ಲೂ ಪಾಲ್ಗೊಂಡು ಎರಡರಲ್ಲೂ ಒಂದೊಂದು ವಿಭಿನ್ನ ಪಾತ್ರ ಪೋಷಣೆ ಮಾಡಿದ್ದಾರೆ.

ಹಿರಿತೆರೆಯಲ್ಲಿ ಗಂಭೀರ ಪಾತ್ರಕ್ಕೆ ನಟರ ಕೊರತೆ ಕಾಡುತ್ತಿದ್ದು ಎಲ್ಲರೂ ಹಾಸ್ಯ ಚಿತ್ರಕ್ಕೆ ಮೊರೆ ಹೋಗುತ್ತಿರುವ ದಿನದಲ್ಲಿ ನಮ್ಮ ಪ್ರಣಯ ರಾಜ ಹಾಸ್ಯ ಮಿಶ್ರಿತ ರಿಯಾಲಿಟಿ ಶೋ ಹಾಗೂ ಬಂಗಾರದಂತ ಧಾರಾವಾಹಿಯಲ್ಲಿ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತಿದ್ದಾರೆ. ಕಿರುತೆರೆಯ ಗೌರವ ಹೆಚ್ಚಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನಿಮಾ, ಕರ್ನಾಟಕ, ಶ್ರೀನಾಥ್, ಸ್ನೇಹದ ಕಡಲಲ್ಲಿ, ಬಂಗಾರ