ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಬಣ್ಣದ ಕೊಡೆ' ನಿರ್ಮಾತೃಗೆ ಧರ್ಮೋಪದೇಶ-ಧರ್ಮದೇಟು? (Nagaraj Nayak | Bannada Kode | Bannada Chitte | Kannada film)
ಸುದ್ದಿ/ಗಾಸಿಪ್
Bookmark and Share Feedback Print
 
PR
ಬಣ್ಣದ ಲೋಕವನ್ನು ನಂಬಿ, ಮೆಚ್ಚಿ ಉದ್ಧಾರ ಆದವರು ಯಾರಿದ್ದಾರೆ? ಎಲ್ಲಾ ಸರ್ವನಾಶ ಆಗುತ್ತದೆ ಎನ್ನುವ ಮಾತು ಸಿನಿಮಾ ಹುಚ್ಚು ಬೆಳೆಸಿಕೊಂಡ ಮಕ್ಕಳಿಗೆ ಪಾಲಕರು ಹೇಳುವ ಮಾತು. ಇದು ಅಕ್ಷರಶಃ ನಿಜ ಅನ್ನುವುದು ಆಗಾಗ ಸಾಬೀತಾಗುತ್ತದೆ.

ಸಾಬೀತಾಗುವ ವಿಷಯದಲ್ಲಿ ಮೋಸ ಹಲವು ವಿಧದಲ್ಲಿ ಆಗುತ್ತಿದೆ ಅನ್ನುವುದು ಗೊತ್ತಾಗುತ್ತದೆ. ಹಲವುಗಳಲ್ಲಿ ಸಾಮಾನ್ಯವಾಗಿ ಕಾಡುವ ಆತಂಕ ಚೆಕ್ ಬೌನ್ಸ್. ಹೌದು, ಚಿತ್ರದಲ್ಲಿ ಕೆಲಸ ಮಾಡಿದ ಅಷ್ಟಿಷ್ಟೋ ಕಲಾವಿದರಿಗೆ ನಿರ್ಮಾಪಕರು ಚೆಕ್ ರೂಪದಲ್ಲಿ ಹಣ ನೀಡುತ್ತಾರೆ. ಇದನ್ನು ಬ್ಯಾಂಕಿಗೆ ಹಾಕಿದಾಗ ಅದು ಬೌನ್ಸ್ ಅಗುತ್ತದೆ. ಶಕ್ತಿ ಇದ್ದವರು ಕೋರ್ಟ್ ಮೆಟ್ಟಿಲೇರಿ ವರ್ಷಗಳ ಕಾಲ ಹೋರಾಡಿ ಸುಮ್ಮನಾದರೆ, ಕೈಲಾಗದವರು ಮೈ ಪರಚಿಕೊಂಡು ತಣ್ಣಗಾಗುತ್ತಾರೆ.

ಇಂತದ್ದೇ ಒಂದು ಲಫಡಾದಲ್ಲಿ 'ಬಣ್ಣದ ಕೊಡೆ' ಚಿತ್ರದ ನಿರ್ಮಾಪಕ ನಾಗರಾಜ್ ನಾಯಕ್ ತಗುಲಿ ಹಾಕಿಕೊಂಡಿದ್ದಾರೆ. ಇವರು ಈ ಹಿಂದೆ 'ಗಗನಸಖಿ' ಎನ್ನುವ ಹೆಸರಿನ ಚಿತ್ರ ಮಾಡುವುದಾಗಿ ಘೋಷಿಸಿದ್ದರು. ಆ ಸಂದರ್ಭದಲ್ಲಿ ಅನೇಕ ಹುಡುಗಿಯರನ್ನು ಕರೆಸಿ ಸಂದರ್ಶನ ಮಾಡಿ ನಾಯಕಿ ಮಾಡ್ತೇನೆ ಅಂತ ಹೇಳಿ ಭರವಸೆ ನೀಡಿ ಹಣ ಕಿತ್ತಿದ್ದಾರೆ. ಅದೂ ಒಂದೆರಡಲ್ಲ ಬರೋಬ್ಬರಿ ನಾಲ್ಕು ಲಕ್ಷದಷ್ಟಾಗಿದೆ ಹಣ. ಐವರು ಹುಡುಗಿಯರಿಂದ ತಲಾ 80 ಸಾವಿರ ರೂ. ಪೀಕಿದ್ದಾರೆ ಅನ್ನುವ ಗಾಳಿ ಸುದ್ದಿ ಇದೀಗ ಗಾಂಧಿನಗರದ ತುಂಬಾ ಸರಿದಾಡುತ್ತಿದೆ.

ಇನ್ನು ಈ ಹಣವನ್ನು ನಾಗರಾಜ್ 'ಬಣ್ಣದ ಚಿಟ್ಟೆ' ಎಂಬ ಚಿತ್ರದ ಮೇಲೆ ಸುರಿದಿದ್ದಾರೆ ಅನ್ನುವ ವದಂತಿ ಕೂಡಾ ಇದೆ. ಅದೇನೇ ಇರಲಿ ಮೊನ್ನೆ ನಂಜನಗೂಡಿನಲ್ಲಿ ತಮ್ಮ ಬಣ್ಣದ ಕೊಡೆ ಚಿತ್ರದ ಮುಹೂರ್ತ ಇಟ್ಟುಕೊಂಡಿದ್ದರಲ್ಲಾ ಅಲ್ಲಿ ಈ ಸತ್ಯ ಬಹಿರಂಗವಾಗಿದೆಯಂತೆ.

ಅಲ್ಲಿಗೆ ಬಂದ ಮೂವರು ಯುವತಿಯರು ಗಲಾಟೆ ಮಾಡಿ ನಾಗರಾಜ್ ನಾಯಕ್‌ರನ್ನು ಎತ್ತಿಕೊಂಡು ಹೋಗಿ ಒಂದಿಷ್ಟು ಧರ್ಮೋಪದೇಶ, ಧರ್ಮದೇಟು ನೀಡಿದ್ದಾರೆ ಅನ್ನುವ ಸುದ್ದಿ ಇದೆ. ಅದೆಲ್ಲಾ ಎಷ್ಟು ಸತ್ಯವೋ ಗೊತ್ತಿಲ್ಲ. ಗಾಂಧಿನಗರದಲ್ಲಿ ಸದ್ಯ ಚಾಲನೆಯಲ್ಲಿರುವ ದೊಡ್ಡ ಸುದ್ದಿ ಇದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಾಗರಾಜ್ ನಾಯಕ್, ಬಣ್ಣದ ಕೊಡೆ, ಬಣ್ಣದ ಚಿಟ್ಟೆ ಕನ್ನಡ ಸಿನಿಮಾ, ಕರ್ನಾಟಕ