ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಟಿ.ಪಿ.ಕೈಲಾಸಂ ಕುರಿತ ಕಿರುಚಿತ್ರ (T.P.Kailasam | Chaya Singh | A.S.Murthy)
ಸುದ್ದಿ/ಗಾಸಿಪ್
Bookmark and Share Feedback Print
 
'ಟಿ.ಪಿ. ಕೈಲಾಸಂ' ಹೆಸರಿನ ಕಿರುಚಿತ್ರವೊಂದು ಕನ್ನಡದಲ್ಲಿ ಬರುತ್ತಿದೆ. 45 ನಿಮಿಷಗಳ ಈ ಚಿತ್ರವನ್ನು ಆರ್.ಕೆ. ಶ್ರೀನಿವಾಸ್ ನಿರ್ದೇಶಿಸಿದ್ದು, ಇದನ್ನು ಎ.ಎಸ್. ಮೂರ್ತಿ ಕಥೆ ರೂಪದಲ್ಲಿ ಬರೆದಿದ್ದರು. ಈ ಪುಸ್ತಕವನ್ನೇ ಆಧರಿಸಿ ಚಿತ್ರವಾಗಿಸಲಾಗಿದೆ. ಚಿತ್ರದ ವಿಶೇಷ ಅಂದರೆ ಇದು ಸಂಪೂರ್ಣ ಕೈಲಾಸಂರ ಜೀವನ ಆಧರಿಸಿ ಇದೆ. ಹಾಸ್ಯದ ಹೊನಲು ಇಲ್ಲಿ ಹರಿಯಲಿದೆ.

ಟಿ.ಪಿ. ಕೈಲಾಸಂ ಮತ್ತೆ ಹುಟ್ಟಿ ಬಂದು, ಇಲ್ಲಿ ಅವರೇ ಬರೆದ ಕಥೆಯ ಪಾತ್ರಧಾರಿಗಳು ಅವರಿಗೆ ಎದುರಾಗಿ ಸಿಕ್ಕು ಅವರನ್ನು ಪೇಚಿಗೆ ಸಿಲುಕಿಸುವುದು, ನಾನಾ ಪ್ರಶ್ನೆಗಳನ್ನು ಕೇಳಿ ತಲೆ ತಿನ್ನುವುದು ಈ ಚಿತ್ರದ ವಿಶೇಷವಂತೆ. ಸತ್ತ ಕೈಲಾಸಂ ಹಾಗೂ ಅವರ ಪಾತ್ರಧಾರಿಗಳ ನಡುವಿನ ಸಂಭಾಷಣೆ, ಚರ್ಚೆ ಹಾಗೂ ಸಂವಾದವೇ ಚಿತ್ರವಾಗಿದೆ.

ಇತ್ತೀಚೆಗೆ ಕನ್ನಡ ಚಿತ್ರಗಳಲ್ಲಿ ಅಪರೂಪ ಆಗಿರುವ ನಟಿ ಛಾಯಾಸಿಂಗ್ ಈ ಚಿತ್ರದಲ್ಲಿ 4 ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರವನ್ನು ಒಂದು ವ್ಯವಸ್ಥಿತ ಚೌಕಟ್ಟಿನ ಅಡಿ, ವ್ಯವಸ್ಥಿತವಾಗಿ ತರಲಾಗಿದೆ. ಕೈಲಾಸಂ ಇರಲಿ, ಇಲ್ಲದಿರಲಿ ಅವರ ಹೆಸರಿಗೆ ಘನತೆ ತರುವ ರೀತಿ ಇದು ಮೂಡಿ ಬಂದಿದೆ. ಯಾವುದೇ ರೀತಿ ಆಭಾಸಕಾರಿ ಸನ್ನಿವೇಶ ಇಲ್ಲ. ಇದೊಂದು ಉತ್ತಮ ಯತ್ನ ಹಾಗೂ ಜನರ ಮನ ಗೆಲ್ಲಲಿದೆ ಎನ್ನುವುದು ಎ.ಎಸ್. ಮೂರ್ತಿ ಅವರ ಮಾತು. ಅಂದಹಾಗೆ, ಇಡೀ ಚಿತ್ರದಲ್ಲಿ ಸೂತ್ರದಾರರಾಗಿ ಶ್ರೀನಗರ ಕಿಟ್ಟಿ ಇದ್ದು, ಹಿನ್ನೆಲೆಯಲ್ಲಿ ಇವರ ಧ್ವನಿ ಬಳಸಿಕೊಳ್ಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟಿಪಿಕೈಲಾಸಂ, ಛಾಯಾ ಸಿಂಗ್, ಎಎಸ್ಮೂರ್ತಿ