ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹುಡುಗ- ಹುಡುಗಿಗಾಗಿ ಇಂದ್ರಜಿತ್ ಲಂಕೇಶ್ ಡಾನ್ಸ್! (Huduga Hudugi | Sada | Dhyan | Ileana | Indrajith Lankesh)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಹುಡುಗ ಹುಡುಗಿ ಚಿತ್ರವನ್ನು ಹೇಗಾದರೂ ಗೆಲ್ಲಿಸಬೇಕೆಂಬ ಪ್ರಯತ್ನದಲ್ಲಿ ಇಂದ್ರಜಿತ್ ಲಂಕೇಶ್ ಇದ್ದು, ಚಿತ್ರ ನಿರ್ಮಾಣದಲ್ಲಿ ಸಾಕಷ್ಟು ಹೊಸತನಗಳ ಅಳವಡಿಕೆಗೆ ಮುಂದಾಗಿದ್ದಾರೆ. ಆ ಮೂಲಕ ನಿರ್ದೇಶಕನಾಗಿ ತಾನೂ ಹಾಡೊಂದಕ್ಕೆ ಲಕಲಕ ಅಂತ ಹೊಳೆಯುವ ತಲೆಯಲ್ಲೇ ಬಳುಕುವ ಬೆಡಗಿಯರ ಜೊತೆ ಭರ್ಜರಿ ಹೆಜ್ಜೆ ಹಾಕಿದ್ದಾರೆ.

ಧ್ಯಾನ್, ಸದಾ, ಲೇಖಾ ವಾಶಿಂಗ್ಟನ್, ಇಲಿಯಾನಾ ಮತ್ತಿತರ ಥಳುಕು ಬಳುಕು ತಾರೆಗಳು ಈ ಚಿತ್ರದಲ್ಲಿದ್ದರೂ, ಅವರನ್ನೆಲ್ಲ ಬದಿಗಿರಿಸಿ, ತಾವೇ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸುಂದರ ತರುಣಿಯರ ಜತೆ ಹೆಜ್ಜೆ ಹಾಕಿರುವ ಇಂದ್ರಜಿತ್ ನಿಜಕ್ಕೂ ಒಬ್ಬ ನಾಯಕ ನಟನಂತೆ ಗೋಚರಿಸಿದ್ದಾರಂತೆ. ಚಿತ್ರದ ಪ್ರಮೋಶನ್‌ಗಾಗಿ ಈ ಹಾಡನ್ನು ಬಳಸಿದ್ದಾಗಿ ಅವರು ಹೇಳಿದ್ದು, ಇದೊಂದು ಭಿನ್ನ ಪ್ರಯತ್ನಕ್ಕೆ ಹಾಡು ಸೂಕ್ತ ಅನ್ನಿಸಿತು ಎಂದು ಹೇಳುತ್ತಾರೆ.
PR


ಆಸ್ಟ್ರೇಲಿಯಾ, ಯುಕೆ, ಯುಎಸ್‌ನ ಡಾನ್ಸರುಗಳ ಜೊತೆಗೆ ನಮ್ಮ ಬೆಂಗಳೂರಿನ ಆಯ್ದ ಮಾಡೆಲ್‌ಗಳು ಈ ಹಾಡಿಗಾಗಿ ಬಳುಕಿದ್ದಾರೆ. ಒಟ್ಟಾರೆ ಸ್ಯಾಂಡಲ್‌ವುಡ್, ಟಾಲಿವುಡ್, ಹಾಲಿವುಡ್, ಬಾಲಿವುಡ್ ಎಲ್ಲವೂ ಈ ಒಂದು ಹಾಡಲ್ಲಿ ಸಮ್ಮಿಲನವಾಗಿದೆ. ಒಂದು ವಿಭಿನ್ನ ಹಾಡಾಗಿ ಇದು ಜನರ ಮನ ಗೆಲ್ಲಲಿದೆ ಎನ್ನುವ ವಿಶ್ವಾಸ ಇವರದ್ದು. ನಿರ್ದೇಶಕರಾದ ಇಂದ್ರಜಿತ್ ಈ ಹಾಡಿಗೆ ನೃತ್ಯ ಮಾಡಲು 15 ದಿನ ತರಬೇತಿ ಸಹ ಪಡೆದಿದ್ದಾರಂತೆ. ಎಲ್ಲಾ ಆಗಿ ಈ ಹಾಡು ಗೆಲ್ಲಲೇ ಬೇಕು ಎನ್ನುವುದು ಇವರ ಹಂಬಲ. ಅದಕ್ಕಾಗಿ ಇಷ್ಟು ಪ್ರಯತ್ನ ಮಾಡಿದ್ದಾರೆ.

ಚಿತ್ರದ ಆಡಿಯೊ ಬಿಡುಗಡೆ ಆಗಿದೆ. ಮೈಸೂರಿನಲ್ಲಿ ನಟ ನಟಿಯರಿಂದ ರ‌್ಯಾಂಪ್ ವಾಕ್ ಸಹ ಆಗಿದೆ. ಮುರುಳಿ ಅವರ ಕೋರಿಯಾಗ್ರಫಿ ಚೆನ್ನಾಗಿದೆಯಂತೆ. ಜೋಶ್ವಾ ಶ್ರೀಧರ್ 4 ಹಾಡು ಕಂಪೋಸ್ ಮಾಡಿದ್ದಾರೆ. ನಿರ್ದೇಶಕ ಇಂದ್ರಜಿತ್ ಎರಡು ಹಾಡು ಕಂಪೋಸ್ ಮಾಡಿರುವುದು ಇನ್ನೊಂದು ವಿಶೇಷ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹುಡುಗ ಹುಡುಗಿ, ಸದಾ, ಧ್ಯಾನ್, ಇಲಿಯಾನಾ, ಇಂದ್ರಜಿತ್ ಲಂಕೇಶ್