ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದಿಗಂತ್-ಐಂದ್ರಿತಾ ನಡುವೆ ಏನೋ ನಡೀತಿದ್ಯಂತೆ, ನಿಜಾನಾ? (Diganth | Aindrita Ray | Manasaare | Love affair)
ಸುದ್ದಿ/ಗಾಸಿಪ್
Bookmark and Share Feedback Print
 
'ಮನಸಾರೆ'ಯ ಜೋಡಿ ದೂದ್‌ಪೇಡ ದಿಗಂತ್ ಮತ್ತು ಐಂದ್ರಿತಾ ರೇ ನಡುವೆ ಸಮ್‌ಥಿಂಗ್ ಸಮ್‌‌ಥಿಂಗ್ ನಡೆಯುತ್ತಿದೆಯಾ? ಹೀಗೊಂದು ಸಂಶಯ ಹುಟ್ಟಲು ಕಾರಣ ಈ ಜೋಡಿ ಎಲ್ಲೆಂದರಲ್ಲಿ ಥಳಕು ಹಾಕಿಕೊಂಡು, ಮೈ ಬಳಸಿಕೊಂಡು ಸುತ್ತಾಡುತ್ತಿರುವುದು. ಅಂತದ್ದೇನಾದರೂ ಇದೆಯಾ ಎಂದು ಪ್ರಶ್ನಿಸಿದಾಗ ಮಾತ್ರ, ಇಲ್ಲಪ್ಪಾ ಅಂತ ಜಾರಿಕೊಳ್ತಾರೆ.

ವೃತ್ತಿಯನ್ನು ಮೀರಿದ ಸಂಬಂಧ ದಿಂಗತ್-ಐಂದ್ರಿತಾ ನಡುವೆ ಇದೆ ಎನ್ನುವ ಬಗ್ಗೆ ಗಾಂಧಿನಗರದಲ್ಲಿ ದೊಡ್ಡ ಮಟ್ಟದ ಸುದ್ದಿಗಳಿವೆ. ಇವು ಈಗಲೂ ಗಾಳಿಮಾತಾಗಿ ಉಳಿದಿಲ್ಲ. ಅದೇನೋ ಅಫೇರ್ ಇರುವುದು ಹೌದು ಎಂದು ಅವರಿಬ್ಬರ ಹತ್ತಿರದವರೇ ಮುಸಿ-ಮುಸಿ ನಗುತ್ತಾರೆ.
PR

ಹೌದು, ಈಗ ಅವರು ತುಂಬಾ ಹತ್ತಿರವಾಗಿದ್ದಾರೆ. ಈ ಹಿಂದೆ ಹಲವು ನಾಯಕಿಯರ ಜತೆ ದಿಗಂತ್ ಹೆಸರುಗಳು ಕೇಳಿ ಬಂದಿತ್ತಾದರೂ, ಯಾವತ್ತೂ ಅವರು ಅದನ್ನು ಗಂಭೀರವಾಗಿ, ಭಾವನಾತ್ಮಕವಾಗಿ ಪರಿಗಣಿಸಿದವರಲ್ಲ. ಎಲ್ಲವೂ ಆ ಕ್ಷಣಕ್ಕೆ-ದಿನಕ್ಕೆ ಮೀಸಲಿಟ್ಟಂತಿತ್ತು ಅವರ ಸಂಬಂಧಗಳು. ಆದರೆ ಈ ಸಂಬಂಧ ಹಾಗೆ ಕಾಣಿಸುತ್ತಿಲ್ಲ. ಅದನ್ನು ಮೀರಿದ ಹೊಸ ಚೌಕಟ್ಟು ಇಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ ಎಂದು ಚಿತ್ರರಂಗದ ಮೂಲವೊಂದು ಹೇಳಿದೆ.

ಇಬ್ಬರೂ ಪಾರ್ಟಿಗಳಲ್ಲಿ, ವಿಶೇಷ ಚಿತ್ರ ಪ್ರದರ್ಶನಗಳಲ್ಲಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಾಮೂಲಿಯಾಗಿದೆ. ಜತೆಗೆ ಇಬ್ಬರೂ ಜತೆಯಾಗಿ ಗೋವಾಕ್ಕೆ ಬೇರೆ ಹೋಗಿದ್ದಾರಂತೆ. ಜತೆಗೆ ಬೇರೆ ಯಾರೂ ಇರಲಿಲ್ಲ ಎನ್ನುವುದು ಹಾಟ್ ಸುದ್ದಿ. ಅದಕ್ಕೂ ಮೊದಲು ಕೆಲ ತಿಂಗಳ ಹಿಂದೆ ದಾವಣಗೆರೆಯಲ್ಲಿ ನಡೆದಿದ್ದ ಕೆಪಿಎಲ್ ಪಂದ್ಯವೊಂದರಲ್ಲೂ ಜತೆಯಾಗಿದ್ದರು. ಇವೆಲ್ಲವನ್ನೂ ಗಮನಿಸಿರುವ ಮಂದಿ ಅವರಿಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ, ಪ್ರೀತಿಯಂತಹ ಗಂಭೀರ ಸಂಬಂಧವಿದೆ ಎನ್ನುತ್ತಿದ್ದಾರೆ.

ಇವೆಲ್ಲ ಸುಳ್ಳು ಎಂದು ಸ್ವತಃ ಐಂದ್ರಿತಾ ಒಪ್ಪಿಕೊಂಡಿಲ್ಲ. ನಮ್ಮ ನಡುವೆ ಏನೋ ನಡೀತಿದೆ, ನನಗೂ ಇದುವರೆಗೆ ಅದು ಏನೆಂದು ಅರಿವಿಗೆ ಬರುತ್ತಿಲ್ಲ ಎಂಬಂತೆ ಪತ್ರಕರ್ತರ ಜತೆ ಮಾತನಾಡಿದ್ದಾರೆ.

ದಿಗಂತ್ ನನ್ನ ಹತ್ತಿರದ ಸ್ನೇಹಿತ. ಆದರೆ ಆತ ಈಗಲೇ ನನ್ನ ಬಾಯ್‌ಫ್ರೆಂಡ್ ಆಗಿದ್ದಾನೆ ಎಂದು ನಾನು ಹೇಳಲಾರೆ. ನಾವು ಹಲವು ಪಾರ್ಟಿಗಳಲ್ಲಿ, ಚಿತ್ರ ಪ್ರದರ್ಶನಗಳಲ್ಲಿ ಜತೆಯಾಗಿ ಕಾಣಿಸಿಕೊಂಡ ಕೂಡಲೇ ನಾವಿಬ್ಬರೂ ಪರಸ್ಪರ ತುಂಬಾ ತುಂಬಾ ಹತ್ತಿರವಾಗಿದ್ದೇವೆ ಎಂದರ್ಥವಲ್ಲ. ಹಾಗೇನಾದರೂ ಇದ್ದಲ್ಲಿ ಅಭಿಮಾನಿಗಳಿಗೆ ನಾನು ಹೇಳದೇ ಇರುವುದಿಲ್ಲ ಎಂದಿದ್ದಾರೆ.

ಆದರೆ ದಿಗಂತ್ ತುಟಿಗೆ ಹೊಲಿಗೆ ಹಾಕಿದವರಂತೆ ವರ್ತಿಸಿದ್ದಾರೆ. ರೂಮರುಗಳ ಬಗ್ಗೆ ನಾನು ಏನೂ ಮಾತನಾಡಲ್ಲ, ಅದಕ್ಕೆ ನನ್ನಲ್ಲಿ ಸಮಯಾನೂ ಇಲ್ಲ ಎಂಬಂತೆ ಮೂತಿ ತಿರುಗಿಸುತ್ತಾರೆ.

ನಿಜಕ್ಕೂ ನಾನು ಗಾಳಿಸುದ್ದಿಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಇಂತಹ ಆಧಾರರಹಿತ ರೂಮರುಗಳ ಬಗ್ಗೆ ಈ ಹಿಂದೆಯೂ ನಾನು ಗುರಿಯಾಗಿ ಸಾಕಷ್ಟು ತೊಂದರೆಗೀಡಾಗಿದ್ದೇನೆ. ದಯವಿಟ್ಟು ವಿವಾದಗಳಿಂದ ನನ್ನನ್ನು ದೂರ ಇಡಿ ಎಂದು ನುಣುಚಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿಜಯ್-ಶುಭಾ ಪೂಂಜಾ, ಓಂ ಪ್ರಕಾಶ್ ರಾವ್ - ನಿಖಿತಾ ಬಿಟ್ಟರೆ ಉಳಿದ ಯಾವುದೇ ಜೋಡಿ ಸಂಬಂಧಗಳ ವಿಚಾರದಲ್ಲಿ ಅಷ್ಟೊಂದು ಸದ್ದು ಮಾಡಿದ್ದಿಲ್ಲ. ಹಾಗಾಗಿ ಉದ್ಯಮವು ಈ ಸುಂದರ ಜೋಡಿಯನ್ನು ಕಣ್ರೆಪ್ಪೆ ಮುಚ್ಚದೆ ನೋಡುತ್ತಿದೆ. ಇದು ಎಲ್ಲಿಯವರೆಗೆ ತಲುಪಬಹುದು ಎಂದು ಲೆಕ್ಕ ಹಾಕುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದಿಗಂತ್, ಐಂದ್ರಿತಾ ರೇ, ಮನಸಾರೆ, ಜಂಗ್ಲಿ, ಕನ್ನಡ ನಟಿ