ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡ ಚಿತ್ರರಂಗದ 'ಅಮರಶಿಲ್ಪಿ' ಬಿ.ಎಸ್. ರಂಗ ಕಣ್ಮರೆ (BS Ranga | Amarashilpi Jakanachari | Kannada film | Karnataka)
ಸುದ್ದಿ/ಗಾಸಿಪ್
Bookmark and Share Feedback Print
 
ಕನ್ನಡ ಚಿತ್ರರಂಗದ ಹಿರಿಯ ಅಪರೂಪದ ಛಾಯಗ್ರಾಹಕ, ನಿರ್ದೇಶಕ ಹಾಗೂ ನಿರ್ಮಾಪಕ 93ರ ಹರೆಯದ ಬಿ.ಎಸ್. ರಂಗ ನಮ್ಮನ್ನು ಅಗಲಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿದ್ದ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಭಾನುವಾರ (ಡಿಸೆಂಬರ್ 12) ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರ ಪೂರ್ಣ ಹೆಸರು ಬಿಂಡಿಗನವಿಲೆ ಶ್ರೀನಿವಾಸ ಅಯ್ಯಂಗಾರ್. ಹುಟ್ಟೂರು ವೈಗಡಿ. 1917, ನವೆಂಬರ್ 11ರಂದು. ರಂಗಾ ಅವರು ಆರಂಭದಲ್ಲಿ ಛಾಯಗ್ರಾಹಕರಾಗಿ ಚಿತ್ರರಂಗ ಪ್ರವೇಶಿಸಿದರು. ಅಲ್ಲಿಂದ ನಿರ್ದೇಶನ, ನಿರ್ಮಾಣಕ್ಕೆ ಕೈ ಹಾಕಿದ ಅವರು ಜೊತೆಯಲ್ಲಿ ವಿಕ್ರಂ ಪ್ರೊಡಕ್ಷನ್ಸ್ ಹಾಗೂ ವಿಕ್ರಂ ಸ್ಟುಡಿಯೋ ಸಹ ನಡೆಸುತ್ತಿದ್ದರು.

ರಂಗಾ ಅವರ ನಿರ್ದೇಶನದ ಪ್ರಥಮ ಚಿತ್ರ 'ಭಕ್ತ ಮಾರ್ಕಂಡೇಯ'. ಅಂದಿನ ದಿನಗಳಲ್ಲಿ ಯಶಸ್ವಿ ಚಿತ್ರ. ನಂತರ ಮಹಿಷಾಸುರ ಮರ್ದಿನಿ, ಅಮರಶಿಲ್ಪಿ ಜಕಣಾಚಾರಿ, ಪ್ರತಿಜ್ಞೆ, ಚಂದ್ರಹಾಸ, ಪಾರ್ವತಿ ಕಲ್ಯಾಣ, ಭಲೇ ಬಸವ, ಸಿಡಿಲ ಮರಿ, ಮಣ್ಣಿನ ಮಗಳು, ಸುಳಿ, ಭಾಗ್ಯವಂತ, ಹುಲಿಯದ ಕಾಳ ಹಾಗೂ ಕಿಲಾಡಿ ರಂಗ ಹೀಗೆ ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿದ್ದರು.

'ಅಮರಶಿಲ್ಪಿ ಜಕಣಾಚಾರಿ' ಮೂಲಕ ಕನ್ನಡ ಮೊದಲ ವರ್ಣಚಿತ್ರ ನಿರ್ಮಿಸಿದ ಖ್ಯಾತಿಯೂ ರಂಗಾ ಅವರಿಗೆ ಸಲ್ಲುತ್ತದೆ. ಕೇವಲ ಕನ್ನಡ ಚಿತ್ರ ಚಿತ್ರವಲ್ಲ ಬಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್‌ನಲ್ಲೂ ಚಿತ್ರಗಳಿಗೆ ಛಾಯಾಗ್ರಹಣ ಹಾಗೂ ಹಲವು ಚಿತ್ರಗಳನ್ನು ನಿರ್ಮಿಸಿ ಛಾಪು ಮೂಡಿಸಿರುವುದು ಇವರ ವಿಶೇಷ.

ರಂಗಾ ಆವರ ನಿಧನದಿಂದ ಸಿನಿಮಾರಂಗದ ಹಿರಿಯ ಕೊಂಡಿ ಕಳಚಿದಂತಾಗಿದೆ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ, ನಿರ್ದೇಶಕ ಹಾಗೂ ಕಲಾವಿದರ ಸಂಘ ಕೂಡ ಶೋಕ ವ್ಯಕ್ತಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಎಸ್ ರಂಗಾ, ಅಮರಶಿಲ್ಪಿ ಜಕಣಾಚಾರಿ, ಕನ್ನಡ ಚಿತ್ರ