ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭಾವನಾ ಹೃದಯ ಕದ್ದ ಆ ರಾಜಕುಮಾರ ಯಾರಿರಬಹುದು? (Bhavana | Malayalam | Jackie | Karthika Menon)
ಸುದ್ದಿ/ಗಾಸಿಪ್
Bookmark and Share Feedback Print
 
WD
ನಾನು ಒಬ್ಬ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದೇನೆ. ಖಂಡಿತಾ ಅದು ಪ್ರೀತಿಯೇ. ಆದರೆ ಅದು ಮದುವೆಯ ತನಕ ಮುಂದುವರಿಯುವ ಬಗ್ಗೆ ನನಗೇನೂ ಗೊತ್ತಿಲ್ಲ. ಆತ ಮಲಯಾಳಿಯಲ್ಲ ಎಂದು ಇತ್ತೀಚೆಗಷ್ಟೇ ಹೇಳಿದ್ದ 'ಜಾಕಿ' ಹುಡುಗಿ ಭಾವನಾಗೆ ಮದುವೆಯಂತೆ. ಹಾಗೆಂಬ ಸುದ್ದಿ ಹರಿದಾಡುತ್ತಿದೆ.

ಹಲವಾರು ಮಲಯಾಳಿ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ ಸುನಯನೆ ಭಾವನಾ ಕನ್ನಡದಲ್ಲೂ ಮಿಂಚಿದ್ದು ಸರಿಯಷ್ಟೇ. ಈಗ ಮದುವೆಯಾಗಿ ಸಂಸಾರ ಸುಖಕ್ಕೆ ಅಡಿ ಇಡುತ್ತಾರೆಂದರೆ ಪಡ್ಡೆ ಹುಡುಗರಿಗೆ ಮಾತ್ರವಲ್ಲ, ಚಿತ್ರರಂಗದವರಿಗೂ ಕೊಂಚ ಬೇಸರವಾಗಬಹುದು. ಇದಲ್ಲಕ್ಕೂ ತಲೆಕೆಡಿಸಿಕೊಳ್ಳದ ಭಾವನಾ ತನ್ನ ರಾಜಕುಮಾರ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ.

ಕೆಲ ದಿನಗಳ ಹಿಂದಷ್ಟೇ ಮಲಯಾಳಿ ಪತ್ರಿಕೆಯೊಂದರ ಜತೆ ಮಾತನಾಡುತ್ತಿದ್ದ ಭಾವನಾ, ಸಹನಟನೊಬ್ಬನ ಜತೆ ಯಾವುದೋ ಒಂದು ಸಂಬಂಧ ಹೊಂದಿರುವುದಾಗಿ ಹೇಳಿದ್ದರು.

ಯಾವತ್ತಾದರೂ ನೀವು ನಿಮ್ಮ ಸಹನಟರಿಂದ ಆಕರ್ಷಣೆಗೊಳಗಾದದ್ದು ಅಥವಾ ಪ್ರೀತಿಗೆ ಬಿದ್ದದ್ದು ಇದೆಯೇ ಎಂದು ಪ್ರಶ್ನೆ ಕೇಳಲಾಗಿತ್ತು.

'ನಾನು ಯಾವತ್ತೂ ಪ್ರೀತಿಯಲ್ಲಿ ಬಿದ್ದಿಲ್ಲ ಎಂದು ಹೇಳಿದರೆ ಸುಳ್ಳಾದೀತು. ಅಂತಹದ್ದೊಂದು ಸಂಬಂಧ ನನಗೂ ಇದೆ. ಆದರೆ ಅದು ಸಂಬಂಧವೆಂದು ಹೇಳಲಾಗದು. ಮದುವೆ ನಡೆಯುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆತ ಮಲಯಾಳಿಯೇ ಅಲ್ಲ. ಆದರೂ ಸಂಬಂಧ ಗಟ್ಟಿಯಾಗಿದೆ. ಆತನನ್ನು ಬಿಟ್ಟರೆ ಇತರರಿಗೆ ಆಕರ್ಷಿತಳಾದದ್ದು ಇಲ್ಲವೇ ಇಲ್ಲ. ಇದರ ಬಗ್ಗೆ ನನ್ನ ಮನೆಯವರಿಗೂ ಗೊತ್ತು' ಎಂದು ಭಾವನಾ ಉತ್ತರಿಸಿದ್ದರು.

ಆ ಮಾತುಗಳು ಹೊಳಪು ಕಳೆದುಕೊಳ್ಳುವ ಮೊದಲೇ ಮದುವೆಯ ಸುದ್ದಿ ಬಂದಿದೆ. ಹೆತ್ತವರು ಭಾವನಾಗೆ ಹುಡುಗ ಹುಡುಕುತ್ತಿದ್ದಾರಂತೆ ಎಂದೆಲ್ಲ ಬಾಯಿಯಿಂದ ಬಾಯಿಗೆ ಹರಡುತ್ತಿದೆ. ನಿಜವಾಗಿಯೂ ಹುಡುಕುತ್ತಿದ್ದಾರಾ ಅಥವಾ ಭಾವನಾ ಪ್ರೀತಿಸುತ್ತಿರುವ ರಾಜಕುಮಾರನನ್ನೇ ಮದುವೆ ಮಾಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ತೆಲುಗಿನ 'ಮಹಾತ್ಮ','ಹೀರೋ', 'ಒಂಟರಿ' ನಟಿಸಿ ಖ್ಯಾತಿ ಪಡೆದಿದ್ದ ಭಾವನಾ ತಮಿಳು ಚಿತ್ರರಂಗದಲ್ಲೂ ಫೇಮಸ್ ಆಗಿದ್ದರು. ಅಲ್ಲಿಯ 'ಚಿತ್ರಂ ಪೇಸುದಡಿ', 'ಅಸಲ್', 'ರಾಮೇಶ್ವರಂ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಬೇಡಿಕೆ ಹೆಚ್ಚಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಪುನೀತ್ ರಾಜ್‌ಕುಮಾರ್ ಅಭಿನಯದ 'ಜಾಕಿ'ಯಲ್ಲಿ ನಾಯಕಿಯಾಗುವ ಮೂಲಕ ಕನ್ನಡದಲ್ಲೂ ಅಚ್ಚೊತ್ತಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾವನಾ, ಮಲಯಾಳಿ ನಟಿ, ಜಾಕಿ, ಕಾರ್ತಿಕಾ ಮೆನನ್