ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಮಲ್ಲಿಕಾ ಶೆರಾವತ್ ನಮ್ಮ ಹುಡುಗಿ ಎಂದ ಜಪಾನ್! (Mallika Sherawat | Hollywood | Jackie Chan | Murder, Hisss)
ತಾರಾ ಪರಿಚಯ
Feedback Print Bookmark and Share
 
Mallika Sherawat
IFM
ಮಲ್ಲಿಕಾ ಶೆರಾವತ್ ಈಗ ಫುಲ್ ಖುಷ್. ಭಾರತದ ಯಾವುದೇ ನಟ ಅಥವಾ ನಟಿಯರಿಗೆ ಸಿಕ್ಕದ ಮರ್ಯಾದೆ ಈಗ ಮಲ್ಲಿಕಾಗೆ ಹಾಲಿವುಡ್‌ನಿಂದ ಸಿಕ್ಕಿದೆ. ಸದ್ಯ ಮಲ್ಲಿಕಾ ಲಾಸ್ ಏಂಜಲೀಸ್‌ನಲ್ಲೇ ತಳವೂರಿದ್ದಾಳಂತೆ. ಕೆಲಸ ಮಾಡುವ ವೀಸಾ ಮೂಲಕ ಲಾಸ್ ಏಂಜಲೀಸ್‌ಲ್ಲಿ ತಂಗಿದ್ದ ಮಲ್ಲಿಕಾಗೆ ಗೌರವ ನಾಗರಿಕ ಎಂಬ ಹಕ್ಕು ಲಭಿಸಿದೆಯಂತೆ. ಸ್ವತಃ ಲಾಸ್ ಏಂಜಲೀಸ್ ಸಿಟಿ ಕೌನ್ಸಿಲ್ ಈ ಹಕ್ಕನ್ನು ನೀಡಿ ಆಕೆಯನ್ನು ಗೌರವಿಸಿದೆ.

ಮಲ್ಲಿಕಾ ಹಿಸ್ಸ್ ಎಂಬ ಇಂಗ್ಲೀಷ್/ ಹಿಂದಿ ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತು. ಅದರಲ್ಲಿ ಆಕೆಯದು ನಾಗಕನ್ಯೆಯ ಪಾತ್ರವೆಂಬುದೂ ಗೊತ್ತು. ಮಲ್ಲಿಕಾ ನಾಗಕ್ಯೆಯ ರೂಪದಲ್ಲಿ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಿದ್ದಾಳೆ ಎಂಬ ಸುದ್ದಿಯೂ ಇತ್ತು. ಇಷ್ಟೆಲ್ಲಾ ಇರುವಾಗ ಮಲ್ಲಿಕಾ ಹಾಲಿವುಡ್ಡಿನಲ್ಲೇ ಸಂಪೂರ್ಣ ತಯಾರಿ ನಡೆಸುತ್ತಿರುವಾಗ ಆಕೆಯನ್ನು ಹಾಲಿವುಡ್ ಗುರುತಿಸಿದ್ದಕ್ಕೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿದೆ.

Mallika Sherawat in Hisss
IFM
ಸಿಟಿ ಕೌನ್ಸಿಲ್ ಲಾಸ್ ಏಂಜಲೀಸ್‌ನಲ್ಲಿ ಆಕೆಯನ್ನು ಗೌರವಿಸುವ ಸಮಾರಂಭ ಇತ್ತೀಚೆಗೆ ನಡೆಸಿತ್ತು. ಕಾರ್ಯಕ್ರಮದಲ್ಲಿ ಜಪಾನ್‌ನ ಮಾಜಿ ಪ್ರಧಾನಿ ಟಾಮ್ ಲೆಬೋಂಗೆ ಕೂಡಾ ಹಾಜರಿದ್ದರು. ಅವರ ಜತೆಗೆ ಅವರ ಜಪಾನೀ ವೃತ್ತಿಮಿತ್ರರೂ ಇದ್ದರು. ಎಲ್ಲರಿಗೂ ಮಲ್ಲಿಕಾಳನ್ನು ನೋಡಿ ಖುಷಿಯೇ ಖುಷಿ. ಸ್ವತಃ ಮಾಜಿ ಪ್ರಧಾನಿ ಟಾಮ್ ಮಲ್ಲಿಕಾ ಜತೆಗೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದೇ ಕೊಟ್ಟಿದ್ದು. ಆಕೆಯ ಸಂದರ್ಯವನ್ನು ಹೊಗಳಿದ್ದೇ ಹೊಗಳಿದ್ದು. ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಲ್ಲಿಕಾ ನಮ್ಮ ಹುಡುಗಿ ಎನ್ನಬೇಕೇ. ನೆರೆದಿದ್ದವರಿಗ್ಯಾಕೆ.. ಸ್ವತಃ ಮಲ್ಲಿಕಾಗೇ ಆಶ್ಚರ್ಯ. ಆಮೇಲೆ ಆಕೆ ನಮ್ಮ ಹುಡುಗಿ ಎಂದಿದ್ದಕ್ಕೆ ಕಾರಣ ವಿವರಿಸಿದಾಗ ಪರಿಸ್ಥಿತಿ ತಿಳಿಯಾಯ್ತು. ಜಪಾನ್‌ನ ಜಾಕಿ ಚಾನ್ ಜತೆ ಮಲ್ಲಿಕಾ ನಟಿಸಿದ್ದರಿಂದ ಮಲ್ಲಿಕಾ ನಮ್ಮ ಹುಡುಗಿ ಅಂತ ಪ್ರಧಾನಿ ವಿವರಿಸಿದ್ದರು.

ಜಾಕಿ ಚಾನ್‌ನೊಂದಿಗೆ ಮಲ್ಲಿಕಾ 2005ರಲ್ಲಿ ದಿ ಮಿಥ್ ಎಂಬ ಚಿತ್ರದಲ್ಲಿ ನಟಿಸಿದ್ದರು. ಇದರಲ್ಲಿ ಮಲ್ಲಿಕಾ ಬಿಚ್ಚಿದ್ದು ಭಾರೀ ಸುದ್ದಿಯಾಗಿತ್ತು. ಅದಕ್ಕಿಂತಲೂ ಮಲ್ಲಿಕಾ ಬಟ್ಟೆ ಬಿಚ್ಚುವಾಗ ಜಾಕಿ ಚಾನ್ ಕದ್ದು ನೋಡಿದ್ದು ಇನ್ನೂ ಹೆಚ್ಚು ಸುದ್ದಿಯಾಗಿತ್ತು. ಮಲ್ಲಿಕಾ ದಿ ಮಿಥ್ ಚಿತ್ರದಲ್ಲಿ ಬೆತ್ತಲೆ ಹಿಂಭಾಗ ತೋರಿಸುವ ದೃಶ್ಯದಲ್ಲಿ ನಟಿಸಬೇಕಿತ್ತು. ಮಲ್ಲಿಕಾ ಚಿತ್ರದ ಶೂಟಿಂಗ್ ಸಂದರ್ಭ ಜಾಕಿ ಚಾನ್‌ರಲ್ಲಿ ನಾನು ಬಿಚ್ಚುವಾಗ ನೀವು ಕಣ್ಣು ಮುಚ್ಚಬೇಕು. ನೋಡಬಾರದು ಅಂದಿದ್ದರಂತೆ. ಅದಕ್ಕೆ ಜಾಕಿ ಒಕೆ ಅಂದಿದ್ದನಂತೆ. ಸರಿ ಎಂದ ಮಲ್ಲಿಕಾ ಕ್ಯಾಮರಾಕ್ಕೆ ಬೆನ್ನು ಹಾಕಿ ನಿಂತಳು. ಬಟ್ಟೆ ಸಂಪೂರ್ಣ ಬಿಚ್ಚಿದಳು. ಕ್ಯಾಮರಾ ಆಕೆಯ ಹಿಂಭಾಗವನ್ನು ಚಿತ್ರಿಸುತ್ತಿತ್ತು. ಆದರೆ ಜಾಕಿ ಚಾನ್ ಮಾತ್ರ ಆಕೆಯ ಮುಂಭಾಗ ನೋಡಿಬಿಟ್ಟನಂತೆ. ಇದಕ್ಕೆ ಅಂದು ಮಲ್ಲಿಕಾ ಗಲಾಟೆ ಮಾಡಿದ್ದಳು. ಕಣ್ಣು ಮುಚ್ಚು ಎಂದರೆ ಕದ್ದು ನೋಡಿದ್ದಾನೆ ಜಾಕಿ ಎಂದು ವರಾತ ತೆಗೆದಿದ್ದಳು. ಅದಕ್ಕೆ ಜಾಕಿ, ಕಣ್ಣೆದುರೇ ಪೂರ್ತಿ ಬಿಚ್ಚಿದ ಹುಡುಗಿ ಸಿಕ್ಕರೆ ಕಣ್ಣು ಮುಚ್ಚಲು ನಾನೇನು ಸಲಿಂಗಕಾಮಿಯೇ ಎಂದಿದ್ದನಂತೆ.

Mallika Sherawat
IFM
ಇದೆಲ್ಲಾ ಹಳೇ ಕಥೆ ಬಿಡಿ. ಇಂತಿಪ್ಪ ಮಲ್ಲಿಕಾ ಶೆರಾವತ್ ಎಂಬ ಸೆಕ್ಸ್ ಬಾಂಬ್, ಬಿಚ್ಚಮ್ಮ ಹುಟ್ಟಿದ್ದು ಅಕ್ಟೋಬರ್ 24ರ 1981ರಂದು. ಅಪ್ಪ ಅಮ್ಮ ಇಟ್ಟ ಹೆಸರು ರೀಮಾ ಲಂಬಾ. ಆದರೆ ಚಿತ್ರರಂಗಕ್ಕೆ ಕಾಲಿಡುವ ಹೊತ್ತಿಗೆ ಮಲ್ಲಿಕಾ ಎಂದು ಹೆಸರು ಬದಲಾಯಿಸಿದಳು. ಅಮ್ಮನ ಮೇಲಿನ ಪ್ರೀತಿಯಿಂದ ಅಮ್ಮನ ಜತೆಗಿದ್ದ ಶೆರಾವತ್ ಹೆಸರನ್ನು ತಾನೂ ಸೇರಿಸಿಕೊಂಡಳು. ದೆಹಲಿ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರದಲ್ಲಿ ಪದವಿಯನ್ನೂ ಪಡೆದಾಕೆ ಈ ಮಲ್ಲಿಕಾ.

2003ರಲ್ಲಿ ಲಕ್ ತುನೂ ಮ್ಯೂಸಿಕ್ ಆಲ್ಬಂ ಮೂಲಕ ಮೊದಲು ಕ್ಯಾಮರಾ ಎದುರಿಸಿದ ಮಲ್ಲಿಕಾ, 2004ರಲ್ಲಿ ಖ್ವಾಯಿಶ್ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಮಲ್ಲಿಕಾ ಬಾಲಿವುಡ್ ಮಂದಿಯ ಗಮನ ಸೆಳೆದಳು. ನಂತರ ಬಂದ ಮರ್ಡರ್ ಚಿತ್ರ ಆ ವರ್ಷದ ಬಹುದೊಡ್ಡ ಹಿಟ್ ಚಿತ್ರವಾಯಿತು. ಈಗಲೂ ಆಕೆ ಮರ್ಡರ್ ಮಲ್ಲಿಕಾ ಎಂದೇ ಖ್ಯಾತಿ ಪಡೆದಿದ್ದಾಳೆ. ಮಲ್ಲಿಕಾ ನಂತರ ಜಾಕಿ ಚಾನ್‌ ಜತೆಗೆ ದಿ ಮಿಥ್‌ನಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿ ವಿಶ್ವದಾದ್ಯಂತ ಅಬ್ಬರದ ಪ್ರಚಾರ ಪಡೆದಳು.

2006ರಲ್ಲಿ ಆಕೆ ನಟಿಸಿದ ಪ್ಯಾರ್‌ಕೆ ಸೈಡ್ ಎಫೆಕ್ಟ್ಸ್ ಕೂಡಾ ಯಶಸ್ಸು ಪಡೆಯಿತು. ತಮಿಳಿನ ದಶಾವತಾರಂನಲ್ಲಿ ಪುಟ್ಟ ಪಾತ್ರ ಮಾಡಿರುವ ಈಕೆ 2007ರಲ್ಲಿ ಆಪ್ ಕಾ ಸುರೂರ್ ಚಿತ್ರದ ಮೂಲಕ ದುಬಾರಿ ಬೆಲೆಯ ಐಟಂ ಗರ್ಲ್ ಆಗಿ ಹೊರಹೊಮ್ಮಿದಳು. ಈಗ ಈಕೆ ಐಟಂ ಡ್ಯಾನ್ಸೊಂದಕ್ಕೆ ಪಡೆಯುವ ಸಂಭಾವನೆ 1.5 ಕೋಟಿ ರೂಪಾಯಿ. ಕನ್ನಡದಲ್ಲಿ ಪ್ರೇಮ್ ನಿರ್ದೇಶನದ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದಲ್ಲೂ ಈಕೆ ಐಟಂ ನೃತ್ಯ ಮಾಡಿದ್ದಳು. ಸದ್ಯ ಹಿಸ್ಸ್ ಚಿತ್ರದ ಚಿತ್ರೀಕಣ ಮುಗಿಸಿದ್ದಾಳೆ. ಬೆರಳೆಣಿಕೆಯ ಹಿಂದಿ ಚಿತ್ರಗಳಿದ್ದರೂ, ಯಾವುವೂ ಸದ್ಯಕ್ಕೆ ಬಿಡುಗಡೆಯಾಗುವ ಸ್ಥಿತಿಯಲ್ಲಿಲ್ಲ. ಮಲ್ಲಿಕಾ ಸೆಕ್ಸೀಯೇನೋ ನಿಜ. ಹಾಟ್ ಕೂಡಾ ಹೌದು. ಆದರೆ ಆಕೆ ಕೇವಲ ಬಿಚ್ಚುವುದಕ್ಕಷ್ಟೇ ಸೀಮಿತವಾಗಲಿಲ್ಲ ಎಂಬುದೂ ಸತ್ಯ. ಮಲ್ಲಿಕಾಳ ಚಿತ್ರ ಚೆನ್ನಾಗಿರದಿದ್ದರೂ ಆಕೆಯ ನಟನೆ ಚೆನ್ನಾಗಿಯೇ ಇರುತ್ತದೆ.

ಮಲ್ಲಿಕಾಗೆ ಮದುವೆಯೂ ಆಗಿತ್ತು ಎಂಬ ಗಾಸಿಪ್ ಕೂಡಾ ಇದೆ. ಆಕೆ ಸಿನಿಮಾ ರಂಗಕ್ಕೆ ಬರುವ ಮೊದಲೇ ಪೈಲಟ್ ಒಬ್ಬಾತನನ್ನು ಆಕೆ ಮದುವೆಯಾಗಿದ್ದಳು. ಆದರೆ ಆತನ ಜತೆಗೆ ವಿಚ್ಛೇದನವೂ ಆಗಿದೆ ಎಂಬ ಸುದ್ದಿಯಿತ್ತು. ಅದು ಅಧಿಕೃತ ಎಂದು ಎಲ್ಲೂ ದಾಖಲಾಗಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಲ್ಲಿಕಾ ಶೆರಾವತ್, ಜಾಕಿ ಚಾನ್, ಹಾಲಿವುಡ್, ಮರ್ಡರ್, ಹಿಸ್ಸ್