ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2ಜಿ ದರ ಏರಿಕೆ: ದುಬಾರಿ ಕರೆ ದರಗಳನ್ನು ಪಾವತಿಸಲು ಸಿದ್ಧರಾಗಿ (TRAI | 2G price hike | Prepare to pay more for calls | 2G spectrum)
PTI
ಟೆಲಿಕಾಂ ಕಂಪೆನಿಗಳು 2ಜಿ ತರಂಗಾಂತರಗಳನ್ನು ಪಡೆಯಲು ಹೆಚ್ಚುವರಿ ದರವನ್ನು ಭರಿಸಬೇಕಾಗಿರುವುದರಿಂದ, ಹೆಚ್ಚುವರಿ ದರವನ್ನು ಗ್ರಾಹಕರಿಗೆ ವರ್ಗಾಯಿಸಲು ಟೆಲಿಕಾಂ ಕಂಪೆನಿಗಳು ನಿರ್ಧರಿಸಿವೆ.ಇದರಿಂದಾಗಿ ಮುಂದಿನ ದಿನಗಳಲ್ಲಿ ಕರೆ ದರಗಳು ಕೂಡಾ ದುಬಾರಿಯಾಗಲಿವೆ.

ಪ್ರಸ್ತುತ ಹಾಗೂ ನೂತನ ಟೆಲಿಕಾಂ ಕಂಪೆನಿಗಳ ಬೃಹತ್ ಹಣಕಾಸಿನ ತೊಡಕುಗಳ ಹಿನ್ನೆಲೆಯಲ್ಲಿ, ಟೆಲಿಕಾಂ ರೆಗ್ಯೂಲೇಟರ್ ಸಂಸ್ಥೆ ಟ್ರಾಯ್, 6.2 ಮೆಗಾಹರ್ಟ್ಜ್ ಪಾನ್-ಇಂಡಿಯಾ 2ಜಿ ತರಂಗಾಂತರಗಳಿಗಾಗಿ 10,947.45 ಕೋಟಿ ರೂಪಾಯಿಗಳನ್ನು ನಿಗದಿಪಡಿಸುವಂತೆ ಶಿಫಾರಸ್ಸು ಮಾಡಿದೆ.

ಟೆಲಿಕಾಂ ಕಂಪೆನಿಗಳು ಇಲ್ಲಿಯವರೆಗೆ 6.2 ಮೆಗಾಹರ್ಟ್ಜ್ ಪಾನ್-ಇಂಡಿಯಾ 2ಜಿ ತರಂಗಾಂತರಗಳಿಗಾಗಿ 1,658 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದ್ದು, ಇದೀಗ ಆರು ಪಟ್ಟು ಹೆಚ್ಚಳ ದರವನ್ನು ಭರಿಸಬೇಕಾಗಿದೆ.

ಟ್ರಾಯ್ ಸಂಸ್ಥೆ 2ಜಿ ತರಂಗಾಂತರಗಳಿಗಾಗಿ ನೂತನ ದರಕ್ಕಾಗಿ ಶಿಫಾರಸು ಮಾಡಿದೆ. ಆದ್ದರಿಂದ ಟೆಲಿಕಾಂ ಕಂಪೆನಿಗಳು ಪ್ರಸ್ತುತವಿರುವ ದರಕ್ಕಿಂತ ಆರು ಪಟ್ಟು ಹೆಚ್ಚಳ ದರವನ್ನು ಭರಿಸಬೇಕಾಗಿದೆ. ನೂತನ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.

ನೂತನ ದಾರಗಳ ಜಾರಿಯಿಂದಾಗಿ ಬಿಎಸ್‌ಎನ್‌ಎಲ್ ಸಂಸ್ಥೆ ಹೆಚ್ಚುಪರಿಯಾಗಿ 7276 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಭಾರ್ತಿ ಏರ್‌ಟೆಲ್ 4000 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಐಡಿಯಾ ಸೆಲ್ಯೂಲರ್, ಟೆಲಿಕಾಂ ಕಂಪೆನಿ 1,316 ಕೋಟಿ ರೂಪಾಯಿಗಳ ಹೆಚ್ಚುವರಿ ದರವನ್ನು ನೀಡಬೇಕಾಗುತ್ತದೆ. ವೊಡಾಫೋನ್ ಸಂಸ್ಥೆ ಕೂಡಾ 1,743 ಕೋಟಿ ರೂಪಾಯಿ ಹೆಚ್ಚುವರಿ ದರವನ್ನು ಭರಿಸಬೇಕಾಗಿದೆ.

ಎಂಟಿಎನ್‌ಎಲ್, 800 ಕೋಟಿ ರೂಪಾಯಿ ಹೆಚ್ಚುವರಿ ದರ ಹಾಗೂ ಏರ್‌ಸೆಲ್ 841 ಕೋಟಿ ರೂಪಾಯಿ ಮತ್ತು ರಿಲಯನ್ಸ್ ಕಮ್ಯೂನಿಕೇಶನ್‌ 70 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಒಟ್ಟಾರೆ, ಎಲ್ಲಾ ಟೆಲಿಕಾಂ ಕಂಪೆನಿಗಳಿಂದ ಹೆಚ್ಚುವರಿಯಾಗಿ 16,000 ಕೋಟಿ ರೂಪಾಯಿಗಳನ್ನು ಭರಿಸಬೇಕಾಗುತ್ತದೆ.

ಟೆಲಿಕಾಂ ಕಂಪೆನಿಗಳಿಗೆ,6.4 ಮೆಗಾ ಹರ್ಟ್ಜ್ ಲೈಸೆನ್ಸ್ ಬೇಕಾದಲ್ಲಿ ಹೆಚ್ಚುವರಿ ಶುಲ್ಕವನ್ನು ಭರಿಸಬೇಕಾಗುತ್ತದೆ ಎಂದು ಕೇಂದ್ರದ ಟೆಲಿಕಾಂ ಖಾತೆ ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.
ಇವನ್ನೂ ಓದಿ