ಅನಗತ್ಯ ಕರೆ ಮತ್ತು ಎಸ್‌ಎಂಎಸ್ ಹಾವಳಿಗಳ ನಿಯಂತ್ರಣಕ್ಕಾಗಿ ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್, ಮೊಬೈಲ್ ಮತ್ತು ಸ್ಥಿರ ದೂರವಾಣಿ ಗ್ರಾಹಕರ ಆದ್ಯತೆಯ ನೋಂದಣಿ ಕಾರ್ಯವಿಧಾನವನ್ನು ಆರಂಭಿಸಿದೆ.
ಒಂದು ವೇಳೆ, ನಿಮಗೆ ಟೆಲಿ ಮಾರ್ಕೆಟಿಂಗ್ ಮತ್ತು ಅನಗತ್ಯ ವಾಣಿಜ್ಯಿಕ ಎಸ್‌ಎಂಎಸ್‌ಗಳನ್ನು ತಡೆಯಲು ಬಯಸಿದಲ್ಲಿ, ನೀವು ವೈಸ್ ಕಾಲ್ ಅಥವಾ ಎಸ್‌ಎಂಎಸ್ ಮೂಲಕ ನಿಮ್ಮ ಸೇವಾ ಕಂಪೆನಿಯಲ್ಲಿ ನೊಂದಾಯಿಸಬಹುದಾಗಿದ್ದು, ಮಾರ್ಚ್ 1ರಿಂದ ಜಾರಿಗೆ ಬರಲಿದೆ.
ನೀವು ಟೋಲ್‌ಫ್ರೀ ಸಂಖ್ಯೆ 1909ಕ್ಕೆ ಕರೆ ಮಾಡಿ ಕೂಡಾ ಅನಗತ್ಯ ಕರೆ ಮತ್ತು ಎಸ್‌ಎಂಎಸ್ ಹಾವಳಿಯನ್ನು ನಿಯಂತ್ರಿಸಬಹುದಾಗಿದೆ. ಟೋಲ್‌ಫ್ರೀ ಸಂಖ್ಯೆಗೆ ಕರೆ ಅಥವಾ ಎಸ್‌ಎಂಎಸ್ ಮಾಡಿದಲ್ಲಿ ಕರೆ ದರ ನೀಡಬೇಕಾಗಿಲ್ಲ.
ಅನಗತ್ಯ ವಾಣಿಜ್ಯ ಕರೆಗಳು ಅಥವಾ ಎಸ್‌ಎಂಎಸ್‌ಗಳನ್ನು ಸಂಪೂರ್ಣವಾಗಿ ಅಥವಾ ಭಾಗಾಂಶ( ಉದಾಹರಣೆಗೆ ಬ್ಯಾಂಕಿಂಗ್/ಇನ್ಶೂರೆನ್ಸ್/ಫೈನಾನ್ಶಿಯಲ್ ಪ್ರೊಡೆಕ್ಟ್ಸ್/ಕ್ರೆಡಿಟ್ ಕಾರ್ಡ್/ ರಿಯಲ್ ಎಸ್ಟೇಟ್/ ಶಿಕ್ಷಣ/ ಆರೋಗ್ಯ/ ಗೃಹೋಪಕರಣ ವಸ್ತುಗಳು/ ವಾಹನೋದ್ಯಮ/ ಎಂಟರ್‌ಟೇನ್‌ಮೆಂಟ್/ ಐಟಿ ಮತ್ತು ಪ್ರವಾಸೋದ್ಯಮ ಕ್ಷೇತ್ರ) ತಡೆಯುವ ಆಯ್ಕೆ ನಿಮ್ಮ ಕೈಯಲ್ಲಿದೆ.
ಟೋಲ್‌ಫ್ರೀ ಸಂಖ್ಯೆ 1909ಕ್ಕೆ ಕರೆ ಮಾಡಿ ನೋಂದಾಯಿಸಿ
1 ಟೋಲ್‌ಫ್ರಿ ಸಂಖ್ಯೆ 1909ಕ್ಕೆ ಕರೆ ಮಾಡಿದ ನಂತರ ಐವಿಆರ್‌ಎಸ್ ಆಯ್ಕೆ ಮಾಡಿಕೊಳ್ಳಿ, ಕರೆಯಲ್ಲಿ ನೀಡಿದ ಮಾಹಿತಿಯನ್ನು ಪಾಲಿಸಿ.
2 ಐವಿಆರ್‌ಎಸ್‌ನಲ್ಲಿ ಅನಗತ್ಯ ವಾಣಿಜ್ಯ ಕರೆಗಳು ಅಥವಾ ಎಸ್‌ಎಂಎಸ್‌ಗಳನ್ನು ಸಂಪೂರ್ಣವಾಗಿ ಅಥವಾ ಭಾಗಾಂಶ ತಡೆಯುವ ಆಯ್ಕೆ ನಿಮ್ಮ ಕೈಯಲ್ಲಿದೆ.
3 ಒಂದು ವೇಳೆ ಅನಗತ್ಯ ವಾಣಿಜ್ಯ ಕರೆಗಳು ಅಥವಾ ಎಸ್‌ಎಂಎಸ್‌ಗಳನ್ನು ಸಂಪೂರ್ಣವಾಗಿ ತಡೆಯಬೇಕಾದಲ್ಲಿ, ನಿಮ್ಮ ಹೇಳಿಕೆಗಳು ರಿಕಾರ್ಡ್‌ನಲ್ಲಿ ದಾಖಲಾಗುತ್ತವೆ. ನಿಮ್ಮ ನಿರ್ಧಾರವನ್ನು ಎಸ್‌ಎಂಎಸ್ ಮೂಲಕ ನಿಮಗೆ ಮಾಹಿತಿ ನೀಡಲಾಗುತ್ತದೆ.
4 ಒಂದು ವೇಳೆ ಅನಗತ್ಯ ವಾಣಿಜ್ಯ ಕರೆಗಳು ಅಥವಾ ಎಸ್‌ಎಂಎಸ್‌ಗಳನ್ನು ಭಾಗಾಂಶ ತಡೆಯಲು ಬಯಸಿದಲ್ಲಿ, ಈ ಕೆಳಗೆ ತೋರಿಸಿದ ವಿಭಾಗಗಳಲ್ಲಿ ನೀವು ಸ್ವೀಕರಿಸ ಬಯಸುವ ವಿಭಾಗವನ್ನು ಆಯ್ಕೆ ಮಾಡುವಂತೆ ಐವಿಆರ್‌ಎಸ್ ಕೋರುತ್ತದೆ.
1 ಬ್ಯಾಂಕಿಂಗ್/ಇನ್ಶೂರೆನ್ಸ್/ಫೈನಾನ್ಶಿಯಲ್ ಪ್ರೊಡೆಕ್ಟ್ಸ್/ಕ್ರೆಡಿಟ್ ಕಾರ್ಡ್
2 ರಿಯಲ್ ಎಸ್ಟೇಟ್
3 ಶಿಕ್ಷಣ
4 ಆರೋಗ್ಯ
5 ಗೃಹೋಪಕರಣ ವಸ್ತುಗಳು ಮತ್ತು ವಾಹನೋದ್ಯಮ
6 ಸಂಪರ್ಕ/ಮನೋರಂಜನೆ/ಐಟಿ
7 ಪ್ರವಾಸೋದ್ಯಮ ಮತ್ತು ವಿರಾಮ
8 ಐವಿಆರ್‌ಎಸ್, ನಿಮ್ಮ ಆಯ್ಕೆಗಳನ್ನು ಸಂದೇಶದ ಮೂಲಕ ಖಚಿತಪಡಿಸುತ್ತದೆ.
ಎಸ್‌ಎಂಎಸ್ ಮೂಲಕ ಅನಗತ್ಯ ವಾಣಿಜ್ಯ ಕರೆಗಳು ಅಥವಾ ಎಸ್‌ಎಂಎಸ್‌ಗಳನ್ನು ತಡೆಯುವುದು. (BOLD)
1 ವಾಣಿಜ್ಯ ಸಂಪರ್ಕಗಳಿಗಾಗಿ ನಿಮ್ಮ ಆಯ್ಕೆಯನ್ನು 1909ಕ್ಕೆ ಎಸ್‌ಎಂಎಸ್ ಸಂದೇಶವನ್ನು ಕಳಉಹಿಸುವ ಮೂಲಕ ನೋಂದಾಯಿಸಬಹುದಾಗಿದೆ.
2 ವಿವಿಧ ವಿಭಾಗಗಳ ಆಯ್ಕೆ ಮಾಡುವ ವಿಧಾನವನ್ನು ಈ ಕೆಳಗೆ ತೋರಿಸಲಾಗಿದೆ.
(A) ಅನಗತ್ಯ ಕರೆ ಎಸ್‌ಎಂಎಸ್‌ಗಳನ್ನು ಸಂಪೂರ್ಣವಾಗಿ ತಡೆಯಲು “START 0” to 1909ಗೆ ಸಂದೇಶ ರವಾನಿಸಿ.
(B) ಅನಗತ್ಯ ಕರೆ ಎಸ್‌ಎಂಎಸ್‌ಗಳನ್ನು ಭಾಗಾಂಶ ತಡೆಯಲು “Start ” to 1909ಗೆ ಸಂದೇಶವನ್ನು ಕೆಳಗೆ ತೋರಿಸಿದಂತೆ ಕಳುಹಿಸಿ.
ಬ್ಯಾಂಕಿಂಗ್/ಇನ್ಶೂರೆನ್ಸ್/ಫೈನಾನ್ಶಿಯಲ್ ಪ್ರೊಡೆಕ್ಟ್ಸ್/ಕ್ರೆಡಿಟ್ ಕಾರ್ಡ್‌ಗಳ ಮಾಹಿತಿ ಪಡೆಯಲು “START 1” ಸಂದೇಶ ರವಾನಿಸಿ.
ರಿಯಲ್ ಎಸ್ಟೇಟ್ ಬಗ್ಗೆ ಮಾಹಿತಿಗಳನ್ನು ಪಡೆಯಲು “START 2” ಸಂದೇಶ ಕಳುಹಿಸಿ.
ಶಿಕ್ಷಣದ ಮಾಹಿತಿ ಪಡೆಯಲು “START 3”, ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು “START 4” ಸಂದೇಶ ರವಾನಿಸಿ.
ಗೃಹೋಪಕರಣ ವಸ್ತುಗಳು ಮತ್ತು ವಾಹನೋದ್ಯಮ ಮಾಹಿತಿ ಪಡೆಯಲು “START 5” ಸಂದೇಶ ರವಾನಿಸಿ.