|
ಇರಾಕ್‌ನಿಂದ ಬ್ರಿಟಿಷ್ ಸೇನೆ ವಾಪಸ್
|
|
ಲಂಡನ್, ಭಾನುವಾರ, 2 ಸೆಪ್ಟೆಂಬರ್ 2007( 16:37 IST )
|
|
|
|
|
|
|
|
ಮುಂದಿನ ತಿಂಗಳು ಇರಾಕ್‌ನ ಬಾಸ್ರಾ ಪ್ರಾಂತ್ಯದಿಂದ ಬ್ರಿಟಿಷ್ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದು. ಬ್ರಿಟನ್ ಸೇನೆಯ ಸ್ಥಾನದಲ್ಲಿ ಸ್ಥಳಿಯ ಸೇನಾಪಡೆಗಳು ಕಾನೂನು ಸುವ್ಯವ್ಯಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಮುಂದಿನ ತಿಂಗಳು ಸುಮಾರು 5,500 ಬ್ರಟಿಷ್ ಸೈನಿಕರು ಸ್ವದೇಶಕ್ಕೆ ಮರಳಲಿದ್ದಾರೆ ಇರಾಕ್ ಪರಿಸ್ಥಿತಿಯನ್ನು ಗಮನಿಸಿರುವ ಇಂಗ್ಲೆಂಡ್ ತನ್ನ ಸೇನಾಪಡೆಯ ಕೆಲ ತುಕಡಿಗಳನ್ನು ಪಕ್ಕದ ಕುವೈತ್‌ನಲ್ಲಿ ಇಡುವುದಕ್ಕೆ ಯೋಚಿಸುತ್ತಿದ್ದು, ಈ ನಿಟ್ಟಿನಲ್ಲಿ ಕುವೈತ್‌ನೊಂದಿಗೆ ಮಾತುಕತೆ ನಡೆಯುತ್ತಿದೆ.
ಇರಾಕ್ ಯುದ್ದದಲ್ಲಿ ಅಮೆರಿಕದ ಸಹಾಯ ನೀಡಿದ ಇಂಗ್ಲೆಂಡ್ ಈಗ ತನ್ನ ಸೇನಾಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿರುವುದು. ಅಮೆರಿಕದ ರಕ್ಷಣಾ ತಜ್ಞರ ಟೀಕೆಗೆ ಕಾರಣವಾಗಿದೆ. ಇರಾಕ್ ಪರಿಸ್ಥಿತಿಗೆ ಇಂಗ್ಲೆಂಡಿನ ಅಂತರಿಕ ವಿಷಯಗಳು ಸೂಕ್ಷ್ಮವಾಗಿದ್ದು ಆದ್ದರಿಂದ ಬ್ರಿಟಿಷ್ ಸೇನಾಪಡೆಗಳ ಹಿಂದೆಗತಕ್ಕೆ ಬಾಗ್ದಾದಿನಲ್ಲಿರುವ ಅಮೆರಿಕದ ಮಿಲಿಟರಿ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.
|
|
|
|
|
|
|
|