ಆಸ್ಟ್ರೇಲಿಯ: ಕಿರ್ಪಾನ್, ಬುರ್ಖಾಗೆ ಶಿಫಾರಸು
|
|
|
ಮೆಲ್ಬೋರ್ನ್, ಗುರುವಾರ, 6 ಡಿಸೆಂಬರ್ 2007( 17:12 IST )
|
|
|
|
|
|
|
|
ಸಿಖ್ ವಿದ್ಯಾರ್ಥಿಗಳು ಕಿರ್ಪಾನ್‌ಗಳನ್ನು ಒಯ್ಯಬಹುದು ಮತ್ತು ಮುಸ್ಲಿಂ ಬಾಲಕಿಯರು ಶಾಲೆಗಳಲ್ಲಿ ಬುರ್ಖಾ ಧರಿಸಬಹುದು ಎಂದು ಆಸ್ಟ್ರೇಲಿಯ ವಿಕ್ಟೋರಿಯ ರಾಜ್ಯದ ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದ್ದು, ಇದು ತೀವ್ರ ಪ್ರತಿಭಟನೆಗೆ ಗುರಿಯಾಗಿದೆ.
ಸಮವಸ್ತ್ರದ ಬಗ್ಗೆ ವರ್ಷವಿಡೀ ತನಿಖೆ ನಡೆಸಿದ ವಿಕ್ಟೋರಿಯ ಸಂಸತ್ತಿನ ಶಿಕ್ಷಣ ಮತ್ತು ತರಬೇತಿ ಸಮಿತಿಯು ಎಲ್ಲ ಶಾಲೆಗಳು ವಿದ್ಯಾರ್ಥಿಗಳಿಗೆ ಧಾರ್ಮಿಕತೆ ಸಂಕೇತವಾದ ಬಟ್ಟೆ ಅಥವಾ ಇತರೆ ವಸ್ತುಗಳಿಗೆ ಅವಕಾಶ ನೀಡಬೇಕೆಂದು ಶಿಫಾರಸು ಮಾಡಿದೆ.
ಸಿಖ್ ಸಮುದಾಯದ ಬಾಲಕರು ಶಾಲೆಗೆ ಡೊಂಕಾಗಿರುವ ಸ್ಟೀಲ್ ಬಾಕು ಕಿರ್ಪಾನ್ ಒಯ್ಯಲು ಅವಕಾಶ ನೀಡುವಂತೆ ಅದು ಶಾಲೆಗಳಿಗೆ ಸೂಚಿಸಿದೆ. ವಿದ್ಯಾರ್ಥಿಗಳು ಶಾಲೆ ಸಮವಸ್ತ್ರದೊಳಗೆ ಅಡಗಿಸಿಡುವ ಕಿರ್ಪಾನ್ ಒಯ್ಯುವುದಕ್ಕೆ ಪ್ರಾಂಶುಪಾಲರು ಮತ್ತು ಶಿಕ್ಷಕರು ಆತಂಕ ವ್ಯಕ್ತಪಡಿಸಿದರೂ, ಸಿಖ್ ಸಮುದಾಯಕ್ಕೆ ಇದು ಧಾರ್ಮಿಕತೆಯ ಸಂಕೇತವಾಗಿರುವುದರಿಂದ ಮುಖ್ಯವಾಗಿದೆ ಎಂದು ಸಮಿತಿ ಪ್ರತಿಪಾದಿಸಿದೆ.
ಸಮಿತಿಯ ವರದಿಗೆ ರಾಜ್ಯಸರ್ಕಾರದ ಪ್ರತಿಕ್ರಿಯೆಯನ್ನು 6 ತಿಂಗಳುಗಳಲ್ಲಿ ನಿರೀಕ್ಷಿಸಲಾಗಿದೆ. ಕಿರ್ಪಾನ್ ಶಾಲೆಗೆ ತರುವುದು ಅಪಾಯಕಾರಿಯಾಗಿದ್ದು ಅದಕ್ಕೆ ಅವಕಾಶ ನೀಡಬಾರದು ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ. ಅದು ದುರ್ಬಳಕೆಯಾದರೆ ಅದರಿಂದ ಮಕ್ಕಳಿಗೆ ಅನಾಹುತವಾಗಬಹುದೆಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
|
|
|
|