ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಬುಧವಾರ ಶ್ವೇತಭವನಕ್ಕೆ ತೆರಳುವ ಮಾರ್ಗದಲ್ಲಿ ಕಾಲುಜಾರಿ ಬಿದ್ದು ಬಲಮೊಣಕೈ ಮೂಳೆ ಮುರಿದುಕೊಂಡಿದ್ದಾರೆಂದು ಸಿಬ್ಬಂದಿ ಮುಖ್ಯಸ್ಥ ತಿಳಿಸಿದ್ದಾರೆ. ಶ್ವೇತಭವನದತ್ತ ಕ್ಲಿಂಟನ್ ತೆರಳುತ್ತಿದ್ದಾಗ ಕೆಳಕ್ಕೆ ಬಿದ್ದಿದ್ದರಿಂದ ಅವರ ಮೊಣಕೈ ಗಾಯಮಾಡಿಕೊಂಡರೆಂದು ಸಿಬ್ಬಂದಿ ಮುಖ್ಯಸ್ಥ ಚೆರೈಲ್ ಮಿಲ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕ್ಲಿಂಟನ್ ಮನೆಗೆ ತೆರಳುವ ಮುಂಚೆ ಜಾರ್ಜ್ ವಾಷಿಂಗ್ಟನ್ ವಿವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಮುಂಬರುವ ವಾರದಲ್ಲಿ ಮೊಣಕಟ್ಟಿನ ದುರಸ್ತಿಗೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲಿದ್ದಾರೆಂದು ಮಿಲ್ಸ್ ಹೇಳಿದ್ದಾರೆ.ವೈದ್ಯಕೀಯ ತಂಡದ ವೃತ್ತಿಪರತೆ ಮತ್ತು ಉಪಕಾರವನ್ನು ಮೆಚ್ಚಿದ ಕ್ಲಿಂಟನ್ ತಾವು ಪುನಃ ಕೆಲಸ ಆರಂಭಿಸುವ ನಿರೀಕ್ಷೆಯಲ್ಲಿರುವುದಾಗಿ ಹೇಳಿದರು.
ಕ್ಲಿಂಟನ್ ಮೊಣಕೈ ಮುರಿದಿದ್ದರಿಂದ ನಟಿ ಏಂಜೆಲಿನಾ ಜೋಲಿ ಜತೆ ವಿಶ್ವ ನಿರಾಶ್ರಿತ ದಿನ ಸಂಕೇತವಾಗಿ ವಾಷಿಂಗ್ಟನ್ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿದ್ದ ಕ್ಲಿಂಟನ್ ಸಾರ್ವಜನಿಕ ವೇಳಾಪಟ್ಟಿಯಿಂದ ಕಾರ್ಯಕ್ರಮವನ್ನು ತೆಗೆಯಲಾಗಿದೆ. |