ಹಿಂದು ಕುಶ್ ಪರ್ವತದಲ್ಲಿ ಕೇಂದ್ರಬಿಂದುವಿದ್ದ, ರಿಕ್ಟರ್‌ಮಾಪಕದಲ್ಲಿ 6.2 ತೀವ್ರತೆಯ ಭೀಕರ ಭೂಕಂಪವು ಆಫ್ಘಾನಿಸ್ತಾನದ ಪೂರ್ವ ಭಾಗ ಮತ್ತು ಪಾಕಿಸ್ತಾನದಲ್ಲಿ ಶುಕ್ರವಾರ ಮುಂಜಾನೆ ಅಪ್ಪಳಿಸಿದ್ದು, ಆಫ್ಘನ್ ಮತ್ತು ಪಾಕಿಸ್ತಾನ ರಾಜಧಾನಿಯ ಕಟ್ಟಡಗಳಲ್ಲಿ ತೀವ್ರ ಕಂಪನ ಉಂಟಾಗಿವೆ. ಭೂಕಂಪದಿಂದ ಯಾವುದೇ ಸಾವುನೋವಿನ ಆರಂಭಿಕ ವರದಿಗಳು ಲಭ್ಯವಾಗಿಲ್ಲ.
ಭೂಕಂಪದ ಕೇಂದ್ರಬಿಂದು ಕಾಬೂಲ್ ಈಶಾನ್ಯಕ್ಕೆ 167 ಮೈಲು ದೂರದ ಪರ್ವತಪ್ರದೇಶ ಮತ್ತು ಮಿಂಗೋರಾ ಪಶ್ಚಿಮಕ್ಕೆ 140 ಮೈಲು ದೂರದಲ್ಲಿತ್ತು ಎಂದು ಅಮೆರಿಕದ ಬೌಗೋಳಿಕ ಸಮೀಕ್ಷೆ ತಿಳಿಸಿದೆ.
ಪಾಕಿಸ್ತಾನದ ನಗರಗಳಾದ ಪೇಶಾವರ ಮತ್ತು ಇಸ್ಲಾಮಾಬಾದ್ ರಾಜಧಾನಿಯ ಕಟ್ಟಡಗಳು ಭೂಕಂಪದಿಂದ ಅದುರಿದ್ದು, ಭಾರತದ ಗಡಿಯಲ್ಲಿ ಲಾಹೋರ್‌ವರೆಗೆ ಕಂಪನದ ಅನುಭವವಾಗಿದೆಯೆಂದು ಪಾಕಿಸ್ತಾನ ಟೆಲಿವಿಷನ್ ನಿಲ್ದಾಣಗಳು ವರದಿಮಾಡಿದೆ.