ಸೊಮಾಲಿಯ ಕಡಲ್ಗಳ್ಳರು ಪನಾಮಾದ ಧ್ವಜವಿರುವ ಹಡಗೊಂದನ್ನು ಸೊಮಾಲಿಯ ಜಲಪ್ರದೇಶದಲ್ಲಿ ಅಪಹರಿಸಿದ್ದು, 24 ಮಂದಿ ಭಾರತೀಯ ಸಿಬ್ಬಂದಿಯಿದ್ದ 26 ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.
ಎಂವಿ ಅಲ್ ಖಾಲಿಕ್ ಎಂಬ ಹಡಗನ್ನು ಸೊಮಾಲಿಯದಿಂದ ಗುರುವಾರ ಮುಂಜಾನೆ ಅಪಹರಿಸಲಾಯಿತು ಎಂದು ನ್ಯಾಟೊ ವಕ್ತಾರೆ ತಿಳಿಸಿದ್ದಾರೆ. ಹಡಗಿನಲ್ಲಿ ಸುಮಾರು 26 ಸಿಬ್ಬಂದಿಯಿದ್ದು, ಅವರಲ್ಲಿ 24 ಜನರು ಭಾರತೀಯರು ಮತ್ತು ಇಬ್ಬರು ಬರ್ಮೀಯರಾಗಿದ್ದರು.
ಇಟಲಿಯ ಧ್ವಜವನ್ನು ಹೊಂದಿರುವ ಎರಡನೇ ಹಡಗು ಜಾಲಿ ರೊಸೊ ಮೇಲೆ ಕೂಡ ಕಡಲ್ಗಳ್ಳರು ಗುಂಡಿನ ದಾಳಿ ನಡೆಸಿದ್ದರೆಂದು ಅವರು ಹೇಳಿದ್ದಾರೆ.