ವಾಯುಪಡೆ ನೆಲೆ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ, ಪಾಕಿಸ್ತಾನದ ವಾಯವ್ಯ ಪೇಶಾವರದಲ್ಲಿ ಭಾರೀ ಆಸ್ಫೋಟವೊಂದು ಕೇಳಿಬಂದಿದ್ದು, ಈ ಘಟನೆಯಲ್ಲಿ 8 ಜನರು ಗಾಯಗೊಂಡಿದ್ದಾಗಿ ವರದಿಯಾಗಿದೆ.
ಹಯಾತಾಬಾದ್‌ನ ಸ್ವಾನ್ ಉಪಾಹಾರ ಗೃಹದ ಪಾರ್ಕಿಂಗ್ ಪ್ರದೇಶದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆಯೆಂದು ಪೊಲೀಸರು ಹೇಳಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ಈ ಪ್ರದೇಶದಲ್ಲಿ ಗುಂಡಿನ ಚಕಮಕಿಯ ಸದ್ದು ಕೇಳಿಬರುತ್ತಿದ್ದು, ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ.
ಈಜುವ ಕೊಳ ಮತ್ತು ಸಾಮಾಜಿಕ ಸಮಾರಂಭಗಳಿಗೆ ಸೌಲಭ್ಯ ಹೊಂದಿರುವ ರೆಸ್ಟರೆಂಟ್, ಜನರಿಗೆ ಮನರಂಜನಾ ಕೇಂದ್ರವಾಗಿ ಕೂಡ ಸೇವೆ ಸಲ್ಲಿಸುತ್ತಿದೆ.ಪಾಕಿಸ್ತಾನದ ಬುಡಕಟ್ಟು ಪ್ರದೇಶದ ತುದಿಯಲ್ಲಿರುವ ಪೇಶಾವರದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 6 ಭಯೋತ್ಪಾದನೆ ದಾಳಿಗಳನ್ನು ನಡೆಸಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.