ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತಕ್ಕೆ ಸ್ನೇಹಹಸ್ತ ಚಾಚಿದ ಚೀನಾ ಪ್ರಧಾನಿ (Manmohan | Wen Jiabao | Arunachal | ASEAN)
Feedback Print Bookmark and Share
 
ಭಾರತದ ಜತೆ ಚೀನಾ ಆರೋಗ್ಯಕರ ಮತ್ತು ಸ್ಥಿರ ಬಾಂಧವ್ಯವನ್ನು ಬಯಸುತ್ತದೆಂದು ಚೀನಾ ಪ್ರಧಾನಮಂತ್ರಿ ವೆನ್ ಜಿಯಾಬೊ ಅವರು ಇಲ್ಲಿಗೆ ಭೇಟಿ ನೀಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸೂಚಿಸುವ ಮ‌ೂಲಕ ಭಾರತದ ಜತೆ ಸ್ನೇಹಹಸ್ತ ಚಾಚಿದ್ದಾರೆ.

ಅರುಣಾಚಲ ಪ್ರದೇಶ ಕುರಿತು ನೆರೆಹೊರೆಯ ದೇಶಗಳ ನಡುವೆ ವಾಕ್ಸಮರದ ನೇಪಥ್ಯದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಚೀನಾದ ಸಹವರ್ತಿ ವೆನ್ ಜಿಯಾಬೊ ಶನಿವಾರ ಇಲ್ಲಿ ಭೇಟಿ ಮಾಡಿ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳನ್ನು ಕುರಿತು ಚರ್ಚಿಸಿದರು. ಥಾಯ್ ಬೀಚ್ ವಿಹಾರಧಾಮದಲ್ಲಿ ಏಸಿಯಾನ್ ಶೃಂಗಸಭೆಯ ನೇಪಥ್ಯದಲ್ಲಿ ಇಲ್ಲಿಗೆ ನಿನ್ನೆ ಆಗಮಿಸಿದ ಸಿಂಗ್ ಅವರು ವೆನ್ ಜತೆ ನಿರ್ಣಾಯಕ ದ್ವಿಪಕ್ಷೀಯ ವಿಷಯಗಳನ್ನು ಕುರಿತು ಚರ್ಚಿಸಿದರು.

ಸಭೆಯಲ್ಲಿ ತಮ್ಮ ಆರಂಭದ ಪ್ರತಿಕ್ರಿಯೆಯಲ್ಲಿ, ಭಾರತದ ಜತೆ ಆರೋಗ್ಯಕರ ಮತ್ತು ಸ್ಥಿರ ಬಾಂಧವ್ಯ ಬಯಸುವುದಾಗಿ ವೆನ್ ಹೇಳಿದರು. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ 60ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ಸಿಂಗ್ ವೆನ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಅರುಚಾಲದ ಬಗ್ಗೆ ಚೀನಾ ಪ್ರಚೋದನಾತ್ಮಕ ಹೇಳಿಕೆಯಿಂದ ಭಾರತದ ಖಾರವಾದ ಪ್ರತಿಕ್ರಿಯೆ ಬಳಿಕ ಉಭಯ ರಾಷ್ಟ್ರಗಳು ಸ್ನೇಹ ಹಸ್ತಕ್ಕೆ ಯತ್ನಿಸುತ್ತಿರುವ ನಡುವೆ ಈ ಭೇಟಿ ನಡೆದಿದೆ.
ಚೀನಾ ಅರುಣಾಚಲ ಪ್ರದೇಶವನ್ನು ವಿವಾದಾತ್ಮಕ ಪ್ರದೇಶವೆಂದು ಪರಿಗಣಿಸಿದ್ದು, ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಸಿಂಗ್ ಅಲ್ಲಿಗೆ ಭೇಟಿ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.

ಭಾರತ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿ ಅರುಣಾಚಲ ಭಾರತದ ಅವಿಭಾಜ್ಯ ಅಂಗವೆಂದು ಪ್ರತಿಪಾದಿಸಿತ್ತು. ಏತನ್ಮಧ್ಯೆ ಚೀನಾ-ಭಾರತ ಬಾಂಧವ್ಯದ ಬಗ್ಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಪ್ರತಿಕ್ರಿಯಿಸಿದ್ದು, ಉಭಯ ರಾಷ್ಟ್ರಗಳ ನಡುವೆ ಅನೇಕ ಕ್ಷೇತ್ರಗಳಲ್ಲಿ ಭಾಂಧವ್ಯ ಬೆಳೆದಿದ್ದರೂ ಜಟಿಲತೆಯಿಂದ ಕೂಡಿದೆಯೆಂದು ಹೇಳಿದ್ದಾರೆ. ಭಾರತ ಮತ್ತು ಚೀನಾದ ನಡುವೆ ಇತ್ಯರ್ಥವಾಗಬೇಕಿರುವ ವಿವಾದಗಳ ಬಗ್ಗೆ ನಿಮಗೆ ತಿಳಿದಿರಬಹುದು. ವಿಶೇಷವಾಗಿ ಉನ್ನತ ಮಟ್ಟದ ಇಂತಹ ಸಭೆಗಳಲ್ಲಿ ಇವೆಲ್ಲ ವಿವಾದಗಳ ಇತ್ಯರ್ಥಕ್ಕೆ ಅವಕಾಶವೆಂದು ರಾವ್ ಹೇಳಿದರು.

ಸಿಂಗ್ ಅವರನ್ನು ಸಭೆ ನಡೆಯುವ ದುಸಿತ್ ಥಾನಿ ಹೊಟೆಲ್‌ನಲ್ಲಿ ಹಾರ್ದಿಕವಾಗಿ ಸ್ವಾಗತಿಸಿದ ವೆನ್, ಸಿಂಗ್ ಅವರನ್ನು ತಮ್ಮ ಹಳೆಯ ಸ್ನೇಹಿತರೆಂದು ಬಣ್ಣಿಸಿ, ಅವರ ಮುಂಚಿನ ಭೇಟಿಗಳನ್ನು ಸ್ಮರಿಸಿದರು. ಮುಂದಿನ ದಿನಗಳಲ್ಲಿ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಆಶಾವಾದವನ್ನು ಚೀನಾ ಪ್ರಧಾನಿ ವ್ಯಕ್ತಪಡಿಸಿದರು.

ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ್ ಶರ್ಮಾ, ಪ್ರಧಾನಮಂತ್ರಿ ಪ್ರಧಾನ ಕಾರ್ಯದರ್ಶಿ ಟಿ.ಕೆ.ಎ.ನಾಯರ್, ಜಂಟಿ ಕಾರ್ಯದರ್ಶಿ ಎನ್.ರವಿ ಭಾರತದ ಕಡೆಯಿಂದ ಸಭೆಯಲ್ಲಿ ಭಾಗವಹಿಸಿದ್ದರು.ಚೀನಾ ಜಮ್ಮುಕಾಶ್ಮೀರದ ಜನರಿಗೆ ಪ್ರತ್ಯೇಕ ವೀಸಾ ನೀಡಿದ್ದು ಕೂಡ ಉಭಯ ರಾಷ್ಟ್ರಗಳ ನಡುವೆ ವಾಗ್ವಾದಕ್ಕೆ ಎಡೆಮಾಡಿತ್ತು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಅಭಿವೃದ್ಧಿ ಚಟುವಟಿಕೆಗಳು ಚೀನಾ-ಭಾರತ ಬಾಂಧವ್ಯದ ಹಿತಾಸಕ್ತಿಗೆ ಪೂರಕವಾಗಿಲ್ಲವೆಂದು ಕೂಡ ಭಾರತ ಹೇಳಿತ್ತು. ಬ್ರಹ್ಮಪುತ್ರ ನದಿಗೆ ಚೀನಾ ಅಣೆಕಟ್ಟುಗಳನ್ನು ಕಟ್ಟುತ್ತಿರುವ ವಿಷಯಗಳ ಬಗ್ಗೆ ಕೂಡ ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಅರುಣಾಚಲಗಳು ಕಳವಳ ವ್ಯಕ್ತಪಡಿಸಿದ್ದವು. ಆದಾಗ್ಯೂ ಕಳೆದ ಕೆಲವು ದಿನಗಳಿಂದ ಉಭಯ ರಾಷ್ಟ್ರಗಳ ನಡುವೆ ವಿವಾದ ಉಪಶಮನದ ಮಾತುಗಳು ಕೇಳಿಬಂದಿದ್ದವು.
ಸಂಬಂಧಿತ ಮಾಹಿತಿ ಹುಡುಕಿ