ಕೌಲಾಲಂಪುರ, ಶುಕ್ರವಾರ, 23 ಅಕ್ಟೋಬರ್ 2009( 20:56 IST )
2 ವರ್ಷಗಳ ಕೆಳಗೆ ಪೊಲೀಸ್ ಅಧಿಕಾರಿಗೆ ಕಚ್ಚಿ ಗಾಯಗೊಳಿಸಿದ ಸಂಸತ್ತಿನ ಪ್ರತಿಪಕ್ಷಕ್ಕೆ ಸೇರಿದ ನಾಯಕರೊಬ್ಬರು ಈಗ ಜೈಲುಕಂಬಿ ಎಣಿಸಬೇಕಾದ ದುರಾದೃಷ್ಟಕ್ಕೆ ಗುರಿಯಾಗಿದ್ದಾರೆ.
ಚುವಾಟಿಯನ್ ಚಾಂಗ್ ನೇತೃತ್ವದಲ್ಲಿ ಪ್ರತಿಪಕ್ಷದ ಸದಸ್ಯರೊಂದಿಗೆ ಸಂಸತ್ತಿಗೆ ಮುತ್ತಿಗೆ ಹಾಕಿದಾಗ ತಮ್ಮನ್ನು ತಡೆದ ಪೊಲೀಸ್ ಅಧಿಕಾರಿಗೆ ಚಾಂಗ್ ಬಲವಾಗಿ ಕಚ್ಚಿ ಗಾಯಗೊಳಿಸಿದ್ದರು. ಪೊಲೀಸ್ ಅಧಿಕಾರಿ ಕೋರ್ಟ್ ಮೊರೆ ಹೋದ ಬಳಿಕ ಈ ಕುರಿತು ವಿಚಾರಣೆ ನಡೆಸಲಾಗಿತ್ತು.
ವಿಚಾರಣೆ ನಡೆಸಿದ ಕೌಲಾಲಂಪುರ ಕೋರ್ಟ್ ಚಾಂಗ್ ಅವರಿಗೆ 6 ತಿಂಗಳು ಜೈಲು ವಾಸದ ಶಿಕ್ಷೆ ಮತ್ತು 40,000 ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ.