ಇಸ್ಲಾಮಾಬಾದ್, ಶನಿವಾರ, 24 ಅಕ್ಟೋಬರ್ 2009( 11:40 IST )
ದಕ್ಷಿಣ ವಜಿರಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ತಾರ್ಕಿಕ ಅಂತ್ಯ ಮುಟ್ಟಿಸಲಾಗುವುದು ಎಂದು ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಶನಿವಾರ ತಿಳಿಸಿದ್ದಾರೆ.
ಉಗ್ರಗಾಮಿಗಳು ಸರಣಿ ದಾಳಿಗಳ ಮೂಲಕ ರಕ್ತಪಾತ ಹರಿಸಿದ್ದರೂ, ವೈಫಲ್ಯ ಒಂದು ಆಯ್ಕೆಯಲ್ಲವೆಂದು ಹೇಳಿದ ಅವರು, ತಾಲಿಬಾನ್ ವಿರುದ್ಧ ಕಾರ್ಯಾಚರಣೆಯನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವುದಾಗಿ ಅವರು ಹೇಳಿದರು.
ತಾಲಿಬಾನ್ ಸರಣಿ ಬಾಂಬ್ ದಾಳಿಗಳು ಮತ್ತು ಆತ್ಮಾಹುತಿ ದಾಳಿಗಳಿಗೆ ಪ್ರತಿಯಾಗಿ ಕಾರ್ಯತಂತ್ರ ರೂಪಿಸಲು ಉನ್ನತ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಿಲಾನಿ, ಭಯೋತ್ಪಾದನೆ ಮತ್ತು ಸಮಾಜದ ಅಸಹನೆ ನಿರ್ಮೂಲನೆಗೆ ಸರ್ಕಾರ ಬದ್ಧವಾಗಿದೆಯೆಂದು ಹೇಳಿದ್ದು, ರಾಷ್ಟ್ರದ ಫರ್ಮಾನು ಪ್ರಶ್ನಿಸುವವರಿಗೆ ಉಕ್ಕಿನ ಮುಷ್ಠಿಯಿಂದ ಪ್ರತಿಕ್ರಿಯಿಸುವುದಾಗಿ ಹೇಳಿದರು.