ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಿಲಿಟರಿ ನೆರವು ದುರ್ಬಳಕೆ ವಿರುದ್ಧ ಅಮೆರಿಕ ಷರತ್ತು (Pakistan | India | United States | Military)
Feedback Print Bookmark and Share
 
ಅಮೆರಿಕ ನೀಡುವ ಮಿಲಿಟರಿ ನೆರವನ್ನು ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧ ಸಮರದ ಮೇಲೆ ಗಮನಹರಿಸಿ, ಭಾರತದ ವಿರುದ್ಧ ಸಂಘರ್ಷಕ್ಕೆ ಪರಿವರ್ತಿಸದಂತೆ ಖಾತರಿಪಡಿಸಿಕೊಳ್ಳಲು ಅಮೆರಿಕ ನಿಖರ ಷರತ್ತುಗಳನ್ನು ಶುಕ್ರವಾರ ಹೇರಿದೆ. ರಕ್ಷಣಾ ಅಧಿಕಾರ ಮಸೂದೆಯಲ್ಲಿ ಕೆಲವು ತಿದ್ದುಪಡಿಗಳನ್ನು ಅಮೆರಿಕ ಮಾಡುವ ಮ‌ೂಲಕ ಪಾಕಿಸ್ತಾನಕ್ಕೆ ಮೇಲಿನ ಷರತ್ತುಗಳನ್ನು ವಿಧಿಸಿದೆ.

ಪಾಕಿಸ್ತಾನ ಮಿಲಿಟರಿ ನೆರವನ್ನು ಭಾರತದ ವಿರುದ್ಧ ಸಂಘರ್ಷಕ್ಕೆ ತಿರುಗಿಸುತ್ತಿದೆಯೆಂಬ ಭಾರತದ ಕಳವಳಕ್ಕೆ ಅಮೆರಿಕ ಮೊದಲ ಬಾರಿಗೆ ಸ್ಪಂದಿಸಿದೆ. ಪಾಕಿಸ್ತಾನ ಭಯೋತ್ಪಾದನೆ ಮತ್ತು ಅಣ್ವಸ್ತ್ರ ಪ್ರಸರಣ ನಿಲ್ಲಿಸಬೇಕೆಂಬ ಷರತ್ತುಗಳನ್ನು ಹೇರಿದ ಕೆರಿ-ಲುಗಾರ್ ಮಸೂದೆಯ ಬಗ್ಗೆ ಇಸ್ಲಾಮಾಬಾದ್‌ನಲ್ಲಿ ಅತೃಪ್ತಿ ಹೊಗೆಯಾಡುತ್ತಿರುವ ನಡುವೆ ಅಮೆರಿಕ ರಕ್ಷಣಾ ಅಧಿಕಾರ ಮಸೂದೆಗೆ ತಿದ್ದುಪಡಿಗಳನ್ನು ಮಾಡಿತು.

ಪಾಕಿಸ್ತಾನಕ್ಕೆ ಒದಗಿಸುವ ಅಮೆರಿಕದ ಮಿಲಿಟರಿ ಸಂಪನ್ಮೂಲಗಳನ್ನು ಪಾಕಿಸ್ತಾನವು ಏಷ್ಯಾ ವಲಯದಲ್ಲಿ ಅಧಿಕಾರ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತೆ ಪೋಲು ಮಾಡದಿರುವ ಅಥವಾ ಬದಲಿಸದಿರುವ ಖಾತರಿಯ ಮಸೂದೆಗೆ ಅಮೆರಿಕ ಸೆನೆಟ್ 68-29 ಮತಗಳೊಂದಿಗೆ ಅನುಮೋದನೆ ನೀಡಿತು.

ಈ ನಿಯಮವು ಅಮೆರಿಕ ಜನತೆಯ ತೆರಿಗೆ ಡಾಲರ್‌ಗಳು ಇಚ್ಛಿತ ಉದ್ದೇಶಕ್ಕೆ ಬಳಸುವುದನ್ನು ಖಾತರಿಮಾಡುತ್ತದೆಂದು ಸೆನೆಟರ್ ಬಾಬ್ ಕಾರ್ಕರ್ ತಿಳಿಸಿದ್ದಾರೆ. ನಮ್ಮ ರಾಷ್ಟ್ರೀಯ ಭದ್ರತೆಗೆ ಭಯೋತ್ಪಾದನೆ ವಿರುದ್ಧ ಹೋರಾಟ ಮುಖ್ಯವಾಗಿದ್ದು, ಅದಕ್ಕೆ ನಮ್ಮ ಬೆಂಬಲವು ದುರ್ಬಳಕೆ ಅಥವಾ ದಿಕ್ಕುಬದಲಿಸಬಾರದು ಎಂದು ಮೆನೆಂಡೆಜ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ