ವಾಷಿಂಗ್ಟನ್, ಭಾನುವಾರ, 25 ಅಕ್ಟೋಬರ್ 2009( 10:20 IST )
ND
ಭಾರತ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತಮ್ಮ ಕುಟುಂಬದ ಸದಸ್ಯರಿದ್ದಂತೆ ಎಂದು ಬಣ್ಣಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಪ್ರಧಾನಿ ಸಿಂಗ್ ಅವರ ಭೇಟಿಯನ್ನು ಕಾತುರದಿಂದ ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದಾರೆ.
ಪ್ರತಿ ವರ್ಷ ನವೆಂಬರ್ ತಿಂಗಳ ನಾಲ್ಕನೇ ಗುರುವಾರದ ದಿನವನ್ನು 'ಥ್ಯಾಂಕ್ಸ್ ಗೀವಿಂಗ್ ಡಿನ್ನರ್' ದಿನವನ್ನಾಗಿ ಅಮೆರಿಕದಲ್ಲಿ ಆಚರಿಸಲಾಗುತ್ತಿದೆ. ಇದರ ಮುನ್ನಾ ದಿನವೇ ಪ್ರಧಾನಿ ಸಿಂಗ್ ಅವರಿಗೆ ಔತಣ ಕೂಟ ಏರ್ಪಡಿಸಿರುವುದು ಅವರ ಬಗ್ಗೆ ನಾನು ಹೊಂದಿರುವ ಗೌರವವನ್ನು ಬಿಂಬಿಸುತ್ತದೆ ಎಂದು ಒಬಾಮಾ ತಮ್ಮನ್ನು ಭೇಟಿಯಾಗಿದ್ದ ಇಲ್ಲಿನ ಭಾರತೀಯ ಸಮುದಾಯದ ಪ್ರಮುಖ ಸಂತ್ ಛತ್ವಾಲ್ ಅವರಿಗೆ ತಿಳಿಸಿದ್ದಾರೆ.
ಒಬಾಮಾ ಅವರು ಭಾರತ ಮತ್ತು ಮನಮೋಹನ್ ಸಿಂಗ್ ಅವರನ್ನು ತಮ್ಮ ಕುಟುಂಬ ಎಂದು ಕರೆದಿರುವುದು ನಮಗೆಲ್ಲ ಹೆಮ್ಮೆ ತಂದಿದೆ ಎಂದು ಛತ್ವಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.