ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ-ಪಾಕ್‌ಗೆ ಸಮಸ್ಯೆ ಬಗೆಹರಿಸಿಕೊಳ್ಳಿರೆಂದ ಕ್ಲಿಂಟನ್ (Hillary Clinton | India | Pakistan | Difference)
Feedback Print Bookmark and Share
 
ಹೆಚ್ಚಿನ ನಂಬುಗೆ ಬೆಳೆಸಿಕೊಳ್ಳುವ ಮೂಲಕ ಮತ್ತು ಹೆಚ್ಚೆಚ್ಚು ವಿಶ್ವಾಸ ವೃದ್ಧಿ ಕ್ರಮಗಳ ಮೂಲಕ ಭಾರತ ಮತ್ತು ಪಾಕಿಸ್ತಾನಗಳು ತಮ್ಮ ನಡುವಿನ ವೈಮನಸ್ಸುಗಳನ್ನು ಪರಿಹರಿಸಿಕೊಳ್ಳುವುದು ಅತ್ಯಂತ ಪ್ರಮುಖವೆಂಬುದಾಗಿ ಅಮೆರಿಕ ಭಾವಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಬುಧವಾರ ಹೇಳಿದ್ದಾರೆ.

ತಾನು ಅಧಿಕಾರ ವಹಿಸಿಕೊಂಡ ಬಳಿಕ ಪಾಕಿಸ್ತಾನಕ್ಕೆ ಚೊಚ್ಚಲ ಭೇಟಿ ನೀಡಿರುವ ಕ್ಲಿಂಟನ್, ಯಾವುದೇ ದೀರ್ಘಾಕಾಲೀನ ಪರಿಹಾರ ಅಥವಾ ಸಹಜತೆಯು ಉಭಯರಾಷ್ಟ್ರಗಳಿಂದಲೇ ಬರಲು ಸಾಧ್ಯ ಎಂಬುದಾಗಿ ಒಬಾಮ ಸರ್ಕಾರ ನಂಬುತ್ತದೆ ಎಂಬುದಾಗಿ ನುಡಿದರು.

ಉಭಯ ರಾಷ್ಟ್ರಗಳು ಅದಾಗಲೇ, ವಿಶ್ವಾಸ ವೃದ್ಧಿ ಹಾಗೂ ಪರಸ್ಪರ ನಂಬುಗೆಯನ್ನು ಹೆಚ್ಚಿಸಿದ್ದು, ತಮ್ಮ ದ್ವಿಪಕ್ಷೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವತ್ತ ಕಾರ್ಯವೆಸಗುತ್ತಿವೆ ಎಂದು ಅವರು ನುಡಿದ ಅವರು ಉಭಯ ರಾಷ್ಟ್ರಗಳ ನಡುವಿನ ಬಸ್ ಸಂಚಾರದ ಆರಂಭವನ್ನು ಶ್ಲಾಘಿಸಿದರು.
ಸಂಬಂಧಿತ ಮಾಹಿತಿ ಹುಡುಕಿ