ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರ ಹೋರಾಟಕ್ಕೆ ಬೆಂಬಲ ಕೊಡ್ತೇವೆ: ತಾಲಿಬಾನ್‌ಗೆ ಜರ್ದಾರಿ! (Taliban | Pakistan govt | ISI | London | Afghanistan)
Bookmark and Share Feedback Print
 
ಪಾಕಿಸ್ತಾನದ ಐಎಸ್ಐ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಉಗ್ರರಿಗೆ ಆರ್ಥಿಕ ನೆರವು ಮತ್ತು ತರಬೇತಿಗಳನ್ನು ಮಾತ್ರ ನೀಡುತ್ತಿಲ್ಲ. ಸರ್ಕಾರ ಮತ್ತು ಐಎಸ್ಐ ಜಂಟಿಯಾಗಿ ಉಗ್ರರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿರುವುದಾಗಿ ವರದಿಯೊಂದು ತಿಳಿಸಿದೆ.

ಬ್ರಿಟನ್‌ನ ಪ್ರತಿಷ್ಠಿತ ಸಂಸ್ಥೆಯಾದ ಲಂಡನ್ ಸ್ಕೂಲ್ ಆಫ್ ಇಕಾನಾಮಿಕ್ಸ್ ಭಾನುವಾರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ತಾಲಿಬಾನ್ ಉಗ್ರರಿಗೆ ಬೆಂಬಲ ನೀಡುವುದು ಪಾಕಿಸ್ತಾನ ಐಎಸ್ಐನ ಅಧಿಕೃತ ನೀತಿಯಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದೆ.

ಆ ನೆಲೆಯಲ್ಲಿ ಐಎಸ್ಐ ಮತ್ತು ಉಗ್ರಗಾಮಿ ಸಂಘಟನೆಗಳ ನಡುವಿನ ಗಳಸ್ಯ-ಕಂಠಸ್ಯ ಬಹುಕಾಲದ್ದಾಗಿದೆ ಎಂದು ಸಂಶೋಧನಾ ವರದಿ ಬಲವಾಗಿ ಶಂಕಿಸಿದೆ. ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಉಗ್ರರಿಗೆ ತರಬೇತಿ, ಹಣಕಾಸು ನೆರವು ನೀಡುವುದರ ಜೊತೆಗೆ ದಾಳಿಯ ರೂಪುರೇಷೆ, ಅವುಗಳ ಮುಂದಾಳತ್ವದ ಬಗ್ಗೆ ಅಧಿಕೃತ ನೆರವು ನೀಡುತ್ತಿದೆ ಎಂದು ತಿಳಿಸಿದೆ.

ಅಲ್ಲದೇ ಪ್ರಸಕ್ತ ಸಾಲಿನ ಆರಂಭದಲ್ಲಿಯೇ ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಕೂಡ ತಾಲಿಬಾನ್‌ನ ಹಿರಿಯ ಕೈದಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿಯೂ ವರದಿ ಉಲ್ಲೇಖಿಸಿದೆ. ಆ ಸಂದರ್ಭದಲ್ಲಿ ತಾಲಿಬಾನ್ ಉಗ್ರರನ್ನು ಬಿಡುಗಡೆ ಮಾಡುವುದಾಗಿಯೂ ಜರ್ದಾರಿ ಭರವಸೆ ನೀಡಿ, ಉಗ್ರಗಾಮಿಗಳ ಕಾರ್ಯಾಚರಣೆಗೆ ನೆರವು ಕೊಡುವ ವಾಗ್ದಾನ ನೀಡಿರುವುದಾಗಿ ವರದಿ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ