ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆರ್‌ಜೆಡಿಗೆ ಕಾಂಗ್ರೆಸ್ ತಿರುಗೇಟು: ಹೊಂದಾಣಿಕೆ ಸಾಧ್ಯವಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ಜೆಡಿಗೆ ಕಾಂಗ್ರೆಸ್ ತಿರುಗೇಟು: ಹೊಂದಾಣಿಕೆ ಸಾಧ್ಯವಿಲ್ಲ
ಬಿಹಾರದಲ್ಲಿ ಆರ್‌ಜೆಡಿಯು ಏಕಪಕ್ಷೀಯವಾಗಿ ಎಲ್‌ಜೆಪಿಯೊಂದಿಗೆ ಸ್ಥಾನ ವಿತರಣೆಯನ್ನು ಘೋಷಿಸಿರುವ ಬಳಿಕ ಆರ್‌ಜೆಡಿಯೊಂದಿಗೆ ಸ್ಥಾನಹೊಂದಾಣಿಕೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.

"ಈ ಹಂತದಲ್ಲಿ ಆರ್‌ಜೆಡಿಯೊಂದಿಗೆ ಯಾವುದೇ ಹೊಂದಾಣಿಕೆ ಸಾಧ್ಯವಿಲ್ಲ. ಅಲ್ಲಿ ಹೊಂದಾಣಿಕೆ ಸಾಧ್ಯವಾದರೂ ಅದು ಕೆಲವು ಸ್ಥಾನಗಳಿಗೆ ಮಾತ್ರ ಸಾಧ್ಯ, ನಮ್ಮ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ ಮತ್ತು ನಾವು ಅವರ ಮಾತನ್ನೂ ಕೇಳಬೇಕಾಗುತ್ತದೆ" ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಸುಶಿಲ್ ಕುಮಾರ್ ಶಿಂಧೆ ವರದಿಗಾರರಿಗೆ ತಿಳಿಸಿದ್ದಾರೆ.

ಮಂಗಳವಾರ ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಮತ್ತು ಎಲ್‌ಜೆಪಿ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಅವರುಗಳು ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುವುದಾಗಿ ತಿಳಿಸಿದ್ದರು. ಈ ಎರಡೂ ಪಕ್ಷದಗಳು ಯುಪಿಎಯ ಪ್ರಮುಖ ಅಂಗಪಕ್ಷಗಳಾಗಿವೆ. ಈ ಎರಡು ಪಕ್ಷಗಳು ಸೇರಿ ಕಾಂಗ್ರೆಸ್‌ಗೆ ಬರಿಯ ಮೂರು ಸ್ಥಾನಗಳನ್ನು ಮಾತ್ರ ಮೀಸಲಿಟ್ಟಿದ್ದವು.

ಕಾಂಗ್ರೆಸ್ ಮುಯ್ಯಿಗೆ ಮುಯ್ಯಿ
ಇದಕ್ಕೆ ಪ್ರತೀಕಾರ ಎಂಬಂತೆ ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಆರ್‌ಜೆಡಿಗೆ ಬರಿಯ ಎರಡು ಸ್ಥಾನಗಳನ್ನು ಮಾತ್ರ ನೀಡಿ ಉಳಿದ 12 ಸ್ಥಾನಗಳಲ್ಲಿ ಸ್ಫರ್ಧಿಸುವುದಾಗಿ ಹೇಳಿದೆ. ಎಲ್‌ಜೆಪಿಗೆ ಕಾಂಗ್ರೆಸ್ ಒಂದು ಸ್ಥಾನವನ್ನೂ ಇಟ್ಟಿಲ್ಲ!
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೋರ್ಟ್ ದಯೆಯಿಂದ ಅರ್ಜಿ ಹಾಕಿದ 16 ವರ್ಷದ ಬಳಿಕ ಉದ್ಯೋಗ
ಪ್ರತಿಭಟನಾ ಕರೆನೀಡಿದವರು ನಷ್ಟಭರ್ತಿಮಾಡಲಿ: ಸು.ಕೋ
ತೃತೀಯರಂಗ ಚುನಾವಣೆಯ ತನಕವೂ ಬಾಳದು: ಗುಜ್ರಾಲ್
ಪ್ರಧಾನಿಯಾಗಲು ಆಡ್ವಾಣಿಗೆ ಉಮಾ ಬೆಂಬಲ
ಯಾವುದೇ ಧರ್ಮವನ್ನು ದೂಷಿಸಿಲ್ಲ, ಕ್ಷಮೆಯಾಚಿಸಬೇಕಿಲ್ಲ: ವರುಣ್
ಭಾಷಣಕ್ಕೆ ಕ್ಷಮೆ ಯಾಚಿಸಿದ ವರುಣ್ ಗಾಂಧಿ