| ಲಾಲೂ, ಪಾಸ್ವಾನ್ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸುವುದಿಲ್ಲ- ಕಾಂಗ್ರೆಸ್ | | | ಪಾಟ್ನಾ, ಸೋಮವಾರ, 23 ಮಾರ್ಚ್ 2009( 12:22 IST ) | | | |
| | |
| ಯುಪಿಎ ಸರ್ಕಾರ ಸರಾಗವಾಗಿ ನಡೆಯಲು ಸಹಕರಿಸಿದ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಹಾಗೂ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಕಾಂಗ್ರೆಸ್ ತನ್ನ ಕೃತಜ್ಞತೆ ಪ್ರದರ್ಶಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲಾಲೂ ಹಾಗೂ ರಾಮ್ ವಿಲಾಸ್ ಪಾಸ್ವಾನ್ ವಿರುದ್ಧ ಕಾಂಗ್ರೆಸ್ ತನ್ನ ಯಾವುದೇ ಅಭ್ಯರ್ಥಿಯನ್ನೂ ಕಣಕ್ಕಿಳಿಸುವುದಿಲ್ಲ ಎಂದು ಘೋಷಿಸಿದೆ.ಸ್ವತಃ ಸೋನಿಯಾ ಗಾಂಧಿ ಈ ನಿರ್ಧಾರ ತೆಗೆದುಕೊಂಡಿದ್ದು, ಲಾಲೂ ಹಾಗೂ ಪಾಸ್ವಾನ್. ಯುಪಿಎ ಸರ್ಕಾರಕ್ಕೆ ಐದು ವರ್ಷಗಳ ಸತತ ಬೆಂಬಲ ನೀಡಿದ್ದು ಹರ್ಷ ತಂದಿದೆ. ಹೀಗಾಗಿ ಅವರಿಬ್ಬರ ವಿರುದ್ಧ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಸೋನಿಯಾ ತಿಳಿಸಿದ್ದಾರೆ ಎಂದು ಬಿಹಾರ್ ಪ್ರದೇಶ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಶರ್ಮಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಬೇರೆ ಪಕ್ಷದಿಂದ ಅಭ್ಯರ್ಥಿಗಳನ್ನು ಆಕರ್ಷಿಸಿ ಕಣಕ್ಕಿಳಿಸಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಶರ್ಮಾ, ಈವರೆಗೆ ಘೋಷಿಸಲ್ಪಟ್ಟ 22 ಅಭ್ಯರ್ಥಿಗಳ ಪೈಕಿ ಐದು ಅಭ್ಯರ್ಥಿಗಳಿಗೆ ತಡೆ ನೀಡಿದ ನಂತರ ಉಳಿದ 17 ತನ್ನದೇ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ ಎಂದು ಸ್ಪಷ್ಟಪಡಿಸಿದರು. ಪಕ್ಷ ಇನ್ನೂ 15 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಬೇಕಿದೆ. |
| |
| | |
|
|
| | | | | |
|
|
| |
| | |