ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಂತ ರಮಾನಂದರ ಅಂತ್ಯಕ್ರಿಯೆ, ಪರಿಸ್ಥತಿ ಶಾಂತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂತ ರಮಾನಂದರ ಅಂತ್ಯಕ್ರಿಯೆ, ಪರಿಸ್ಥತಿ ಶಾಂತ
ವಿಯೆನ್ನಾದಲ್ಲಿ ಹತ್ಯೆಗೀಡಾಗಿದ್ದ ಸಿಖ್‌ಗುರು ಡೇರಾ ಸಚ್‌ಖಾಂಡ್ ಪಂಥದ ನಾಯಕ ಸಂತ ರಮಾನಂದರ ಅಂತ್ಯಕ್ರಿಯೆ ಗುರುವಾರ ಸಾಯಂಕಾಲ ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಇಲ್ಲಿ ಬಿಗಿ ಭದ್ರತೆಯಲ್ಲಿ ನಡೆಯಿತು. ರಮಾನಂದರ ಹತ್ಯೆಯು ಪಂಜಾಬಿನಾದ್ಯಂತ ಹಿಂಸಾಚಾರದ ಪ್ರತಿಭಟನೆ ಕಂಡಿತ್ತು.

ಅಸಂಖ್ಯ ಸಂಖ್ಯೆಯ ಭಕ್ತರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ಸೇರಿದಂತೆ ಅನೇಕ ರಾಜಕಾರಣಿಗಳು ಡೇರಾಸಚ್ ಮುಖ್ಯಕಚೇರಿ ಸತ್ಸಂಗ ಭವನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದ ರಮಾನಂದರ ಕಳೇಬರಕ್ಕೆ ಅಂತಿಮ ನಮನ ಸಲ್ಲಿಸಿದರು.

ಜಲಂಧರ್‌ನಿಂದ 15 ಕಿಲೋಮೀಟರ್ ದೂರದಲ್ಲಿರುವ ಬಲ್ಲನ್ ಪ್ರಾಂತ್ಯವು ಅಕ್ಷರಶಃ ಕಂಟೋನ್ಮೆಂಟ್ ಆಗಿ ಪರಿವರ್ತಿತವಾಗಿತ್ತು. ಬಲ್ಲನ್ ಪ್ರವೇಶದಲ್ಲಿ ಹೆಜ್ಜೆಹೆಜ್ಜೆಗೂ ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿತ್ತು.

ರಮಾನಂದರ ಚಿತೆಗೆ ಸ್ಥಳೀಯ ಡೇರಾ ನಾಯಕರಾದ ಸಂತ ಸೂರಿಂದರ್ ದಾಸ್ ಜಿ ಬಾವಾ ಮತ್ತು ಸಂತ ಸೂರಿಂದರ್ ದಾಸ್ (ಕತಾರ್ ವಾಲೆ) ಅವರುಗಳು ಅಗ್ನಿಸ್ಪರ್ಷಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಸ್ತಿ ಬಹಿರಂಗ: ನ್ಯಾಯಾಂಗವೇ ಮೊದಲು ಚಿಂತಿಸಲಿ
ಪಾಕ್ ಕಾರ್ಯಕೈಗೊಳ್ಳುವ ತನಕ ಮಾತುಕತೆ ಇಲ್ಲ: ಕೃಷ್ಣ
ಸಮಾನತೆ ,ನ್ಯಾಯಕ್ಕಾಗಿ ಅಧಿಕಾರ : ಮಾಯಾವತಿ
ಎಸ್‌ಪಿಜಿಯಲ್ಲಿ ಮಹಿಳಾ ಐಪಿಎಸ್ ಅಧಿಕಾರಿ
ಬೆದರಿಕೆ ಭಿತ್ತಿಪತ್ರ: ಕಂಧಮಾಲ್ ಮತ್ತೆ ಉದ್ವಿಗ್ನ?
ಗಡಿ: ಕೋರ್ಟ್ ಹೊರಗೆ ಇತ್ಯರ್ಥಕ್ಕೆ 'ಮಹಾ' ಸಿದ್ಧ