ನವದೆಹಲಿ: ಭಯೋತ್ಪಾದಕರ ಹೆಜ್ಜೆಗುರುತುಗಳನ್ನು ಮುಚ್ಚಿಸುವ ನಿಟ್ಟಿನಲ್ಲಿ ಉಗ್ರರು ಬಳಸುವ ತುರಾಯ್ ಸೆಟಲೈಟ್ ಪೋನ್ ಬಳಕೆಯ ಸಿಗ್ನಲ್‌ಗಳನ್ನು ಶೂನ್ಯಗೊಳಿಸಲು ಐಎಸ್ಐ ನೆರವು ನೀಡುತ್ತಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಈ ವಿಚಾರವನ್ನು ಪಾಕಿಸ್ತಾನದೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
"ಪಾಕಿಸ್ತಾನ ಅಥವಾ ನಮಗೆ ಸಂಬಂಧಿಸಿದ ವಿಚಾರಗಳನ್ನು ನಾವು ಯಾವತ್ತು ಪರಸ್ಪರ ಚರ್ಚಿಸುತ್ತೇವೆ" ಎಂದು ಹೇಳಿದ್ದಾರೆ.
ಪಾಕಿಸ್ತಾನ ಏನು ಮಾಡುತ್ತದೆಯೋ ಅದನ್ನು ಪಾಕಿಸ್ತಾನವು ನಿಕಟವಾಗಿ ವೀಕ್ಷಿಸುತ್ತದೆ ಎಂದು ನುಡಿದ ಕೃಷ್ಣ ರಾಷ್ಟ್ರದ ಗಡಿಗಳು ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ.
ಉಗ್ರರಿಗೆ ಐಎಸ್ಐ ನೆರವು ಭಾರತ ವಿರೋಧಿ ಕೃತ್ಯಗಳಿಗೆ ಉಗ್ರರಿಗೆ ಪಾಕಿಸ್ತಾನವು ನೆರವು ನೀಡುತ್ತದೆ ಎಂಬುದಕ್ಕೆ ಮತ್ತೊಂದು ಪುರಾವೆ ಎಂಬಂತೆ, ತುರಾಯ ಸೆಟಲೈಟ್ ಫೋನ್ ಬಳಕೆದಾರರು ನೆಲೆಸಿರುವ ಸ್ಥಳದ ಸುಳಿವು ಲಭಿಸದಂತೆ ಪಾಕಿಸ್ತಾನದ ಐಎಸ್ಐ, ಭಯೋತ್ಪಾದನಾ ಗುಂಪುಗಳಿಗೆ ಸಹಾಯ ನೀಡುತ್ತದೆ ಎಂಬುದನ್ನು ನವದೆಹಲಿ ಪತ್ತೆಮಾಡಿದೆ ಎನ್ನಲಾಗಿದೆ. ಇದರಿಂದಾಗಿ ಭಾರತೀಯ ಗುಪ್ತಚರದಳಕ್ಕೆ ಉಗ್ರರ ಪತ್ತೆಯು ಕಷ್ಟಕರವಾಗಿದೆ.
ದಾಳಿಗಳನ್ನು ನಡೆಸಲು ಉಗ್ರರು ತಮ್ಮ ಮಾಸ್ಚರ್‌ಗಳ ಸಂಪರ್ಕಕ್ಕಾಗಿ ತುರಾಯ ಸೆಟಲೈಟ್ ಫೋನ್‌ಗಳನ್ನು ಬಳಸುತ್ತಾರೆ. ಈ ಫೋನ್ ಬಳಸಿರುವ ಸ್ಥಳದ ಅಕ್ಷಾಂಶ ಮತ್ತು ರೇಖಾಂಶಗಳನ್ನು ಪತ್ತೆ ಮಾಡಬಹುದಾಗಿದ್ದು, ಭಾರತೀಯ ಭದ್ರತಾಪಡೆಗಳು ಈ ಮೂಲಕ ದುಷ್ಕರ್ಮಿಗಳನ್ನು ಪತ್ತೆ ಹಚ್ಚುತ್ತಿದ್ದವು.
ಆದರೆ, ಇದೀಗ ಉಗ್ರರೊಂದಿಗೆ ಶಾಮೀಲಾಗಿರುವ ಐಎಸ್ಐ ಉಗ್ರರು ಬಳಸುವ ತುರಾಯ ಫೋನ್‌ಗಳಿಂದ ಬರುವ ಸಿಗ್ನಲ್‌ಗಳನ್ನು ಶೂನ್ಯಗೊಳಿಸಲು ಗಡಿನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರಿಯ ಗಡಿಯುದ್ದಕ್ಕೂ ಅಸಂಖ್ಯ ಟ್ರಾನ್ಸ್‌ಮೀಟರ್‌ಗಳನ್ನು ನಿರ್ಮಿಸಿದೆ. ಇದರಿಂದಾಗಿ ಭಾರತೀಯ ಗುಪ್ತಚರ ಸಂಸ್ಥೆಗಳಿಗೆ ಈ ಫೋನ್ ಬಳಕೆಯ ಜಾಗನವನ್ನು ಪತ್ತೆ ಹಚ್ಚುವುದ ಅಸಾಧ್ಯವಾಗಿದೆ.
ರಾಷ್ಚ್ರದಲ್ಲಿ ತುರಾಯ ಫೋನ್ ಮಾರಾಟಕ್ಕೆ ಪರವಾನಗಿ ಇಲ್ಲದಿರುವುದರಿಂದ ಅವುಗಳ ದಾಖಲೆಗಳನ್ನು ಭಾರತೀಯ ಗುಪ್ತಚರ ದಳಗಳು ಪಡೆಯಲಾಗದ ಕಾರಣ ಭಾರತ ವಿರೋಧಿ ಉಗ್ರರ ಗುಂಪು ತುರಾಯ ಫೋನ್‌ಗಳನ್ನು ಬಳಸುತ್ತಿವೆ.
ಮುಂಬೈದಾಳಿ ಪ್ರಕರಣದ ತನಿಖೆ ವೇಳೆಗೆ ಭಾರತವು ಈ ಸಮಸ್ಯೆಯನ್ನು ಎದುರಿಸಿತ್ತು. ಆದರೆ ದಾಳಿಕೋರರು ಬಳಸಿದ ಸೆಟಲೈಟ್ ಫೋನ್‌ಗಳ ವಿವರಗಳನ್ನು ಪತ್ತೆ ಹಚ್ಚಲು, ಅಮೆರಿಕವು ಭಾರತಕ್ಕೆ ಸಹಾಯ ಮಾಡಿತ್ತು. |