'ಪ್ರಶ್ನೆ ಕೇಳೋದು ನಿಲ್ಸಿ, ಸಯೀದ್ ವಿರುದ್ಧ ಕ್ರಮಕೈಗೊಳ್ಳಿ'
ನವದೆಹಲಿ, ಬುಧವಾರ, 29 ಜುಲೈ 2009( 15:03 IST )
PTI
ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಕ್ರಮಕೈಗೊಳ್ಳಲು ಪಾಕಿಸ್ತಾನವು ಹಿಂಜರಿಯುತ್ತಿರುವುದನ್ನು ಬಲವಾಗಿ ಖಂಡಿಸಿರುವ ಗೃಹಸಚಿವ ಪಿ. ಚಿದಂಬರಂ ಅವರು ಪಾಕಿಸ್ತಾನಕ್ಕೆ ಒಪ್ಪಿಸಲಾಗಿರುವ ಮಾಹಿತಿ ಕಡತದಲ್ಲಿ ಸಾಕಷ್ಟು ಪುರಾವೆಗಳನ್ನು ನೀಡಲಾಗಿದ್ದು, 26/11 ದಾಳಿಯ ರೂವಾರಿಗಳ ವಿರುದ್ಧ ಪಾಕ್ ಕ್ರಮಕೈಗೊಳ್ಳಲು ಇದು ಸಕಾಲ ಎಂದು ಹೇಳಿದ್ದಾರೆ.
ಇಸ್ಲಾಮಾಬಾದಿನ ನಿಷ್ಕ್ರೀಯತೆಯ ವಿರುದ್ಧ ಹರಿಹಾಯ್ದಿರುವ ಚಿದಂಬರಂ, "ಅವರು ಪ್ರಶ್ನೆ ಕೇಳುವುದನ್ನು ನಿಲ್ಲಿಸಿ ಕಾರ್ಯಗತವಾಗಲು ಮುಂದಾಗಬೇಕು. ಪಾಕಿಸ್ತಾನಕ್ಕೆ ನೀಡಲಾಗಿರುವ ಮಾಹಿತಿ ಕಡತದಲ್ಲಿ ಸಾಕಷ್ಟು ಸಾಕ್ಷ್ಯಗಳನ್ನು ಒದಗಿಸಲಾಗಿದೆ" ಎಂದು ನುಡಿದರು. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಸಯೀದ್ ವಿರುದ್ಧ ಕ್ರಮಕೈಗೊಳ್ಳಲು ಸಾಕಷ್ಟು ಪುರಾವೆಗಳಿಲ್ಲ ಎಂದು ಪಾಕಿಸ್ತಾನ ಪದೇಪದೇ ಹೇಳುತ್ತಿರುವುದು ಜಿಗುಪ್ಸೆ ಹುಟ್ಟಿಸುತ್ತದೆ ಎಂದು ಚಿದು ಬೇಸರ ವ್ಯಕ್ತಪಡಿಸಿದ್ದಾರೆ.
"ಸಾಕಷ್ಟು ಪುರಾವೆ ನೀಡುವ ತನಕ ಸಯೀದ್‌ನನ್ನು ಬಂಧಿಸಲು ಸಾಧ್ಯವಿಲ್ಲ. ಸಾಕಷ್ಟು ಪುರಾವೆಗಳನ್ನು ಒದಗಿಸಿಲ್ಲ" ಎಂದು ಪಾಕಿಸ್ತಾನದ ಆಂತರಿಕ ಸಚಿವ ರೆಹ್ಮಾನ್ ಮಲಿಕ್ ಮಂಗಳವಾರ ಹೇಳಿದ್ದರು.