ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ಪೆಕ್ಟ್ರಂ: ಸ್ವತಂತ್ರ ಭಾರತದ ಅತಿದೊಡ್ಡ ಹಗರಣ-ಬಿಜೆಪಿ (A Raja | Spectrum scam | BJP | independent India | Telecommunication)
2007ರಲ್ಲಿ ನಡೆದ ಮೊಬೈಲ್ ಕಂಪನಿಗಳಿಗೆ ತರಂಗಾಂತರ(ಸ್ಪೆಕ್ಟ್ರಂ)ಹಂಚಿಕೆ ವೇಳೆ 64ಸಾವಿರ ಕೋಟಿ ರೂಪಾಯಿ ಹಗರಣ ನಡೆದಿದೆ. ಇದು ಸ್ವತಂತ್ರ ಭಾರತದ ಅತಿದೊಡ್ಡ ಹಗರಣ ಎಂದು ಆರೋಪಿಸಿರುವ ಬಿಜೆಪಿ, ಕೇಂದ್ರ ದೂರಸಂಪರ್ಕ ಸಚಿವ ಎ.ರಾಜಾ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಮುಖಂಡ ಅರುಣ್ ಜೇಟ್ಲಿ, ಟ್ರಾಯ್ ನಿಗದಿಗೊಳಿಸಿದ ದರದಲ್ಲೇ ತರಂಗಾಂತರ ಹಂಚಿಕೆ ಮಾಡಲಾಗಿದೆ ಎಂದು ರಾಜಾ ಅವರು ಸುಳ್ಳು ಹೇಳಿದ್ದಾರೆ.
ವಾಸ್ತವದಲ್ಲಿ 2001ರಲ್ಲಿ ಟ್ರಾಯ್ ನಿಗದಿಗೊಳಿಸಿದ್ದ ದರದಲ್ಲಿ ಒಂಬತ್ತು ಕಂಪನಿಗಳಿಗೆ 2007ರಲ್ಲಿ ತರಂಗಾಂತರ ವಿತರಿಸಲಾಗಿದೆ. ರಿಯಲ್ ಎಸ್ಟೇಟ್ ಕಂಪನಿಗಳು 1,650ಕೋಟಿ ರೂಪಾಯಿ ನೀಡಿ ತರಂಗಾಂತರವನ್ನು ಖರೀದಿಸಿದ್ದವು.
ಇದಾದ ಕೆಲವೇ ದಿನಗಳಲ್ಲಿ ವಿದೇಶಿ ಕಂಪನಿಗಳಿಗೆ ತಮ್ಮ ಶೇ.70ರಷ್ಟು ಷೇರುಗಳನ್ನು 9ಸಾವಿರ ಕೋಟಿ ರೂ.ಗೂ ಹೆಚ್ಚು ಬೆಲೆಗೆ ಈ ಸಂಸ್ಥೆಗಳು ಮಾರಿವೆ. ಒಟ್ಟಾರೆ ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರಕ್ಕೆ 64ಸಾವಿರ ಕೋಟಿ ರೂ.ನಷ್ಟವಾಗಿದೆ ಎಂದು ಅವರು ದೂರಿದ್ದಾರೆ.