ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ: ಇನ್ಸೆಪೆಕ್ಟರ್ ಕೂಡಾ ಇಂತಹ ಆರೋಪ ಪಟ್ಟಿ ತಯಾರಿಸುವುದಿಲ್ಲ (A Raja | Former Telecom Minister | CBI | TRAI | 2G spectrum | Roaming facility)
2ಜಿ: ಇನ್ಸೆಪೆಕ್ಟರ್ ಕೂಡಾ ಇಂತಹ ಆರೋಪ ಪಟ್ಟಿ ತಯಾರಿಸುವುದಿಲ್ಲ
ನವದೆಹಲಿ, ಬುಧವಾರ, 28 ಸೆಪ್ಟೆಂಬರ್ 2011( 10:43 IST )
PTI
2ಜಿ ತರಂಗ ಗುಚ್ಚ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಟ್ರಾಯ್ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿಲ್ಲ. ಪೊಲೀಸ್ ಠಾಣೆಯ ಸಬ್-ಇನ್ಸಪೆಕ್ಟರ್ ಕೂಡಾ ಈ ರೀತಿ ಆರೋಪ ಪಟ್ಟಿ ಸಿದ್ಧಪಡಿಸುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ದೇಶದ ಅತಿ ದೊಡ್ಡ ವಂಚನೆ ಪ್ರಕರಣದಲ್ಲಿ ಸಿಲುಕಿ ನ್ಯಾಯಾಲಯದ ಮುಂದೆ ನಿಂತಿರುವುದು ನನಗೆ ಗೊತ್ತಿದೆ. ನಾನು ಜೋಕ್ ಮಾಡುತ್ತಿಲ್ಲ. ಒಬ್ಬ ಪೊಲೀಸ್ ಅಧಿಕಾರಿ ಸಿಬಿಐ ಆರೋಪಪಟ್ಟಿಗಿಂತ ಉತ್ತಮ ಸಿದ್ಧಪಡಿಸುತ್ತಾನೆ ಎಂದು ಮಾಜಿ ಟೆಲಿಕಾಂ ಸಚಿವ ಎ.ರಾಜಾ, ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಒ.ಪಿ.ಸೈಯಾನಿಯವರ ಮುಂದೆ ವಾದಿಸಿದ್ದಾರೆ.
ಟೆಲಿಕಾಂ ಸಚಿವನಾಗಿ ಅಧಿಕಾರ ಸ್ವೀಕರಿಸುವ ಮುನ್ನವೆ ರೋಮಿಂಗ್ ಸೌಲಭ್ಯ ಜಾರಿಯಲ್ಲಿತ್ತು. ಆದ್ದರಿಂದ, ನಾನು ಯಾವುದೇ ಕಾನೂನು ಉಲ್ಲಂಘಿಸಿಲ್ಲ ಎಂದು ಡಿಎಂಕೆ ಸಂಸದ 2ಜಿ ಆರೋಪಿ ಎ.ರಾಜಾ ತಿಳಿಸಿದ್ದಾರೆ.
ನಾನು ಅಧಿಕಾರ ಸ್ವೀಕರಿಸಿದಾಗ ರೋಮಿಂಗ್ ಸೌಲಭ್ಯ ಜಾರಿಯಲ್ಲಿರಲಿಲ್ಲ ಎಂದು ಸಿಬಿಐ ಸಾಬೀತುಪಡಿಸಲಿ. ಆದರೆ, ನಾನು ಅಧಿಕಾರ ಸ್ವೀತರಿಸುವ ಮುನ್ನ ರೋಮಿಂಗ್ ಸೌಲಭ್ಯಕ್ಕೆ ಟ್ರಾಯ್ ಸಂಸ್ಥೆ ಅನುಮತಿ ನೀಡಿತ್ತು ಎನ್ನುವುದು ನಾನು ಸಾಬೀತುಪಡಿಸುತ್ತೇನೆ ಎಂದು ಗುಡುಗಿದರು.
ಟ್ರಾಯ್ ನಿಯಮಗಳನ್ನು ಉಲ್ಲಂಘಿಸಿದ್ದೇನೆ ಎಂದು ಟ್ರಾಯ್ ಅಧ್ಯಕ್ಷರ ಹೇಳಿಕೆಯನ್ನು ಸಿಬಿಐ ದಾಖಲಿಸಿದೆ. ಆದರೆ, ನ್ಯಾಯಾಲಯದಲ್ಲಿ ದಾಖಲೆಯನ್ನು ದಾಖಲಿಸಿಲ್ಲ. ಸಿಬಿಐ ಉದ್ದೇಶಪೂರ್ವಕವಾಗಿ ಟ್ರಾಯ್ ದಾಖಲೆಗಳನ್ನು ಅಡಗಿಸಿದೆ ಎಂದು ರಾಜಾ ಅಸಮಧಾನ ವ್ಯಕ್ತಪಡಿಸಿದರು.
ರಿಲಯನ್ಸ್ ಟೆಲಿಕಾಂ ಲಿಮಿಟೆಡ್ ಮತ್ತು ಸ್ವಾನ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ 2ಜಿ ಹಗರಣದಲ್ಲಿ ಲಾಭ ಪಡೆದ ಕಂಪೆನಿಗಳಾಗಿವೆ. ಕಾನೂನು ಸಚಿವಾಲಯದ ವರದಿ ತಮ್ಮ ಪರವಾಗಿರುವಂತೆ ಲಾಬಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ.
ಸುಮಾರು 25 ನಿಮಿಷಗಳ ಕಾಲ ನ್ಯಾಯಾಲಯದಲ್ಲಿ ವಾದ ಮಾಡಿದ ಮಾಜಿ ಸಚಿವ ಎ.ರಾಜಾ, ಶಾಹೀದ್ ಉಸ್ಮಾನ್ ಬಲ್ವಾ ಮತ್ತು ವಿನೋದ್ ಗೋಯಿಂಕಾ ಮಾಲೀಕತ್ವದ ಸ್ವಾನ್ ಟೆಲಿಕಾಂ ಕಂಪೆನಿಗೆ ಲಾಭವಾಗಲು ಇಂಟ್ರಾ ಸರ್ಕಲ್ ರೋಮಿಂಗ್ ನಿಯಮಗಳನ್ನು ಬದಲಾಯಿಸಲಾಗಿದೆ ಎನ್ನುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ವಾದ ಮಂಡಿಸಿದರು.