ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದಸರಾಗೆ ಉಗ್ರರ ಕರಿನೆರಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಸರಾಗೆ ಉಗ್ರರ ಕರಿನೆರಳು
ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಇದೀಗ ಉಗ್ರರ ಕರಿನೆರಳು ಮೂಡಿದೆ. ಉಗ್ರರ ಹಿಟ್ ಲಿಸ್ಟ್ ನಲ್ಲಿ ಮೈಸೂರು ಹೆಸರಿದ್ದು, ಈಗಾಗಲೇ ಆರು ಮಂದಿ ಉಗ್ರರು ನುಸುಳಿರುವ ಶಂಕೆ ವ್ಯಕ್ತವಾಗಿದೆ.

ಈ ಆರು ಉಗ್ರರು ನಂಜನಗೂಡು ಪಟ್ಟಣದಲ್ಲಿದ್ದುಕೊಂಡು, ದಸರಾ ವೇಳೆ ತಮ್ಮ ಚಟುವಟಿಕೆಗಳನ್ನು ನಡೆಸುವ ಸಂಚು ರೂಪಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಬಂದಿದೆ. ಕೇಂದ್ರ ಗುಪ್ತಚರ ವಿಭಾಗ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳೇ ಈ ಸಂಬಂಧ ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ದಸರಾ ಮಹೋತ್ಸವದ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ನಡೆಸಿ ಕೇರಳಕ್ಕೆ ಪಲಾಯನ ಮಾಡಲು ಹುನ್ನಾರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ನೀಡಿರುವ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅಲ್ಲದೆ, ನಗರದ ಎಲ್ಲಾ ವಸತಿಗೃಹಗಳಲ್ಲಿಯೂ ತೀವ್ರ ನಿಗಾ ವಹಿಸಲಾಗಿದ್ದು, ದಿನದ 24 ಗಂಟೆಯೂ ತಪಾಸಣೆ ಮಾಡುವಂತೆ ಸೂಚಿಸಲಾಗಿದೆ.

ಈ ನಡುವೆ ನಗರದಲ್ಲಿ ಎಡಿಜಿಪಿ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಲಾಗಿದ್ದು, ಉಗ್ರರ ಬೆದರಿಕೆಯ ಕುರಿತು ಬಂದಿರುವ ಮಾಹಿತಿ ಕುರಿತು ಚರ್ಚೆ ನಡೆಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಜರಂಗದಳದ ಮಹೇಂದ್ರ ಕುಮಾರ್ ರಾಜೀನಾಮೆ
ಪಾಲಿಕೆ ಚುನಾವಣೆಗೆ ಸರ್ಕಾರ ಸಿದ್ಧ: ಅಶೋಕ್
ಎಚ್‌ಡಿಕೆ ಹೇಳಿಕೆ ಪ್ರತಿಕ್ರಿಯೆ ಇಲ್ಲ: ಯಡಿಯೂರಪ್ಪ
ಯಡಿಯೂರಪ್ಪ ನಾಲಿಗೆ ಮೇಲೆ ಹಿಡಿತವಿರಲಿ: ದೇಶಪಾಂಡೆ
ಮೌಲ್ಯ ವರ್ಧಿತ ತೆರಿಗೆ ಇಲ್ಲ: ಅಶೋಕ್
ಮೊಕದ್ದಮೆಗೆ ಹೆದರಲಾರೆ: ಕುಮಾರಸ್ವಾಮಿ