ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಿರ್ದೇಶಕ ಎಸ್.ನಾರಾಯಣ್ ಅರ್ಜಿ ವಜಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿರ್ದೇಶಕ ಎಸ್.ನಾರಾಯಣ್ ಅರ್ಜಿ ವಜಾ
ಚೆಲುವಿನ ಚಿತ್ತಾರ ಚಿತ್ರದಲ್ಲಿ ಅಪ್ರಾಪ್ತ ಬಾಲಕಿಯಿಂದ ಪ್ರಣಯ ದೃಶ್ಯಗಳನ್ನು ಬಳಸಿಕೊಂಡಿರುವುದಕ್ಕೆ ಮಹಿಳಾ ಆಯೋಗ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ನಿರ್ಮಾಪಕ ಹಾಗೂ ನಿರ್ದೇಶಕ ಎಸ್. ನಾರಾಯಣ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಮಹಿಳಾ ಆಯೋಗ ಜಾರಿ ಮಾಡಿರುವ ನೋಟಿಸ್ ವಜಾ ಮಾಡುವಂತೆ ಕೋರಿ ನಿರ್ದೇಶಕರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ಮಹಿಳಾ ಆಯೋಗದ ತೀರ್ಮಾನವನ್ನು ಎತ್ತಿ ಹಿಡಿದಿದೆ.

ಸೆನ್ಸಾರ್ ಮಂಡಳಿ ನಮ್ಮ ರಾಷ್ಟ್ರದ ಸಂಸ್ಕೃತಿಯ ಧರ್ಮದರ್ಶಿಯಾಗಿದ್ದು, ಅದರಂತೆ ನಡೆದುಕೊಳ್ಳಬೇಕೆಂದು ನ್ಯಾಯಾಮೂರ್ತಿ ದಿನಕರನ್ ಇದೇ ವೇಳೆ ತಿಳಿಸಿದ್ದಾರೆ.

ಈ ಮೊದಲು ಅರ್ಜಿ ಬಗ್ಗೆ ವಿಚಾರಣೆ ನಡೆಸಿದ್ದ ಏಕ ಸದಸ್ಯ ನ್ಯಾಯಪೀಠ 15 ದಿನಗಳ ಒಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಎಸ್. ನಾರಾಯಣ್ ಅವರಿಗೆ ಆದೇಶಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿತ್ತು. ಆದರೆ ಏಕಸದಸ್ಯ ನ್ಯಾಯ ಪೀಠದ ಆದೇಶವನ್ನು ಪ್ರಶ್ನಿಸಿ ಎಸ್. ನಾರಾಯಣ್ ಮೇಲ್ಮನವಿ ಸಲ್ಲಿಸಿದ್ದರು.

ಇದೀಗ ಮೇಲ್ಮನವಿಯನ್ನು ವಜಾ ಮಾಡಿರುವ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಡಿಎಸ್ ನಿಂದ ಕಲ್ಪನಾ ಸಿದ್ದರಾಜು ಕಣಕ್ಕೆ
ದಸರಾಗೆ ಉಗ್ರರ ಕರಿನೆರಳು
ಭಜರಂಗದಳದ ಮಹೇಂದ್ರ ಕುಮಾರ್ ರಾಜೀನಾಮೆ
ಪಾಲಿಕೆ ಚುನಾವಣೆಗೆ ಸರ್ಕಾರ ಸಿದ್ಧ: ಅಶೋಕ್
ಎಚ್‌ಡಿಕೆ ಹೇಳಿಕೆ ಪ್ರತಿಕ್ರಿಯೆ ಇಲ್ಲ: ಯಡಿಯೂರಪ್ಪ
ಯಡಿಯೂರಪ್ಪ ನಾಲಿಗೆ ಮೇಲೆ ಹಿಡಿತವಿರಲಿ: ದೇಶಪಾಂಡೆ