ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೇಲ್ಮನೆ:ಮತದಾರರ ಪಟ್ಟಿಯಲ್ಲಿ ರಾಜಶೇಖರನ್ ಹೆಸರೇ ನಾಪತ್ತೆ! (Congress | Election | Rajashekaran | BJP)
Bookmark and Share Feedback Print
 
ಮಾಜಿ ಸಚಿವ, ವಿಧಾನ ಪರಿಷತ್ತಿನ ಸದಸ್ಯ ಎಂ.ವಿ ರಾಜಶೇಖರನ್ ಅವರಿಗೆ ಮತದಾನದ ಹಕ್ಕು ದೊರೆಯದೆ ಹಿಂದಿರುಗಿದ ಘಟನೆ ಬೆಂಗಳೂರು ನಗರ ಕ್ಷೇತ್ರ ಮತಗಟ್ಟೆಯಲ್ಲಿ ಶುಕ್ರವಾರ ನಡೆದಿದೆ.

ಮೇಲ್ಮನೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮತಗಟ್ಟೆಯಲ್ಲಿ ಮತ ಹಾಕಲು ಬಂದಿದ್ದ ರಾಜಶೇಖರನ್ ಅವರಿಗೆ ಆಶ್ಚರ್ಯ ಕಾದಿತ್ತು. ಮತದಾರರ ಪಟ್ಟಿಯಲ್ಲಿ ಅವರ ಹೆಸರೇ ಇರಲಿಲ್ಲವಾಗಿತ್ತು!

ಜಯನಗರದ ನಿವಾಸಿಯಾದ ಅವರು, ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ, ಪಟ್ಟಿಯಲ್ಲಿ ಅವರ ಹೆಸರು ಮಾಯವಾಗಿತ್ತು. ಆದರೂ ಚುನಾವಣಾ ಅಧಿಕಾರಿಗಳು ಅವರಿಗೆ ಬ್ಯಾಲೆಟ್ ಪೇಪರ್ ನೀಡಿ ಮತ ಚಲಾಯಿಸಲು ಅವಕಾಶ ನೀಡಿದರು. ಆದರೆ ಬಿಜೆಪಿ ಚುನಾವಣಾ ಏಜೆಂಟ್ ಆಕ್ಷೇಪಣೆ ಮಾಡಿದ ಕಾರಣ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ನಾನೊಬ್ಬ ವಿಧಾನ ಪರಿಷತ್ ಸದಸ್ಯನಾಗಿದ್ದರೂ ಮತ ಹಾಕಲು ಸಾಧ್ಯವಾಗಲಿಲ್ಲ ಎಂದು ರಾಜಶೇಖರನ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ