ನಗರದಲ್ಲಿ ಮಾಹಿತಿ ತಂತ್ರಜ್ಞಾನ ಅಂತಾರಾರಾಷ್ಟ್ರೀಯ ಕೇಂದ್ರಕ್ಕೆ ಒಂದು ಹಂತದ ಅನುದಾನವಾಗಿ 100 ಕೋಟಿ ರೂಪಾಯಿಗಳನ್ನು ನೀಡುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಕಪಿಲ್ ಸಿಬಲ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಎಡಿಯೂರಪ್ಪ ಮನವಿ ಮಾಡಿದ್ದಾರೆ.
ಈ ಸಂಬಂಧ ತಾವು ಸಚಿವ ಕಪಿಲ್ ಸಿಬಲ್‌ಗೆ ಬರೆದ ಪತ್ರದ ಪ್ರತಿಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ ಅವರು ಪ್ರಸಕ್ತ ಸಾಲಿನಲ್ಲಿ ಅನುದಾನ ನೀಡಲಾಗುವ ವಿಶ್ವವಿದ್ಯಾಲಯಗಳ ಪಟ್ಟಿಗೆ ಐಐಐಟಿ-ಬೆಂಗಳೂರನ್ನು ಸೇರ್ಪಡೆ ಮಾಡಿ ಒಂದು ಹಂತದ ಅನುದಾನವಾಗಿ 100 ಕೋಟಿ ರೂಪಾಯಿಗಳನ್ನು ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಇಲ್ಲವಾದಲ್ಲಿ ಐಐಐಟಿ ಬೆಂಗಳೂರನ್ನು ಉದ್ದೇಶಿತ, 20ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರಿಸಿ ಒಂದು ಹಂತದ ಅನುದಾನವಾಗಿ 100 ಕೋಟಿ ರೂಪಾಯಿಗಳನ್ನು ನೀಡುವಂತೆ ಮನವಿ ಮಾಡಿದ್ದರೆ.