ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ಮುನ್ನೋಟ » ಅಕ್ಷಯ್-ಕತ್ರೀನಾ ಜೋಡಿಯ ಮೋಡಿ
ಸಿನಿಮಾ ಮುನ್ನೋಟ
Feedback Print Bookmark and Share
 
IFM
ಅಕ್ಷಯ್ ಕುಮಾರ್ ಯಾವಾಗಲೂ ಯಾವುದೇ ನಾಯಕಿ ನಟಿ ಜತೆ ನಟಿಸುತ್ತಲೇ ಇರುತ್ತಾರೆ. ವೃತ್ತಿ ಜೀವನದ ಆರಂಭದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರವೀನಾ ಟಂಡನ್ ಜತೆ ಸೇರಿ ಸಾಕಷ್ಟು ಚಿತ್ರದಲ್ಲಿ ಪಾಲ್ಗೊಂಡಿದ್ದರು.

ಆನಂತರ ಅಕ್ಷಯ್ ಮತ್ತು ಪ್ರಿಯಾಂಕಾ ಚೋಪ್ರಾ ಜೋಡಿಯ ಹಲವು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಯಶ ಕಂಡವು. ಅಕ್ಷಯ್ ಮತ್ತು ಪ್ರಿಯಾಂಕಾ ಜೋಡಿಯು ತೀರಾ ಹತ್ತಿರವಾಗುತ್ತಿದೆ ಎಂಬ ಸುದ್ದಿ ಟ್ವಿಂಕಲ್ ಖನ್ನಾ ಕಿವಿಗೆ ಬಿದ್ದಾಗ, ಆಕೆ ಅಕ್ಷಯ್ ಕುಮಾರ್ ಪ್ರಿಯಾಂಕಾ ಜತೆ ನಟಿಸುವ ಸಾಧ್ಯತೆಯ ಮಾರ್ಗ ಬಂದ್ ಮಾಡಿಸಿದರು.

ಇದೀಗ ಅಕ್ಷಯ್, ಕತ್ರಿನಾ ಜತೆಗೆ ಜೋಡಿಯಾಗಿ ಪರದೆ ಮೇಲೆ ಸಾಕಷ್ಟು ಬಾರಿ ಕಾಣಿಸಿಕೊಳ್ಳುತ್ತಿದ್ದಾರೆ. ಹಮ್ ಕೋ ದೀವಾನಾ ಕರ್ ಗಯೀ ಮತ್ತು ನಮಸ್ತೇ ಲಂಡನ್ ಚಿತ್ರಗಳಲ್ಲಿ ಇಬ್ಬರ ನಡುವಿನ ಕೆಮಿಸ್ಟ್ರಿ, ಪರದೆ ಮೇಲೆ ಎಲ್ಲರ ಗಮನ ಸೆಳೆದಿತ್ತು. ಕತ್ರಿನಾ ಜತೆ ಅಕ್ಷಯ್ ಈ ದಿನಗಳಲ್ಲಿ ಸಿಂಹ್ ಈಸ್ ಕಿಂಗ್ ಹಾಗೂ ವೆಲ್‌ಕಂ ಚಿತ್ರ ಮಾಡುತ್ತಿದ್ದಾರೆ.

ಅಕ್ಷಯ್ ಅವರು ಕತ್ರಿನಾ ಜತೆಗೆ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸುವ ಇರಾದೆಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ. ಪ್ರೇಕ್ಷಕರು ಈ ಜೋಡಿಯನ್ನು ಮೆಚ್ಚಿಕೊಂಡಿರುವುದೇ ಇದಕ್ಕೆ ಕಾರಣವಂತೆ.