ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಳೆಯಾಳಂಗೆ ಮಿಲನ (Puneeth Rajkumar | Milana | Parvathi Menon)
ಸುದ್ದಿ/ಗಾಸಿಪ್
Feedback Print Bookmark and Share
 
Puneeth Rajkumar
MOKSHA
ಕನ್ನಡ ಚಿತ್ರರಂಗದ ಪ್ರಸಿದ್ಧ ಹಿಟ್ ಚಿತ್ರ ಮಿಲನ ಇದೀಗ ಮಳೆಯಾಳಂ ಭಾಷೆಗೆ ಡಬ್ ಆಗಿದೆ. ಪ್ರಕಾಶ್ ನಿರ್ದೇಶನದ ಈ ಚಿತ್ರ ಶೀಘ್ರವೇ ಕೇರಳಾದ್ಯಂತ ಬಿಡುಗಡೆಗೊಳ್ಳಲಿದೆ.

ಮಳೆಯಾಳಂನಲ್ಲಿ ಚಿತ್ರಕ್ಕೆ ಇಷ್ಟಂ ಎನಿಕಿಷ್ಟಂ (ಇಷ್ಟ ನನಗಿಷ್ಟ) ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರದ ಮೂಲಕ ಪುನೀತ್ ರಾಜ್‌ಕುಮಾರ್ ದಕ್ಷಿಣದ ಮತ್ತೊಂದು ಭಾಷೆಗೂ ಕಾಲಿಟ್ಟಂತಾಗಿದೆ. ಮುಖ್ಯವಾಗಿ ಚಿತ್ರದಲ್ಲಿ ಮಳೆಯಾಳಂ ಬೆಡಗಿ ಪಾರ್ವತಿ ಮೆನನ್ ನಟಿಸುತ್ತಿರುವುದು ಮತ್ತೊಂದು ಆಕರ್ಷಣೆಯಾಗಿದೆ. ಪಾರ್ವತಿ ಅಭಿಮಾನಿಗಳಿಗೆ ಈ ಚಿತ್ರ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

ಇದಕ್ಕೂ ಮೊದಲು ಪುನೀತ್ ಅಭಿನಯದ ಬಿಂದಾಸ್ ಚಿತ್ರ ತೆಲುಗಿಗೆ ಡಬ್ ಆಗಿತ್ತು. ಅತ್ತ ಕನ್ನಡದ ಕಿರಣ್ ಬೇಡಿ ಚಿತ್ರ ತೆಲುಗಿಗೆ ಡಬ್ ಆಗಿದೆ. ಒಟ್ಟಿನಲ್ಲಿ ಕನ್ನಡದಲ್ಲಿ ಡಬ್ಬಿಂಗ್ ಚಿತ್ರಗಳ ಕುರಿತು ವಿವಾದಗಳ ನಡುವೆ ಕನ್ನಡದ್ದೇ ಕೆಲ ಚಿತ್ರಗಳು ಇತರ ಭಾಷೆಗಳಿಗೆ ಡಬ್ ಆಗುತ್ತಿರುವುದು ಒಂದು ಗಮನಾರ್ಹ ಬೆಳವಣಿಗೆಯೆಂದರೆ ತಪ್ಪಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪುನೀತ್ ರಾಜ್ಕುಮಾರ್, ಮಿಲನ, ಪಾರ್ವತಿ ಮೆನನ್, ಮಳಯಾಳಂ