ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಂಭಾವನೆಯನ್ನೇ ಹಿಂತಿರುಗಿಸಿದ್ದರು ಈ ಕೆ.ಎಸ್. ಅಶ್ವತ್ಥ್! (K.S.Ashwath | Kannada Cinema | Nagarahavu)
ಸುದ್ದಿ/ಗಾಸಿಪ್
Bookmark and Share Feedback Print
 
K.S.Ashwath
MOKSHA
ಕೆ.ಎಸ್.ಅಶ್ವತ್ಥ್ ಅವರೊಬ್ಬ ಪ್ರತಿಭಾವಂತ ಪೋಷಕ ನಟ ಎನ್ನುವುದಕ್ಕಿಂತಲೂ ಅವರೊಬ್ಬ, ಪ್ರಾಮಾಣಿಕ, ಶಿಸ್ತುಬದ್ಧ, ಸಂಯಮದ ವ್ಯಕ್ತಿ ಎಂದು ಚಿತ್ರರಂಗದ ಪ್ರತಿಯೊಬ್ಬರೂ ಅಭಿಪ್ರಾಯಪಟ್ಟಿದ್ದಾರೆ. ಅವರ ಪ್ರಾಮಾಣಿಕತೆಗೆ, ಉದಾರತೆಗೆ, ಕಡಿಮೆ ಸಂಭಾವನೆ ಪಡೆಯುತ್ತಿದ್ದುದಕ್ಕೆ ತಾಜಾ ಉದಾಹರಣೆಯೊಂದನ್ನು ಹಿರಿಯ ರಂಗಭೂಮಿ ನಟ ಸಿ.ಆರ್.ಸಿಂಹ ಬಿಚ್ಚಿಟ್ಟಿದ್ದಾರೆ.

'ಒಂದು ಚಿತ್ರದ ಸಂದರ್ಭ ಅವರ ನಟನೆಗೆ ಇಂತಿಷ್ಟು ಸಂಭಾವನೆ ಅಂತ ಮೊದಲೇ ನೀಡಿ ಆಗಿತ್ತು. ಶೂಟಿಂಗಿಗೆ ಡೇಟ್ಸ್ ಸಹ ಅಶ್ವತ್ಥ್ ಅವರು ನೀಡಿದ್ದರು. ಆದರೆ, ಅಂದುಕೊಂಡಿದ್ದ ದಿನಗಳಿಗಿಂತ ಮೊದಲೇ ಚಿತ್ರದ ಶೂಟಿಂಗ್ ಮುಗಿದುಹೋಯಿತು. ಆಗವರು ನೇರವಾಗಿ ನಿರ್ಮಾಪಕರ ಬಳಿ ಹೋಗಿ ಅವರ ಬಳಿ, ಸರ್, ಇಂತಿಷ್ಟು ದಿನದ ಶೂಟಿಂಗಿಗೆ ಇಷ್ಟು ಅಂತ ನೀವು ಸಂಭಾವನೆ ನೀಡಿದ್ದೀರಿ. ಈಗ ಅಂದುಕೊಂಡದ್ದಕ್ಕಿಂತ ಮೊದಲೇ ಶೂಟಿಂಗ್ ಮುಗಿದಿದೆ. ಹಾಗಾಗಿ, ನನ್ನ ಸಂಭಾವನೆಯಿಂದ ಸ್ವಲ್ಪ ಹಣ ನೀವು ವಾಪಾಸ್ ತೆಗೆದುಕೊಳ್ಳಿ ಅಂತ ಸಂಭಾವನೆ ಹಣವನ್ನು ವಾಪಾಸ್ ನೀಡಿದ ಪ್ರಾಮಾಣಿಕ, ಉದಾರ ವ್ಯಕ್ತಿ ಅವರು' ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು ಸಿ.ಆರ್.ಸಿಂಹ.

'ಅಶ್ವತ್ಥ್ ಅವರು ಕರ್ತವ್ಯ ನಿಷ್ಟೆಗೆ ಮತ್ತೊಂದು ಹೆಸರು. ಬೆಳ್ಳಿಮೋಡದಲ್ಲಿ ಕಲ್ಪನಾರ ತಂದೆಯಾಗಿ ಮಾಡಿದ ಪಾತ್ರ ತುಂಬ ಅದ್ಭುತವಾಗಿ ಮೂಡಿ ಬಂದಿತ್ತು. ತಮ್ಮ ಜೀವನದುದ್ದಕ್ಕೂ ಅವರು ತಮ್ಮ ಗೌರವ, ಹಿರಿಮೆಯನ್ನು ಕಾಪಾಡಿಕೊಂಡು ಬಂದವರು. ಈಗವರು ನಮ್ಮೊಂದಿಗಿಲ್ಲ ಎಂದು ಅತೀವ ನೋವಿನ ವಿಚಾರ' ಎಂದರು ಸಿಂಹ.

ನನಗೇ ಯಾಕೆ ಕೊಡ್ತೀರಿ?- ನಟ ಮಂಡ್ಯ ರಮೇಶ್ ಅವರು ತಮ್ಮ ನೆನಪಿನಾಳದಿಂದ ಅಶ್ವತ್ಥ್ ಅವರ ಪ್ರಾಮಾಣಿಕತೆ, ಸರಳತೆಗೆ ಸಾಕ್ಷಿಯಾಗಿ ಘಟನೆಯೊಂದನ್ನು ಬಿಚ್ಚಿಟ್ಟರು. ಅವರು ಹೇಳುವಂತೆ, 'ನಟ ಅಶ್ವತ್ಥ್ ಅವರ ಜೊತೆಗೆ ಅತ್ಯಂತ ಆತ್ಮೀಯ ಒಡನಾಟ ಹೊಂದಿದ್ದವರಲ್ಲಿ ನಾನೂ ಒಬ್ಬ. ಅವರು ಕಲಾವಿದನ ಜೀವಂತಿಕೆಯ ಸಂಕೇತ. ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಅವರು ರಂಗಭೂಮಿ ನಂಟು ಹೊಂದಿದ್ದರು. ತಮ್ಮದೆಂದು ಒಂದು ಮೊಬೈಲಾಗಲೀ, ಕಾರನ್ನಾಗಲೀ ಏನನ್ನೂ ಇಟ್ಟುಕೊಂಡಿರಲ್ಲಿಲ್ಲ. ಸರಳವಾಗಿ ಬದುಕಿ, ತನ್ನ ಪಾಡಿಗೆ ತಾನು ಸದ್ದಿಲ್ಲದೆ ಬದುಕಿದವರು. ಅಂದೊಮ್ಮೆ ಅವರಿಗೆ ಅನಾರೋಗ್ಯವಾದಾಗ, ಅವರಿಗೆ ಆರ್ಥಿಕ ತೊಂದರೆಯಿದೆಯೆಂದು ಅವರಿಗೆ ಅಕಾಡೆಮಿಯಿಂದ ಎರಡು ಲಕ್ಷ ಕೊಡಿಸಲು ಪ್ರಯತ್ನ ಪಟ್ಟಿದ್ದಕ್ಕೆ ಅವರು ನನ್ನನ್ನುದ್ದೇಶಿಸಿ, ನನಗೆ ಸಾಕಪ್ಪಾ ಇಷ್ಟು. ಯಾಕೆ ನನಗೇ ಹಣ ಕೊಡ್ತೀರಿ, ಬೇರೆಯವರಿಗೆ ಕೊಡಿ ಎಂದರು. ಹೀಗೆ ಹೇಳೋರು ಯಾರಾದರೂ ಇದ್ದಾರಾ? ಖಂಡಿತ ಸಿಗಲಿಲ್ಲಕ್ಕಿಲ್ಲ. ರಂಗಭೂಮಿ, ಚಿತ್ರರಂಗ ಎಲ್ಲಿವರೆಗೂ ಇರುತ್ತೋ ಅಲ್ಲಿವರೆಗೂ ಅಶ್ವತ್ಥ್ ಇದ್ದೇ ಇರುತ್ತಾರೆ. ಇರಬೇಕು ಕೂಡಾ ಎಂದು ಮಾತು ಮುಗಿಸಿದರು ಮಂಡ್ಯ ರಮೇಶ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೆಎಸ್ ಅಶ್ವತ್ಥ್, ಕನ್ನಡ ಸಿನಿಮಾ, ನಾಗರಹಾವು