| ರಾಷ್ಟ್ರೀಯ ಗುರುತು ಚೀಟಿ ಯೋಜನೆ ಅಧ್ಯಕ್ಷರಾಗಿ ನಿಲೇಕಣಿ | | | ನವದೆಹಲಿ, ಗುರುವಾರ, 25 ಜೂನ್ 2009( 19:58 IST ) | | | |
| | |
| ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಂದನ್ ನಿಲೇಕಣಿ ಅವರನ್ನು ರಾಷ್ಟ್ರೀಯ ಗುರುತು ಚೀಟಿ ಯೋಜನೆಯ ಅಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರ ನೇಮಕಗೊಳಿಸಿದೆ.ಪಾಕಿಸ್ತಾನ, ನೇಪಾಳ, ಬಾಂಗ್ಲಾ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ದೇಶದಲ್ಲಿ ಅಕ್ರಮವಾಗಿ ತಳವೂರಿರುವ ನಾಗರಿಕರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕೇಂದ್ರದ ಯುಪಿಎ ಸರ್ಕಾರ ರಾಷ್ಟ್ರೀಯ ಗುರುತು ಚೀಟಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಗುರುತು ಚೀಟಿ (ಯೂನಿಕ್ ಐಡೆಂಟಿಫಿಕೇಶನ್ ಪ್ರೋಗ್ರಾಂ) ಯೋಜನೆಯ ಅಧ್ಯಕ್ಷರನ್ನಾಗಿ ನಿಲೇಕಣೆಯನ್ನು ನೇಮಕ ಮಾಡಿದ್ದು, ಇದು ಕ್ಯಾಬಿನೆಟ್ ದರ್ಜೆಯ ಹುದ್ದೆಯಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.ವಿಸಿಟಿಂಗ್ ವೀಸಾ, ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚುವಲ್ಲಿ ರಾಷ್ಟ್ರೀಯ ಗುರುತು ಚೀಟಿ ಯೋಜನೆ ಮಹತ್ವದಾಗಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಟ್ಟಂತಾಗಿದೆ.ಇನ್ಫೋಸಿಸ್‌ಗೆ ರಾಜೀನಾಮೆ: ರಾಷ್ಟ್ರೀಯ ಗುರುತಿನ ಚೀಟಿ ವಿತರಣೆ ಯೋಜನೆಗೆ ಅಧ್ಯಕ್ಷರಾಗಿ ನೇಮಕಗೊಂಡಿರುವ ನಂದನ್ ನಿಲೇಕಣಿ ಅವರು ಇನ್ಫೋಸಿಸ್ ಸಹಸಂಸ್ಥಾಪಕ ಹುದ್ದೆ ಹಾಗೂ ಅಡಳಿತ ಮಂಡಳಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸರಕಾರ ನೀಡಿರುವ ಹುದ್ದೆಯನ್ನು ಸ್ವೀಕರಿಸಿರುವ ನಿಲೇಕಣಿ ಮಾತೃಸಂಸ್ಥೆ ಇನ್ಫೋಸಿಸ್ ನ ಸಹಸಂಸ್ಥಾಪಕ ಹಾಗೂ ಆಡಳಿತ ಮಂಡಳಿಯ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ರಾಷ್ಟ್ರೀಯ ಗುರುತಿನ ವಿತರಣೆ ಯೋಜನೆಗೆ ನಿಲೇಕಣಿ ಅವರನ್ನು ಮುಖ್ಯಸ್ಥರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. |
| |
| | |
| | | |
|
| | |
|
|
| | |
|
|
| |
|  | |