ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೋವಾ ಬೀಚಲ್ಲಿ ನಗ್ನತೆ ನಿಷಿದ್ಧ, ಟಾಪ್‌ಲೆಸ್ ಸೂರ್ಯಸ್ನಾನವಲ್ಲ!? (Goa | nudity | topless bathing | Goan beaches)
Bookmark and Share Feedback Print
 
ಗೋವಾ ಬೀಚುಗಳಲ್ಲಿ ನಗ್ನತೆ ನಿಷಿದ್ಧ ಎಂದು ಗೋವಾ ಸರಕಾರ ಹೇಳಿದೆಯಾದರೂ, ಟಾಪ್‌ಲೆಸ್ ಆಗಿ ವಿದೇಶೀಯರು ಸೂರ್ಯಸ್ನಾನ ಮಾಡುವುದರ ಬಗ್ಗೆ ಯಾವುದೇ ಸ್ಪಷ್ಟ ನಿರ್ದೇಶನವನ್ನು ನೀಡಿಲ್ಲ.

ಗೋವಾದ ಬೀಚುಗಳಲ್ಲಿ ಸಾಕಷ್ಟು ಅತ್ಯಾಚಾರ-ಕೊಲೆ ಪ್ರಕರಣಗಳು ನಡೆದ ಬಳಿಕವೂ ವಿದೇಶೀಯರ ಆಟೋಪಗಳಿಗೆ ಪ್ರವಾಸೋದ್ಯಮ ಇಲಾಖೆ ಕಡಿವಾಣ ಹಾಕುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟವಾಗಿ ಹೊರಗೆಡವಿಲ್ಲ. ಈ ಸಂಬಂಧ ಗೋವಾ ಸರಕಾರ ಬಿಡುಗಡೆ ಮಾಡಿರುವ ಬುಕ್‌ಲೆಟ್‌ನಲ್ಲಿ ಇಂತಹ ಗೊಂದಲಗಳು ಕಾಣಿಸಿಕೊಂಡಿವೆ.

ಗೋವಾಕ್ಕೆ ಪ್ರತೀ ವರ್ಷ ನಾಲ್ಕು ಲಕ್ಷಕ್ಕೂ ಹೆಚ್ಚು ವಿದೇಶೀಯರು ಭೇಟಿ ನೀಡುತ್ತಿದ್ದು, ಅವರಲ್ಲಿ ರಷ್ಯಾ ಮತ್ತು ಬ್ರಿಟನ್ ಪ್ರಜೆಗಳೇ ಅಗ್ರ ಸ್ಥಾನ ಪಡೆದುಕೊಂಡಿರುವುದರಿಂದ ಇಂಗ್ಲೀಷ್ ಮತ್ತು ರಷ್ಯನ್ ಭಾಷೆಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಕೈಪಿಡಿಯನ್ನು ಬಿಡುಗಡೆ ಮಾಡಲಾಗಿದೆ.

'ನಿಮಗೆ ಏನಾದರೂ ಸಂಶಯಗಳಿದ್ದರೆ ಸ್ಥಳೀಯರ ಸಲಹೆಗಳನ್ನು ಪಡೆದುಕೊಳ್ಳಿ, ಅದರಲ್ಲೂ ಟಾಪ್‌ಲೆಸ್ ಸ್ನಾನದ ಸಂದರ್ಭದಲ್ಲಿ. ಕಡಲ ತೀರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಗ್ನತೆ ಕಡ್ಡಾಯವಾಗಿ ನಿಷಿದ್ಧ' ಎಂದು ಹೊಟೇಲ್ ಮತ್ತು ಪ್ರವಾಸಿ ಕೇಂದ್ರಗಳಲ್ಲಿ ಲಭ್ಯವಿರುವ ಮಾರ್ಗದರ್ಶಿಕೆಯಲ್ಲಿ ಪ್ರವಾಸೋದ್ಯಮ ಇಲಾಖೆ ಸಲಹೆ ನೀಡಿದೆ.

ಯೂರೋಪಿಯನ್ ಶೈಲಿಯ ದಿರಿಸುಗಳು ಸಾಮಾನ್ಯವಾಗಿ ಗೋವಾ ಜನರಿಗೆ ಸಹ್ಯವಾಗುತ್ತದೆ. ಆದರೆ ಸ್ಥಳೀಯ ಧಾರ್ಮಿಕ ಅಥವಾ ಕೋಮಲ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದೂ ಗುರುವಾರ ಬಿಡುಗಡೆ ಮಾಡಲಾಗಿರುವ ಮಾರ್ಗದರ್ಶಿಕೆಯಲ್ಲಿ ತಿಳಿಸಲಾಗಿದೆ.

ಯೂರೋಪಿಯನ್ ಪ್ರವಾಸಿಗರಲ್ಲಿ ಟಾಪ್‌ಲೆಸ್ ಸ್ನಾನ ಅತಿ ಜನಪ್ರಿಯವಾಗಿದ್ದು, ವಿಶೇಷವಾಗಿ ಮಹಿಳೆಯರು ಅರೆ ನಗ್ನಾವಸ್ಥೆಯಲ್ಲಿ ಸೂರ್ಯಸ್ನಾನಕ್ಕೆ ಮೊರೆ ಹೋಗುತ್ತಾರೆ. ಗೋವಾದ ಕಾಂಡೊಮಿಮ್, ಮೊರ್ಜಿಮ್, ಅರಂಬೋಲ್, ಪಾಲೊಲೆಮ್ ಮತ್ತು ಇತರ ಕಡೆಗಳಲ್ಲಿ ಈ ರೀತಿ ಕಾಣಿಸಿಕೊಳ್ಳುವುದು ಸಾಮಾನ್ಯ.

ವಿಶೇಷವೆಂದರೆ ಟಾಪ್‌ಲೆಸ್ ಆಗಿ ಯಾರೂ ಕೂಡ ದ್ವಿಚಕ್ರ ವಾಹನವನ್ನು ಚಲಾಯಿಸಬೇಡಿ; ದೇಹದ ಮೇಲ್ಭಾಗದಲ್ಲಿ ಬಟ್ಟೆಯಿಲ್ಲದೆ ದ್ವಿಚಕ್ರ ವಾಹನ ಕೊಂಡೊಯ್ಯುವ ಸಾಹಸಕ್ಕೆ ಕೈ ಹಾಕಬೇಡಿ ಎಂದು ಸಲಹೆ ನೀಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ