ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೌದು, ವೀಡಿಯೋದಲ್ಲಿರೋದು ನಾನೇ: ನಿತ್ಯಾನಂದ ಸ್ವಾಮಿ (Paramahasma Nithyananda Swami | Ranjitha | Sex Scandal | Bangalore)
Bookmark and Share Feedback Print
 
ಮಾಧ್ಯಮಗಳಲ್ಲಿ ಬಹಿರಂಗವಾಗಿ ವಿವಾದಕ್ಕೆ ಕಾರಣವಾದ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಕಾವಿಧಾರಿ ವ್ಯಕ್ತಿ ನಾನೇ ಎಂದು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪರಮಹಂಸ ನಿತ್ಯಾನಂದ ಸ್ವಾಮಿ ಅರೆ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ.

ಆರೋಗ್ಯ ಕೆಟ್ಟಿದ್ದ ಸಂದರ್ಭದಲ್ಲಿ ತಮಿಳು ನಟಿ ರಂಜಿತಾ ತನಗೆ ಉಪಚರಿಸುತ್ತಿದ್ದುದು ಹೌದು. ಆದರೆ ಆ ವೀಡಿಯೋದ ಉದ್ದಕ್ಕೂ ಅಶ್ಲೀಲ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ನಾನಲ್ಲ. ಆ ವೀಡಿಯೋವನ್ನು ತಂತ್ರಜ್ಞಾನ ಬಳಸಿ ಬದಲಾಯಿಸಲಾಗಿದೆ. ನನ್ನ ದಿನಚರಿಯನ್ನು ಕದ್ದು ಚಿತ್ರೀಕರಣ ನಡೆಸಿ ಬೇರೊಂದು ವೀಡಿಯೋ ತುಣುಕಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಕಳಂಕಿತ ಸ್ವಾಮೀಜಿ ಆರೋಪಿಸಿದ್ದಾರೆ.
PR

ಕಳೆದ 33 ವರ್ಷಗಳ ಸಾರ್ವಜನಿಕ ಜೀವನದಲ್ಲಿ ನಾನು ಹೆಸರು ಮತ್ತು ಪ್ರಸಿದ್ಧಿಯಲ್ಲಿ ಅಗ್ರಸ್ಥಾನಕ್ಕೇರಿದ್ದೇನೆ. ಅತೀ ಹೆಚ್ಚು ಜನರಿಂದ ಯೂಟ್ಯೂಬ್‌ನಲ್ಲಿ ವೀಕ್ಷಿಸಲ್ಪಟ್ಟ ಗುರು ಎಂಬ ಹೆಗ್ಗಳಿಕೆಯ ಜತೆಗೆ ಇಂಟರ್ನೆಟ್‌ನಲ್ಲಿ ಕಳೆದ ಕೆಲವು ದಿನಗಳಿಂದ ಅತಿ ಹೆಚ್ಚು ಜನಪ್ರಿಯವಾದ ಹಗರಣ ಕೂಡ ನನ್ನದೆಂಬ ಹಣೆಪಟ್ಟಿ ದಕ್ಕಿದೆ. ಹಾಗಾಗಿ ಏಳು-ಬೀಳುಗಳೆರಡನ್ನೂ ಕಂಡಿದ್ದೇನೆ. ಬದುಕಿನ ವಿವಿಧ ಮಜಲುಗಳನ್ನು ನಾನು ಕಲಿಯುತ್ತಿದ್ದೇನೆ ಎಂದು 'ಟೈಮ್ಸ್ ನೌ' ಆಂಗ್ಲ ವಾರ್ತಾವಾಹಿನಿಗೆ ಹರಿದ್ವಾರದಿಂದ ಸಂದರ್ಶನ ನೀಡಿರುವ ನಿತ್ಯಾನಂದ ಸ್ವಾಮಿ ಹೇಳಿದ್ದಾರೆ.

ಜನಸಾಮಾನ್ಯರಿಂದಲೂ ಕರುಣೆ...
ನನ್ನ ವಿರುದ್ಧ ಇಷ್ಟೊಂದು ದೊಡ್ಡ ಮಟ್ಟದ ಷಡ್ಯಂತ್ರ ನಡೆಯುತ್ತದೆ ಅಥವಾ ನನಗೆ ಇಷ್ಟೊಂದು ವೈರಿಗಳಿದ್ದಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಆದರೆ ಇಂತಹ ಪರಿಸ್ಥಿತಿಯಲ್ಲೂ ನಾನು ಮಿಲಿಯನ್‌ಗಟ್ಟಲೆ ಇಮೇಲ್, ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿದ್ದೇನೆ. ಜಗತ್ತಿನ ವಿವಿಧ ಭಾಗಗಳಿಂದ ಸಾಗರೋಪಾದಿಯಲ್ಲಿ ಬೆಂಬಲ ದೊರಕುತ್ತಿದೆ. ಒಬ್ಬರ ಖಾಸಗಿ ಜೀವನವನ್ನು ಈ ರೀತಿ ಕೀಳಾಗಿ ಬಿಂಬಿಸುವುದು ಮತ್ತು ಅಮಾನುಷವಾಗಿ ತೆಗಳುತ್ತಿರುವುದರ ಬಗ್ಗೆ ನನ್ನ ಅನುಯಾಯಿಗಳಲ್ಲದವರೂ ಮರುಗುತ್ತಿದ್ದಾರೆ.

ಹೌದು, ವೀಡಿಯೋದಲ್ಲಿರೋದು ನಾನೇ....
ವೀಡಿಯೋ ಕುರಿತು ನಾನು ದೃಢವಾಗಿ ದೊಡ್ಡ ಮಟ್ಟದ ಹೇಳಿಕೆಯನ್ನು ನೀಡಲು ಹೋಗುವುದಿಲ್ಲ. ಆದರೆ ಅಡ್ಡ ದಾರಿಯ ಮೂಲಕ ಇದನ್ನು ಚಿತ್ರೀಕರಿಸಿ ಅದನ್ನು ತಂತ್ರಜ್ಞಾನದ ಮೂಲಕ ಬದಲಾಯಿಸಿ, ಪಿತೂರಿ ನಡೆಸಿ ನನ್ನನ್ನು ಕೆಟ್ಟದಾಗಿ ತೋರಿಸಲಾಗಿದೆ. ಇದು ಈಗಷ್ಟೇ ನಮ್ಮ ಗಮನಕ್ಕೆ ಬರುತ್ತಿದೆ. ನನ್ನ ವೈಯಕ್ತಿಕ ಜೀವನವನ್ನು ಸಂಪೂರ್ಣವಾಗಿ ತಪ್ಪಾಗಿ ಬಿಂಬಿಸಲಾಗಿದ್ದು, ಖಾಸಗಿತನಕ್ಕೆ ಧಕ್ಕೆ ತರಲಾಗಿದೆ.

ನಾನು ಸ್ನಾನದ ನಂತರ ಬಟ್ಟೆ ಬದಲಾಯಿಸುತ್ತಿರುವ ಚಿತ್ರಗಳನ್ನು ಕೆಲವು ಮ್ಯಾಗಜಿನ್‌ಗಳು ಪ್ರಕಟಿಸುತ್ತಿವೆ. ಕೆಲವು ವೀಡಿಯೋಗಳನ್ನು ನನ್ನ ವ್ಯಕ್ತಿತ್ವವನ್ನು ಕೆಡಿಸಲೆಂದೇ ಪ್ರಸಾರ ಮಾಡಲಾಗಿದೆ. ಇಲ್ಲಿ ವೀಡಿಯೋಗಳನ್ನು ಎಷ್ಟು ಪ್ರಮಾಣದಲ್ಲಿ ಬದಲಾಯಿಸಲಾಗಿದೆ ಎಂದು ನನಗೆ ತಿಳಿದಿಲ್ಲ. ನಮಗೆ ಸಿಕ್ಕಿರುವ ವೀಡಿಯೋಗಳನ್ನು ನಾವು ಹೆಚ್ಚಿನ ತನಿಖೆಗಾಗಿ ಕಳುಹಿಸಿಕೊಟ್ಟಿದ್ದೇವೆ. ಹಾಗಾಗಿ ಈ ಹಂತದಲ್ಲಿ ನಾನು ತೀರಾ ತಾಳ್ಮೆಯಿಂದಲೇ ಹೇಳಿಕೆಗಳನ್ನು ನೀಡುತ್ತೇನೆ.

ರಂಜಿತಾ ನನ್ನ ಸೇವಕಿಯಾಗಿದ್ದಳು...
ರಂಜಿತಾ ಸುದೀರ್ಘ ಸಮಯದಿಂದ ನನ್ನ ಸೇವೆ ಮಾಡುತ್ತಾ ಬಂದಿದ್ದಾಳೆ. ಸುದೀರ್ಘ ಸಮಯಗಳ ಕಾಲ ನಾನು ಅನಾರೋಗ್ಯದಿಂದ ಬಳಲುವ ಸಂದರ್ಭದಲ್ಲಿ ಆಕೆ ನನ್ನ ಸೇವೆ ಮಾಡುತ್ತಾ, ಮುತುವರ್ಜಿ ವಹಿಸುತ್ತಿದ್ದಳು. ಅವರ ಇಡೀ ಕುಟುಂಬವೇ ಹಲವು ಸಮಯದಿಂದ ನಮ್ಮ ಭಕ್ತರಾಗಿದ್ದಾರೆ. ಆಕೆ ಭಕ್ತೆಯಾಗಿದ್ದಳು, ಭಕ್ತೆಯಾಗಿದ್ದಾಳೆ ಮತ್ತು ಭಕ್ತೆಯಾಗಿಯೇ ಉಳಿಯುತ್ತಾಳೆ ಎಂಬುದನ್ನು ನಿರಾಕರಿಸುವ ಪ್ರಶ್ನೆಯೇ ಇಲ್ಲ.

2009ರ ಡಿಸೆಂಬರ್‌ನಲ್ಲಿ ನಾನು ಕೆಲವು ದಿನಗಳ ಕಾಲ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದೆ. ದೈಹಿಕವಾಗಿ ಅಸೌಖ್ಯಗೊಂಡಿದ್ದ ನಾನು ಜಾಗೃತವಾಗಿದ್ದುಕೊಂಡೇ ಸಮಾಧಿ ಸ್ಥಿತಿಯಲ್ಲಿದ್ದೆ.

ನಾನು ಸಮಾಧಿ ಸ್ಥಿತಿಯಲ್ಲಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಅಪಾರ್ಥ ಬರುವಂತೆ ಸನ್ನಿವೇಶವನ್ನು ಬಿಂಬಿಸುವ ಯತ್ನ ನಡೆಸಲಾಗಿದೆ. ಖಂಡಿತಾ ಇಲ್ಲಿ ಪಿತೂರಿ ನಡೆದಿರುವುದು ಸ್ಪಷ್ಟ. ನನ್ನ ಖಾಸಗಿ ಜಾಗಕ್ಕೆ ಬಂದು ಈಗ ಮಾಡಿರುವಂತೆ ತಮ್ಮ ಕೆಲಸ ಮುಗಿಸಿಕೊಂಡಿರುವುದೇ ಇದನ್ನು ತೋರಿಸುತ್ತದೆ.

ಎಲ್ಲರಿಗೂ ಬ್ರಹ್ಮಚರ್ಯ ಬೋಧಿಸಿಲ್ಲ....
ಬ್ರಹ್ಮಚರ್ಯ ಎನ್ನುವುದು ವೈಯಕ್ತಿಕ ನಿರ್ಧಾರ. ಪ್ರತಿಯೊಬ್ಬರೂ ಬ್ರಹ್ಮಚರ್ಯವನ್ನು ಪಾಲಿಸಬೇಕೆಂದು ನಾನು ಯಾವತ್ತೂ ಬೋಧಿಸಿಲ್ಲ. ಇದನ್ನು ನೀವೇ ನಿರ್ಧರಿಸಬೇಕೆಂದು ಹೇಳುತ್ತಾ ಬಂದವನು ನಾನು. ಅಂತಃಪ್ರಜ್ಞೆಯು ಜಾಗ್ರತಾವಸ್ಥೆಯೊಂದಿಗೆ ಹೆಚ್ಚಾಗಿದ್ದು, ಇತರರ ಅವಶ್ಯಕತೆ ಕಡಿಮೆಯಿದ್ದಾಗ ಬ್ರಹ್ಮಚರ್ಯ ಜೀವನ ನಡೆಸಬಹುದು. ಅದಿಲ್ಲದೇ ಇದ್ದಲ್ಲಿ ವೈವಾಹಿಕ ಜೀವನಕ್ಕೆ ಪ್ರವೇಶಿಸಬಹುದು. ಇದರಲ್ಲಿ ಯಾವುದೇ ಒಂದನ್ನು ನಾನು ಒತ್ತು ಕೊಟ್ಟು ಬೋಧಿಸಿಲ್ಲ.

ನನ್ನ ನಂಬಿಕೆ...
ನನಗೆ ಜೀವನದಲ್ಲಿ ಯಾವುದೇ ರೀತಿಯ ಅದೃಷ್ಟವಿಲ್ಲ ಎಂದು ನಂಬಿಕೊಂಡವನು ನಾನು. ನನಗೆ ಇತರ ಯಾವುದೇ ವ್ಯಕ್ತಿಗಳ ಅವಶ್ಯಕತೆಯಿಲ್ಲ.

ಸಂಬಂಧಪಟ್ಟ ಮತ್ತೊಂದು ಸುದ್ದಿ ಇಲ್ಲಿದೆ-
ಇನ್ನು ಯಾವುದೇ ಪ್ರಯೋಗ ಮಾಡಲಾರೆ: ನಿತ್ಯಾನಂದ ಸ್ವಾಮಿ


ಸಂಬಂಧಿತ ಮಾಹಿತಿ ಹುಡುಕಿ