ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಎಂಐಸಿ ವಿರುದ್ಧ ಅನಂತಮೂರ್ತಿ 'ಯುದ್ಧ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಎಂಐಸಿ ವಿರುದ್ಧ ಅನಂತಮೂರ್ತಿ 'ಯುದ್ಧ'
ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (ಬಿಎಂಐಸಿ) ಯೋಜನೆ ವಿರುದ್ಧ ಸಾಹಿತಿ ಯು.ಆರ್. ಅನಂತಮೂರ್ತಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನೈಸ್ ಸಂಸ್ಥೆ ಕೆಲವು ಅಧಿಕಾರಿಗಳನ್ನು ತಮ್ಮೆಡೆಗೆ ಸೆಳೆದುಕೊಂಡು ಅಧಿಕೃತ ದಾಖಲೆಗಳನ್ನು ತಿರುಚಿ ರಾಜ್ಯ ಸರ್ಕಾರಕ್ಕೆ ಸುಮಾರು 30ಸಾವಿರ ಕೋಟಿ ರೂಪಾಯಿಗಳಷ್ಟು ವಂಚನೆ ಮಾಡಿದೆ.

ಈ ದಾಖಲೆಗಳ ಆಧಾರದಲ್ಲಿಯೇ ಸುಪ್ರೀಂಕೋರ್ಟ್ ಯೋಜನೆ ಮುಂದುವರಿಸುವಂತೆ ಆದೇಶ ನೀಡಿರುವುದರಿಂದ ಅದರ ಅನುಷ್ಠಾನವನ್ನು ತಡೆಹಿಡಿಯಬೇಕು ಎಂದು ಮೂರ್ತಿ ಯವರು ಅರ್ಜಿಯಲ್ಲಿ ಕೋರಿದ್ದಾರೆ. ಇದೀಗ ನೈಸ್ ಕಂಪೆನಿಯ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೋರಾಟಕ್ಕೆ ಅನಂತಮೂರ್ತಿಯವರು ಸಾಥ್ ನೀಡಿದಂತಾಗಿದೆ.

ಮುಖ್ಯನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಪಿ.ಸದಾಶಿವಂ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿಯ ಮುಂದಿನ ವಿಚಾರಣೆಯನ್ನು ಸೆ.17ಕ್ಕೆ ನಿಗದಿ ಪಡಿಸಿದೆ.

ಸೋಮಶೇಖರ ರೆಡ್ಡಿ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ 1999ರ ಮೇ ತಿಂಗಳಿನಲ್ಲಿ ತಿರಸ್ಕರಿಸಿದ ಎರಡು ತಿಂಗಳ ನಂತರ ನೈಸ್ ಸಂಸ್ಥೆ ಕೆಲವು ಅಧಿಕಾರಿಗಳ ಜತೆ ಶಾಮೀಲಾಗಿ ಮೂಲಕ ದಾಖಲೆ ಪತ್ರಗಳನ್ನು ತಿರುಚಿದೆ.

ಅದರ ಆಧಾರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾದ ಟಿಪ್ಪಣಿಯಲ್ಲಿ ಮೂಲ ಚೌಕಟ್ಟು ಒಪ್ಪಂದದ ಪ್ರಕಾರ ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸ ಬೇಕಾಗಿರುವ ಜಮೀನಿನ ವಿಸ್ತೀರ್ಣವನ್ನು 14,255.7ಎಕರೆಗಳಿಂದ 11,966ಎಕರೆಗಳಿಗೆ ಇಳಿಸಿತ್ತು.

ಈ ರೀತಿ ಮೂಲ ಚೌಕಟ್ಟು ಒಪ್ಪಂದವನ್ನು ಮೀರಿ ಸುಮಾರು 30ಸಾವಿರ ಕೋಟಿ ರೂಪಾಯಿ ಮೌಲ್ಯದ 2289ಎಕರೆ ಜಮೀನನ್ನು ನೈಸ್ ಸಂಸ್ಥೆ ಹೆಚ್ಚುವರಿಯಾಗಿ ಪಡೆದಿದೆ ಎಂದು ಅರ್ಜಿದಾರರ ಪರ ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ಎಂ.ಎನ್. ಕೃಷ್ಣಮಣಿ ನ್ಯಾಯಾಲಯಕ್ಕೆ ವಿವರಿಸಿದರು.
ಮತ್ತಷ್ಟು
'ಗೋಕರ್ಣ ವಿವಾದ' ಹೈಕೋರ್ಟ್‌‌ಗೆ
ಮತ್ತೊಂದು ಕಣ್ಣನ್ನೂ ಕಿತ್ತುಕೊಂಡ ಮುದುಕಪ್ಪ..
ಉಪಚುನಾವಣೆ-ತೃತೀಯರಂಗದ ಜತೆ ಮೈತ್ರಿ:ಗೌಡ
ಬಿಜೆಪಿ ವಿರುದ್ಧ ಜಿ.ಟಿ.ದೇವೇಗೌಡ ಅಸಮಾಧಾನ
ಉಪಚುನಾವಣೆ-ಸರ್ಕಾರ ಹಣ ಬಿಡುಗಡೆಗೆ ಜೆಡಿಎಸ್ ಆಕ್ಷೇಪ
ಆಪರೇಶನ್ ಹಸ್ತ: ಮೊಯ್ಲಿಗೆ ಸದಾನಂದ ಗೌಡ ಸವಾಲ್